Advertisement

ಆಸೀಸ್‌ಗೆ ವೈಟ್‌ವಾಶ್‌ ಮುಖಭಂಗ

11:41 PM Mar 07, 2020 | Team Udayavani |

ಪೊಚೆಫ್ಸೂಮ್‌: ಬಲಿಷ್ಠ ಆಸ್ಟ್ರೇಲಿಯ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಅಪರೂಪದ ವೈಟ್‌ವಾಶ್‌ ಮುಖಭಂಗಕ್ಕೊಳಗಾಗಿದೆ. ಅದು ದಕ್ಷಿಣ ಆಫ್ರಿಕಾ ಎದುರಿನ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡಿತು.

Advertisement

ಶನಿವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಂದ ಕಾಂಗರೂಗಳನ್ನು ಕೆಡವಿತು.

ಮಾರ್ನಸ್‌ ಲಬುಶೇನ್‌ ಅವರ ಶತಕ ಸಾಹಸದಿಂದ (108) ಆಸ್ಟ್ರೇಲಿಯ 7 ವಿಕೆಟಿಗೆ 254 ರನ್‌ ಗಳಿಸಿದರೆ, ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ 4 ವಿಕೆಟಿಗೆ 258 ರನ್‌ ಬಾರಿಸಿ ಕ್ಲೀನ್‌ಸಿÌàಪ್‌ ಪೂರ್ಣಗೊಳಿಸಿತು. ಸ್ಮಟ್ಸ್‌ 84, ವೆರೇಯ್ನ 50 ಹಾಗೂ ಕ್ಲಾಸೆನ್‌ ಔಟಾಗದೆ 68 ರನ್‌ ಹೊಡೆದರು. ಸ್ಮಟ್ಸ್‌ ಪಂದ್ಯಶ್ರೇಷ್ಠ, ಕ್ಲಾಸೆನ್‌ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next