Advertisement

AUS vs SA; 416 ರನ್‌ ಪೇರಿಸಿದ ದಕ್ಷಿಣ ಆಫ್ರಿಕಾ; ಹೆನ್ರಿಕ್‌ ಕ್ಲಾಸೆನ್‌ 174

02:33 AM Sep 16, 2023 | Team Udayavani |

ಸೆಂಚುರಿಯನ್‌: ಏಕದಿನ ವಿಶ್ವಕಪ್‌ ಸಮೀಪಿಸುತ್ತಿದ್ದಂತೆಯೆ ವಿಶ್ವ ದರ್ಜೆಯ ತಂಡಗಳೆಲ್ಲ ತಮ್ಮ ಸಂಪೂರ್ಣ ತಾಕತ್ತು ಪ್ರದರ್ಶಿಸಲು ಪಣತೊಟ್ಟಂತಿದೆ. ಇದಕ್ಕೊಂದು ನಿದರ್ಶನ ಶುಕ್ರವಾರ ಸೆಂಚುರಿಯನ್‌ನ “ಸೂಪರ್‌ ಸ್ಪೋರ್ಟ್ಸ್ ಪಾರ್ಕ್‌’ನಲ್ಲಿ ಕಂಡುಬಂದಿದೆ. ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟಿಗೆ 416 ರನ್‌ ಪೇರಿಸಿದೆ.

Advertisement

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಹೆನ್ರಿಕ್‌ ಕ್ಲಾಸೆನ್‌ 174 ರನ್‌ ಬಾರಿಸಿ ಅಬ್ಬರಿಸಿದರು. ಅವರ ಈ ಸ್ಫೋಟಕ ಬ್ಯಾಟಿಂಗ್‌ ಕೇವಲ 83 ಎಸೆತಗಳಲ್ಲಿ ಬಂತು. ಸಿಡಿಸಿದ್ದು 13 ಸಿಕ್ಸರ್‌ ಹಾಗೂ ಇಷ್ಟೇ ಸಂಖ್ಯೆಯ ಬೌಂಡರಿ. ಡೇವಿಡ್‌ ಮಿಲ್ಲರ್‌ 82 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಕ್ಲಾಸೆನ್‌-ಮಿಲ್ಲರ್‌ 5ನೇ ವಿಕೆಟಿಗೆ 222 ರನ್‌ ರಾಶಿ ಹಾಕಿದರು. ಇದು ಏಕದಿನದ 6ನೇ ಅತೀ ದೊಡ್ಡ ಜತೆಯಾಟ.

ಏಕದಿನ ಇತಿಹಾಸದಲ್ಲಿ ತಂಡವೊಂದು 400 ರನ್‌ ಪೇರಿಸಿದ 22ನೇ ನಿದರ್ಶನ ಇದಾಗಿದೆ. ದಕ್ಷಿಣ ಆಫ್ರಿಕಾವೇ ಇಲ್ಲಿನ ಅಗ್ರಮಾನ್ಯ ತಂಡ. ಅದು 7 ಸಲ 400 ಪ್ಲಸ್‌ ರನ್‌ ಬಾರಿಸಿ ಭಾರತವನ್ನು ಹಿಂದಿಕ್ಕಿತು. ಭಾರತ 6 ಸಲ ಈ ಸಾಧನೆಗೈದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next