ಬ್ರಿಸ್ಬೇನ್: ಮಳೆಯಿಂದ ನಿರಂತರ ಅಡ್ಡಿಯಾಗಿರುವ 3 ನೇ ಟೆಸ್ಟ್ ಪಂದ್ಯ ಕೊನೆಯ 5 ನೇ ದಿನ ಡ್ರಾ ದಲ್ಲಿ ಅಂತ್ಯಗೊಂಡಿದೆ. 5 ಪಂದ್ಯಗಳ ಸರಣಿ ಈಗ 1-1 ಸಮಬಲಗೊಂಡಿದೆ.
5 ನೇ ದಿನದಾಟದಲ್ಲಿ ರೋಚಕ ಹಂತಕ್ಕೆ ಬಂದಿತ್ತು, ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯವಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸಿದ ಕಾರಣ ಪಂದ್ಯ ಕುತೂಹಲ ಕೆರಳಿಸಿತ್ತು.
ಆಸ್ಟ್ರೇಲಿಯ 89 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ರಣತಂತ್ರ ಮಾಡಿ ಡಿಕ್ಲೆರ್ ಮಾಡಿಕೊಂಡಿತು. ಭಾರತ 54 ಓವರ್‌ಗಳಲ್ಲಿ 275 ರನ್ ಬೇಕಾಗಿತ್ತು. ಮಳೆ ಅಡ್ಡಿಯಿಂದ ಭಾರತ 2.1 ಓವರ್ ಗಳನ್ನಷ್ಟೇ ಆಡಲು ಸಾಧ್ಯವಾಯಿತು. 152 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ಪಂದ್ಯ ಶ್ರೇಷ್ಠ ಎನಿಸಿಕೊಂಡರು.
ಬಿಗಿ ದಾಳಿ ನಡೆಸಿದ ಬುಮ್ರಾ 3 ವಿಕೆಟ್ ಕಿತ್ತರೆ, ಸಾಥ್ ನೀಡಿದ ಸಿರಾಜ್ ಮತ್ತು ಆಕಾಶ್ ದೀಪ್ ತಲಾ 2 ವಿಕೆಟ್ ಕಿತ್ತು ಆಸೀಸ್ ಬ್ಯಾಟರ್ ಗಳನ್ನು ನಿಯಂತ್ರಿಸಿದರು. ಹೆಡ್ 17, ಅಲೆಕ್ಸ್ ಕ್ಯಾರಿ ಔಟಾಗದೆ 20, ನಾಯಕ ಕಮಿನ್ಸ್ 22 ರನ್ ಹೊರತು ಉಳಿದ ಆಟಗಾರರು ಬೇಗನೆ ನಿರ್ಗಮಿಸುವಂತೆ ಮಾಡಲು ಭಾರತದ ಬೌಲರ್ ಗಳು ಯಶಸ್ವಿಯಾದರು.
ಮುಂದಿನ ಪಂದ್ಯಕ್ಕೆ ಹೆಡ್ ಅನುಮಾನ
ಟ್ರಾವಿಸ್ ಹೆಡ್ ತೊಡೆಸಂದು ನೋವಿನಿಂದ ಬಳಲುತ್ತಿದ್ದು, ಮುಂದಿನ ಟೆಸ್ಟ್‌ನಲ್ಲಿ ಅವರು ಆಡುವುದು ಅನಿಶ್ಚಿತವಾಗಿದೆ.
ಡಿಸೆಂಬರ್ 30(ಸೋಮವಾರ) ಮೆಲ್ಬೋರ್ನ್ ನಲ್ಲಿ 4 ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಸ್ಕೋರ್ ಪಟ್ಟಿ: ಆಸ್ಟ್ರೇಲಿಯ 445 ಮತ್ತು89 -7 ಡಿಕ್ಲೆರ್ , ಭಾರತ 260, 8