ಅಡಿಲೇಡ್ : ಭಾರತ – ಆಸ್ಟ್ರೇಲಿಯಾ ನಡುವಿನ ಮೊದಲ ಡೇ-ನೈಟ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಮೇಲುಗೈ ಸಾಧಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 244 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದ್ದ ಭಾರತ, ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ 191 ರನ್ ಗೆ
ಆಲೌಟ್ ಮಾಡಿ ಮಿಂಚಿತ್ತು.
ಆಸೀಸ್ ಪರ ಆರಂಭಿಕರಾಗಿ ಕ್ರೀಸ್ ಗಿಳಿದ ಮ್ಯಾಥ್ಯೂ ವೇಡ್ ಹಾಗೂ ಬರ್ನ್ಸ್ ಬುಮ್ರಾ ಬೌಲಿಂಗ್ ದಾಳಿಗೆ ವಿಕೆಟ್ ಒಪ್ಪಿಸಿದರು. ಇಬ್ಬರು ತಲಾ 8 ರನ್ ಪೇರಿಸಿದರು. ಮಾರ್ನಸ್ ಲಬುಶೇನ್ ಕೆಲ ಕಾಲ ಮೈದಾನದಲ್ಲಿ ನಿಂತು ತಂಡಕ್ಕೆ ಆಸರೆಯಾದರು. 47 ರನ್ ಗಳಿಸಿ ಉಮೇಶ್ ಯಾದವ್ ಎಸೆತದಲ್ಲಿ ಲಬುಶೇನ್ ವಿಕೆಟ್ ಒಪ್ಪಿಸಿದರು. ತಂಡದ ಪ್ರಮುಖ ಆಟಗಾರ ಸ್ಟೀವನ್ ಸ್ಮಿತ್ ಕೇವಲ 1 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಉಳಿದಂತೆ ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್,ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಹೀಗೆ ಆಸೀಸ್ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಂತು ಬೇರೂರಲು ಭಾರತೀಯ ಬೌಲರ್ ಗಳು ಅವಕಾಶ ಮಾಡಿಕೊಡಲಿಲ್ಲ. ಅಂತಿಮ ಹಂತದಲ್ಲಿ ನಾಯಕ ಟಿಮ್ ಪೇನ್ 73 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡುವ ಪ್ರಯತ್ನ ಮಾಡಿದರೂ ಸಹ ಆಟಗಾರರು ನೆರವಾಗಲಿಲ್ಲ.
ಭಾರತದ ಪರ ಅಶ್ವಿನ್ 4 ವಿಕೆಟ್ ಪಡೆದರೆ, ಉಮೇಶ್ ಯಾದವ್ 3 ವಿಕೆಟ್, ಬುಮ್ರಾ 2 ವಿಕೆಟ್ ಪಡೆದು ಮಿಂಚಿದರು.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ, ಪ್ರಾರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತ್ತು. ಪೃಥ್ವಿ ಶಾ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ 4 ರನ್ ಗಳಿಸಿ ಔಟ್ ಆದರು. 2ನೇ ದಿನದ ಅಂತ್ಯಕ್ಕೆ ಭಾರತ 9 ರನ್
ಗೆ 1 ವಿಕೆಟ್ ಕಳೆದುಕೊಂಡು 62 ರನ್ ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.