Advertisement

2nd T20: ಆಸೀಸ್ ಗೆ 236 ರನ್ ಗುರಿ ನೀಡಿದ ಟೀಮ್ ಇಂಡಿಯಾ

08:50 PM Nov 26, 2023 | Team Udayavani |

ತಿರುವನಂತಪುರಂ: ಇಲ್ಲಿನ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ 20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ ತಂಡ ಅಮೋಘ ಬ್ಯಾಟಿಂಗ್ ವೈಭವ ತೋರಿದ್ದು ಆಸ್ಟ್ರೇಲಿಯಾಕ್ಕೆ ಗೆಲ್ಲಲು 236 ರನ್ ಗಳ ಗುರಿ ಮುಂದಿಟ್ಟಿದೆ.

Advertisement

ಆರಂಭಿಕರಾದ ಯಶಸ್ವಿ ಜೈಸ್ವಾಲ್ 53 ರನ್ (25 ಎಸೆತ) , ರುತುರಾಜ್ ಗಾಯಕ್ವಾಡ್58ರನ್ (43 ಎಸೆತ) ಅಮೋಘ ಆಟವಾಡಿದರು. ಆಬಳಿಕ ಮತ್ತೆ ಅಬ್ಬರಿಸಿದ ಇಶಾನ್ ಕಿಶನ್ 52ರನ್ (32ಎಸೆತ), ನಾಯಕ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು. ಅಬ್ಬರಿಸಿದ ರಿಂಕು ಸಿಂಗ್ 9 ಎಸೆತಗಳಲ್ಲಿ 31 ರನ್ ಗಳಿಸಿ ಔಟಾಗದೆ ಉಳಿದರು. ತಿಲಕ್ ವರ್ಮ ಔಟಾಗದೆ 7 ರನ್ ಗಳಿಸಿದರು. 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು.

ಆಸೀಸ್ ಪರ ನಥನ್ ಎಲ್ಲಿಸ್ 3 ವಿಕೆಟ್ ಪಡೆದರು. ಮಾರ್ಕಸ್ ಸ್ಟೊಯಿನಿಸ್1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next