ಕೊಲಂಬೋ: ಇದೇ ವರ್ಷದ ಜೂನ್ ಮತ್ತು ಜುಲೈನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸ ಮಾಡಲಿದೆ. ಐದು ವರ್ಷಗಳ ಬಳಿಕ ಆಸೀಸ್ ಕ್ರಿಕೆಟ್ ತಂಡ ಲಂಕಾಗೆ ತೆರಳುತ್ತಿದ್ದು, ಮೂರು ಟಿ20, ಐದು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನಾಡಲಿದೆ.
ಕೊಲಂಬೊ, ಕ್ಯಾಂಡಿ ಮತ್ತು ಗಾಲೆ ಎಲ್ಲಾ ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಗಾಲೆ ಮೈದಾನದಲ್ಲೇ ಎರಡೂ ಟೆಸ್ಟ್ ಪಂದ್ಯಗಳು ನಡೆಯಲಿದೆ.
ಜೂನ್ 7ರಂದು ಪ್ರವಾಸ ಆರಂಭವಾಗಲಿದ್ದು, ಮೊದಲೆಡು ಟಿ20 ಪಂದ್ಯಗಳು ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆಯಲಿದೆ. ಮೂರನೇ ಟಿ20 ಮತ್ತು ಮೊದಲೆರಡು ಏಕದಿನ ಪಂದ್ಯಗಳು ಕ್ಯಾಂಡಿಯಲ್ಲಿ ನಡೆಯಲಿದೆ. ಉಳಿದ ಮೂರು ಏಕದಿನ ಪಂದ್ಯಗಳ ಆತಿಥ್ಯವನ್ನು ಮತ್ತೆ ಕೊಲಂಬೋ ವಹಿಸಲಿದೆ.
ಇದನ್ನೂ ಓದಿ:ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ಡೇಟ್ ಫಿಕ್ಸ್?
ಜೂನ್ 29ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಎರಡೂ ಪಂದ್ಯಗಳು ಗಾಲೆಯಲ್ಲಿ ನಡೆಯಲಿದೆ. ಈ ಹಿಂದೆ ಆಸೀಸ್ ತಂಡ ಲಂಕಾ ಪ್ರವಾಸ ಮಾಡಿದ್ದಾಗ ಲಂಕಾ 3-0 ಅಂತರದಿಂದ ಗೆದ್ದುಕೊಂಡಿತ್ತು.
“ಟಿ 20 ಸರಣಿಯು ಟಿ20 ವಿಶ್ವಕಪ್ ಗೆ ನಮ್ಮ ಸಿದ್ಧತೆಗಳಿಗೆ ಸಹಾಯವಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕ ಮತ್ತು 2023ರ ಏಕದಿನ ವಿಶ್ವಕಪ್ ನ್ನು ಗಮನದಲ್ಲಿಟ್ಟುಕೊಂಡು ಟೆಸ್ಟ್ ಮತ್ತು ಏಕದಿನ ಸರಣಿಗಳೂ ನಮಗೆ ಬಹುಮುಖ್ಯವಾಗಿದೆ” ಎಂದು ಶ್ರೀಲಂಕಾ ಕ್ರಿಕೆಟ್‌ನ ಸಿಇಒ ಆಶ್ಲೇ ಡಿ ಸಿಲ್ವಾ ಹೇಳಿದರು.