Advertisement

ಬಾಂಗ್ಲಾ  260 ಆಲೌಟ್‌; ಆಸ್ಟ್ರೇಲಿಯ 18ಕ್ಕೆ 3

11:00 AM Aug 28, 2017 | Team Udayavani |

ಢಾಕಾ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶವು ತಮಿಮ್‌ ಇಕ್ಬಾಲ್‌ ಮತ್ತು ಶಕಿಬ್‌ ಅಲ್‌ ಹಸನ್‌ ಅವರ ಅರ್ಧಶತಕದಿಂದಾಗಿ 260 ರನ್‌ ಪೇರಿಸಿ ಆಲೌಟಾಗಿದೆ. ಆಬಳಿಕ ಬಾಂಗ್ಲಾದ ದಾಳಿಗೆ ಕುಸಿದ ಆಸ್ಟ್ರೇಲಿಯ ದಿನದಾಟದ ಅಂತ್ಯಕ್ಕೆ ಕೇವಲ 18 ರನ್ನಿಗೆ ಮೂರು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ಆರಂಭದಲ್ಲಿಯೇ ಕುಸಿಯಿತು. 10 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ತಮಿಮ್‌ ಇಕ್ಬಾಲ್‌ ಮತ್ತು ಶಕಿಬ್‌ ಅಲ್‌ ಹಸನ್‌ ತಾಳ್ಮೆಯ ಆಟದಿಂದಾಗಿ ತಂಡ ಚೇತರಿಸಿಕೊಂಡಿತು. ನಾಲ್ಕನೇ ವಿಕೆಟಿಗೆ 155 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಅವರಿಬ್ಬರು ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿದರು.

ಆಸೀಸ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಇಕ್ಬಾಲ್‌ 144 ಎಸೆತಗಳಿಂದ 74 ರನ್‌ ಹೊಡೆದರೆ ಶಕಿಬ್‌ 84 ರನ್‌ ಗಳಿಸಿದರು. 133 ಎಸೆತ ಎದುರಿಸಿದ ಅವರು 11 ಬೌಂಡರಿ ಬಾರಿಸಿದರು. ಈ ಜೋಡಿ ಮುರಿದ ಬಳಿಕ ಬಾಂಗ್ಲಾ ಮತ್ತೆ ಕುಸಿಯತೊಡಗಿತಲ್ಲದೇ 260 ರನ್ನಿಗೆ ಆಲೌಟಾಯಿತು. ಪ್ಯಾಟ್‌ ಕಮಿನ್ಸ್‌, ನಥನ್‌ ಲಿಯೋನ್‌ ಮತ್ತು ಆ್ಯಸ್ಟನ್‌ ಅಗರ್‌ ತಲಾ ಮೂರು ವಿಕೆಟ್‌ ಕಿತ್ತರು.

ಬಾಂಗ್ಲಾದಂತೆ ಆಸ್ಟ್ರೇಲಿಯ ಕೂಡ ಆರಂಭದಲ್ಲಿ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿದೆ. ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ ಕಳೆದುಕೊಂಡಿದ್ದು 18 ರನ್‌ ಗಳಿಸಿದೆ. ವಾರ್ನರ್‌, ಖ್ವಾಜಾ ಮತ್ತು ನಥನ್‌ ಲಿಯೋನ್‌ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next