Advertisement

ಆ್ಯಶಸ್‌: ಆಸೀಸ್‌ ಎಚ್ಚರಿಕೆಯ ಆಟ

06:50 AM Dec 03, 2017 | |



Advertisement

ಅಡಿಲೇಡ್‌: ಮಳೆಯಿಂದ ಆಗಾಗ ಅಡಚಣೆಗೊಳಗಾದ ಅಡಿಲೇಡ್‌ನ‌ ಡೇ-ನೈಟ್‌ ಆ್ಯಶಸ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಎಚ್ಚರಿಕೆಯ ಆಟವಾಡಿದ ಆಸ್ಟ್ರೇಲಿಯ 4 ವಿಕೆಟಿಗೆ 209 ರನ್‌ ಗಳಿಸಿದೆ.

ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬೌಲಿಂಗ್‌ ಆಯ್ದುಕೊಂಡು ಉತ್ತಮ ಯಶಸ್ಸು ಕಾಣತೊಡಗಿತು. ಬಾನ್‌ಕ್ರಾಫ್ಟ್ (10), ವಾರ್ನರ್‌ (47), ಖ್ವಾಜಾ (53) ಮತ್ತು ಸ್ಮಿತ್‌ (40) ಈಗಾಗಲೇ ಔಟಾಗಿದ್ದಾರೆ. ಹ್ಯಾಂಡ್ಸ್‌ಕಾಂಬ್‌ (36) ಮತ್ತು ಮಾರ್ಷ್‌ (20) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್‌ ಪರ ಆ್ಯಂಡರ್ಸನ್‌, ವೋಕ್ಸ್‌ ಮತ್ತು ಮೊದಲ ಟೆಸ್ಟ್‌ ಆಡಲಿಳಿದ ಓವರ್ಟನ್‌ ಒಂದೊಂದು ವಿಕೆಟ್‌ ಉರುಳಿಸಿದರು. ಬಾನ್‌ಕ್ರಾಫ್ಟ್ ರನೌಟಾದರು.

Advertisement

Udayavani is now on Telegram. Click here to join our channel and stay updated with the latest news.

Next