Advertisement

Australia-Pakistan: ಪಿಂಕ್‌ ಟೆಸ್ಟ್‌ ಪಂದ್ಯದ ಸರದಿ

11:39 PM Jan 01, 2024 | Team Udayavani |

ಸಿಡ್ನಿ: ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ತಂಡಗಳು “ಪಿಂಕ್‌ ಟೆಸ್ಟ್‌ ಮ್ಯಾಚ್‌’ಗೆ ಸಜ್ಜಾಗಿವೆ. ಈ ಪಂದ್ಯ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನ‌ಲ್ಲಿ ಜ. 3ರಂದು ಆರಂಭವಾಗಲಿದೆ.

Advertisement

ಈ ಪಂದ್ಯದಲ್ಲಿ ಆಟಗಾರರು ಗುಲಾಲಿ ಬಣ್ಣದ ಕ್ಯಾಪ್‌ ಧರಿಸಲಿದ್ದಾರೆ. ಅಂದು ಆಸ್ಟ್ರೇಲಿಯನ್ನರದು “ಬ್ಯಾಗ್ಗಿ ಗ್ರೀನ್‌’ ಬದಲು “ಬ್ಯಾಗ್ಗಿ ಪಿಂಕ್‌ ಕ್ಯಾಪ್‌’ ಆಗಿರುತ್ತದೆ. ಕ್ರಿಕೆಟಿಗರ ಜೆರ್ಸಿ ಮೇಲಿನ ಬರಹಗಳೆಲ್ಲ ಪಿಂಕ್‌ ಬಣ್ಣದಲ್ಲಿರಲಿವೆ.

ಸಿಡ್ನಿಯಲ್ಲಿ ಆಡಲಾಗುವ ವರ್ಷದ ಮೊದಲ ಟೆಸ್ಟ್‌ ಪಂದ್ಯವನ್ನು “ಪಿಂಕ್‌ ಟೆಸ್ಟ್‌’ ಎಂದು ಕರೆಯಲಾಗುವುದು. ಆಸ್ಟ್ರೇಲಿಯದ ಮಾಜಿ ವೇಗಿ ಗ್ಲೆನ್‌ ಮೆಕ್‌ಗ್ರಾತ್‌ ಅವರ ಪತ್ನಿ, ಜೇನ್‌ ಮೆಕ್‌ಗ್ರಾತ್‌ ಅವರಿಗೆ ಈ ಪಂದ್ಯವನ್ನು ಅರ್ಪಿಸಲಾಗುತ್ತದೆ. ಅವರು ಸ್ತನ ಕ್ಯಾನ್ಸರ್‌ನಿಂದ ನಿಧನರಾಗಿದ್ದರು.

ಪಂದ್ಯದ 3ನೇ ದಿನ ಸಿಡ್ನಿ ಕ್ರೀಡಾಂಗಣದ “ಲೇಡಿಸ್‌ ಸ್ಟಾಂಡ್‌’ ತಾತ್ಕಾಲಿಕವಾಗಿ “ಜೇನ್‌ ಮೆಕ್‌ಗ್ರಾತ್‌ ಸ್ಟಾಂಡ್‌’ ಎಂದು ಕರೆಯಲ್ಪಡುತ್ತದೆ. ಅಂದು “ಜೇನ್‌ ಮೆಕ್‌ಗ್ರಾತ್‌ ಡೇ’ ಕೂಡ ಆಗಿರುತ್ತದೆ. ಜೇನ್‌ ಮೆಕ್‌ಗ್ರಾತ್‌ ನಿಧನ ಹೊಂದಿದ್ದು 2008ರಲ್ಲಿ. ಅಂದಿನಿಂದ “ಮೆಕ್‌ಗ್ರಾತ್‌ ಫೌಂಡೇಶನ್‌’ ಸ್ತನ ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸುತ್ತ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next