ಸಿಡ್ನಿ: ಐಪಿಎಲ್ ಮುಗಿಯುತ್ತಿದ್ದಂತೆಯೆ ಭಾರತ ಕ್ರಿಕೆಟ್ ತಂಡಕ್ಕೆ ಆಸ್ಟ್ರೇಲಿಯ ಪ್ರವಾಸ ಶುರುವಾಗಲಿದೆ. ಜ.19ರ ವರೆಗೆ ಭಾರತ ಪೂರ್ಣ ಪ್ರಮಾಣದ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಇಲ್ಲೊಂದು ವಿಶೇಷವಿದೆ. ಆಸ್ಟ್ರೇಲಿಯ ಕ್ರಿಕೆಟ್ ತಂಡ ವಿಶಿಷ್ಟ ಬಣ್ಣದ, ದೇಶೀಯತೆಯನ್ನು ಬಿಂಬಿಸುವ ಸಮವಸ್ತ್ರ ಧರಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ! ಆಸ್ಟ್ರೇಲಿಯದ ಬುಡಕಟ್ಟು ಸಮುದಾಯದ ಕ್ರಿಕೆಟಿಗರು ಮೊದಲ ಬಾರಿ ವಿದೇಶ ಪ್ರವಾಸ ಮಾಡಿ, ಕ್ರಿಕೆಟ್ ಆಡಿದ್ದನ್ನು ನೆನಪಿಸಿಕೊಳ್ಳಲು ಈ ಯತ್ನ. 1868ರಲ್ಲಿ ಆಸ್ಟ್ರೇಲಿಯ ಆಟಗಾರರು ಇಂಗ್ಲೆಂಡಿಗೆ ತೆರಳಿ, 47 ಪಂದ್ಯಗಳನ್ನು ಆಡಿದ್ದರು. ಆಗ ಸುದೀರ್ಘ ಮೂರು ತಿಂಗಳು ಅಲ್ಲೇ ಉಳಿದಿದ್ದರು.
ಈ ಸಮವಸ್ತ್ರದ ವಿನ್ಯಾಸ ಬಹಳ ವರ್ಣಮಯವಾಗಿದೆ. ಮುಂಭಾಗದ ಮಧ್ಯದಲ್ಲಿರುವ ದೊಡ್ಡ ವೃತ್ತ ಲಾರ್ಡ್ಸ್ ಮೈದಾನದ ಸಂಕೇತವಾಗಿದೆ. ನಡುವಿನ ಸಣ್ಣ ಸಣ್ಣ ವೃತ್ತಗಳು, ಮೊದಲ ತಂಡ ಇಂಗ್ಲೆಂಡ್ ಪ್ರವಾಸದ ವೇಳೆ ಎಲ್ಲೆಲ್ಲಿ ಆಡಿತು ಎಂಬುದನ್ನು ಸಂಕೇತಿಸುತ್ತದೆ.
ಇದನ್ನೂ ಓದಿ:ಐಪಿಎಲ್ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ನವೆಂಬರ್ 27ರಂದು ಮೊದಲ ಭಾರತ- ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭವಾಗಲಿದೆ. ಮೂರು ಏಕದಿನ, ಮೂರು ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.