Advertisement

ವೈಟ್‌ವಾಶ್‌ ಭೀತಿಯಲ್ಲಿ ಆಸೀಸ್‌

12:34 PM Feb 22, 2017 | Team Udayavani |

ಅಡಿಲೇಡ್‌: ಕೊನೆಯ ಎಸೆತದಲ್ಲಿ ಫ‌ಲಿತಾಂಶ ದಾಖಲಿಸಿದ ಮೊದಲೆರಡು ಟಿ-20 ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿದ ಶ್ರೀಲಂಕಾ, ಬುಧವಾರದ ಅಂತಿಮ ಪಂದ್ಯವನ್ನೂ ಗೆದ್ದು ಕ್ಲೀನ್‌ಸ್ವೀಪ್‌ ಸಾಹಸವೊಂದನ್ನು ಪ್ರದರ್ಶಿಸಲು ಸ್ಕೆಚ್‌ ಹಾಕಿದೆ. ಇನ್ನೊಂದೆಡೆ ದ್ವಿತೀಯ ದರ್ಜೆಯ ಆಸ್ಟ್ರೇಲಿಯ ತವರಿನಲ್ಲಿ ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಳ್ಳಲು ಭಾರೀ ಪ್ರಯತ್ನಕ್ಕೆ ಮುಂದಾಗಬೇಕಿದೆ. 

Advertisement

ಆಸ್ಟ್ರೇಲಿಯದ ಬಹುತೇಕ ಸ್ಟಾರ್‌ ಆಟಗಾರರೆಲ್ಲ ಭಾರತ ಪ್ರವಾಸದಲ್ಲಿದ್ದರೂ ತವರಿನ ಈ ಇನ್ನೊಂದು ಕಾಂಗರೂ ಪಡೆ ದುರ್ಬಲವಾಗಿದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಫಿಂಚ್‌, ಹೆಡ್‌, ಹೆನ್ರಿಕ್ಸ್‌, ಫಾಕ್ನರ್‌, ಕಮಿನ್ಸ್‌, ಝಂಪ ಅವರೆಲ್ಲ ಅಪಾಯಕಾರಿ ಆಟಗಾರರೇ. ಹಾಗೆಯೇ ಕೋಚಿಂಗ್‌ ವಿಭಾಗದಲ್ಲಿ ಲ್ಯಾಂಜರ್‌, ಪಾಂಟಿಂಗ್‌, ಗಿಲೆಸ್ಪಿ ಅವರಂಥ ಮಾಜಿ ಘಟಾನುಘಟಿಗಳಿದ್ದಾರೆ. 

ಹಾಗೆಯೇ ಸರಣಿ ಗೆದ್ದ ಶ್ರೀಲಂಕಾ ಅಮೋಘ ಪ್ರದರ್ಶನ ನೀಡಿದೆ ಎಂದ ರ್ಥವೂ ಅಲ್ಲ. ಎರಡೂ ಪಂದ್ಯಗಳಲ್ಲಿ ಆಸೀಸ್‌ ಗೆಲುವಿಗೆ ಅಡ್ಡಿಯಾಗಿ ನಿಂತ ವರು ಲಂಕೆಯ ಬ್ಯಾಟ್‌ Õಮನ್‌ ಅಸೇಲ ಗುಣರತ್ನೆ ಎಂಬುದನ್ನು ಮರೆಯ ಬಾರದು. ಮೆಲ್ಬರ್ನ್ ಹಾಗೂ ಗೀಲಾಂಗ್‌ನಲ್ಲಿ ನಡೆದ ಈ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಕ್ಕೂ ಗೆಲುವಿನ ಸಮಾನ ಅವಕಾಶವಿದ್ದಿತ್ತು. ಆದರೆ ಇಲ್ಲಿ ಟಿ-ಟ್ವೆಂಟಿಯ ನೈಜ ರೋಮಾಂಚನ ಗರಿಗೆದರಿತು.

ಅಂತಿಮ ಪಂದ್ಯದಲ್ಲಿ ಲಂಕಾ ಆರಂಭ ಕಾರ ನಿರೋಷನ್‌ ಡಿಕ್ವೆಲ್ಲ ಆಡುತ್ತಿಲ್ಲ. ಹಿಂದಿನ ಪಂದ್ಯದಲ್ಲಿ ಅಸಭ್ಯವಾಗಿ ವರ್ತಿಸಿದ ಅವರು 2 ಪಂದ್ಯಗಳ ನಿಷೇಧ ಕ್ಕೊಳಗಾಗಿದ್ದಾರೆ. ದಿಲ್ಶನ್‌ ಮುನವೀರ ಅವರಿಗೆ ಆರಂಭಿಕನಾಗಿ ಬಡ್ತಿ ಸಿಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next