Advertisement

ಕಾಳ್ಗಿಚ್ಚಿನ ಆರ್ಭಟಕ್ಕೆ ಬೆಂದ ಆಸ್ಟ್ರೇಲಿಯಾ

10:38 AM Jan 09, 2020 | mahesh |

ಕಳೆದ ಕೆಲವು ತಿಂಗಳಿಂದ ಆಸ್ಟ್ರೇಲಿಯಾದ ದಕ್ಷಿಣ ಕರಾವಳಿಯ ನ್ಯೂ ಸೌಥವೇಲ್ಸ್ ಹಾಗೂ ಕ್ವೀನ್ಸ್ ಲ್ಯಾಂಡ್ ಸಮೀಪದ ಕಾಡು ಹೊತ್ತಿ ಉರಿಯುತ್ತಿದೆ. ಈ ಬೆಂಕಿಯನ್ನು ನಂದಿಸಲು ಶ್ರಮಿಸಲಾಗುತ್ತಿದ್ದರೂ ಪೂರ್ಣ ಹತೋ ಟಿಗೆ ಬಂದಿಲ್ಲ. ಪರಿಣಾಮ ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ. ನಿರಂತರವಾಗಿ ವ್ಯಾಪಿಸಿದ ಕಾಳ್ಗಿಚ್ಚು ಸಾವಿರಾರು ಜನರ ಮನೆಯನ್ನು ಕಿತ್ತುಕೊಂಡಿದೆ. ಈ ಅವಘಡಕ್ಕೆ ಕಾರಣ, ನಷ್ಟ ಮೊದಲಾದ ಮಾಹಿತಿ ಇಲ್ಲಿದೆ.

Advertisement

ಏನು ಕಾರಣ
ಪೈರೋಕುಮುಲೋನಿಂಬಸ್‌ ಚಂಡಮಾರುತ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಸುಮಾರು 10 ಮೈಲುಗಳಷ್ಟು ದೂರಕ್ಕೆ ಬೆಂಕಿಯ ಕಣಗಳ ಕಿಡಿಯನ್ನು ವ್ಯಾಪಿಸುವ ಸಾಮರ್ಥ್ಯ ಹೊಂದಿದೆ.

ತೇವಾಂಶ ಕಡಿಮೆ
ಆಸ್ಟ್ರೇಲಿಯಾದಲ್ಲಿ ತಾಪಮಾನ ಇತರೆ ದೇಶಗಳಿಗಿಂತ 2 ಪಟ್ಟಿದೆ. ಆದರೆ ತೇವಾಂಶ ಪ್ರಮಾಣ ಕಡಿಮೆ ಇದೆ. ಸದ್ಯ ಅವಘಡ ಸಂಭವಿಸಿರುವ ಸ್ಥಳದಲ್ಲಿ ಒಣಮರಗಳು ಹೆಚ್ಚು ಇದ್ದವು.

ಬೌಗೋಳಿಕತೆ
ಆಗ್ನೇಯ ಆಸ್ಟ್ರೇಲಿಯಾದ ಶೇ.10ರಷ್ಟು ಬಂಜರು ಪ್ರದೇಶವಾಗಿದ್ದು, ನೈರುತ್ಯದಲ್ಲಿ ಶೇ.15ರಷ್ಟು ತೇವಾಂಶದ ಕಡಿಮೆ ಇದೆ. ಅಲ್ಲಿನ ಸರಾಸರಿ ವಾರ್ಷಿಕ ತಾಪಮಾ ನವು 1.5 ಡಿಗ್ರಿ ಸೆ. ಇದ್ದು, 90 ದಶಕದ ಸರಾಸರಿ ತಾಪಮಾನಕ್ಕಿಂತ ಹೆಚ್ಚಾಗಿದೆ.

ಎಲ್ಲೆಲ್ಲಿ ಇನ್ನೂ ಇವೆ
ವಿಕ್ಟೋರಿಯಾ, ನ್ಯೂಸೌತ್‌ ವೇಲ್ಸ್‌ ನ 150 ಪ್ರದೇಶಗಳು, ಕರಾವಳಿಯ ಅರಣ್ಯಗಳು, ಸಿಡ್ನಿ, ಮಲಕುಟಾ, ವೊಲೆ ಮಿ ನ್ಯಾಷನಲ್‌ ಪಾರ್ಕ್‌, ಪೋರ್ಟ್‌ ಮ್ಯಾಕ್ವಾರಿ, ನ್ಯೂಕ್ಯಾಸಲ್‌ ಮತ್ತು ಬ್ಲೂಮೌಂಟ್ಸ್‌ಗಳಲ್ಲಿ ಬೆಂಕಿ ಇನ್ನೂ ಇವೆ.

Advertisement

ನಷ್ಟವೆಷ್ಟು ?
48 ಕೋಟಿ ಪ್ರಾಣಿಗಳ ಮರಣ
2000 ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ
19.8 ಮಿಲಿಯನ್‌ ಹೆಕ್ಟೇರ್‌ ಭೂಮಿ ನಾಶ
ಸುಮಾರು 28 ಮಂದಿ ಬಲಿ

25 ಕೋಟಿ ಟನ್‌ ಇಂಗಾಲ
ಕಾಡಿನ ಬೆಂಕಿಯಿಂದಾಗಿ ವಿಪರೀತ ಪ್ರಮಾಣದ ಇಂಗಾಲದ ಆಕ್ಸೈಡ್‌ ವಾತಾವರಣವನ್ನು ಸೇರುತ್ತಿದೆ. ಒಂದು ಅಂದಾಜಿನ ಪ್ರಕಾರ ಈಗಾಗಲೇ 25 ಕೋಟಿ ಟನ್‌ ಇಂಗಾಲದ ಆಕ್ಸೈಡ್‌ ವಾತಾವರಣಕ್ಕೆ ಸೇರ್ಪಡೆಯಾಗಿದೆ. ಇದು 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಉತ್ಪಾದನೆಯಾದ ಒಟ್ಟಾರೆ ಇಂಗಾಲದ ಅಕ್ಸೈಡ್‌ನ‌ ಅರ್ಧದಷ್ಟು.

ಮಾನವನೂ ಕಾರಣ
ಜಾಗತಿಕ ತಾಪಮಾನ ವೈಪರೀತ್ಯದಿಂದ ವಿಶ್ವದ ನಾನಾ ದೇಶಗಳು ಬೆಂಕಿಯ ಕೆನ್ನಾಲಗೆ ಬಲಿಯಾಗಿದೆ. ಇದರಲ್ಲಿ ಮಾನವನ ಪಾಲು ಇದೆ. ಸ್ವಾರ್ಥಕ್ಕಾಗಿ ಕಾಡುಗಳ ವಿನಾಶ ಮಾಡುವ ಮೂಲಕ ಜಾಗತಿಕ ತಾಪಮಾನ ಏರಿಕೆ ಆಗುವುದಕ್ಕೆ ಮಾನವ ಪರೋಕ್ಷವಾಗಿ ಕಾರಣವಾಗುತ್ತಿದ್ದಾನೆ ಎಂದು ಸ್ಟ್ಯಾನ್‌ಫೋರ್ಡ್‌ ವಿ.ವಿ.ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next