Advertisement

ಆಸ್ಟ್ರೇಲಿಯಾ ಚುನಾವಣೆ: ಕೋಲಾರದ ಮಂಜುನಾಥ್‌ ಸ್ಪರ್ಧೆ

10:08 PM Oct 20, 2022 | Team Udayavani |

ಕೋಲಾರ: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಕೌನ್ಸಿಲ್‌ ಚುನಾವಣೆಯಲ್ಲಿ ಕೋಲಾರ ತಾಲೂಕಿನ ಮದನಹಳ್ಳಿ ರೈತ ಕುಟುಂಬದ ಮಂಜುನಾಥ್‌ ಹನುಮಂತರಾಯಪ್ಪ ಸ್ಪರ್ಧೆಗಿಳಿದು ಗಮನ ಸೆಳೆದಿದ್ದಾರೆ.

Advertisement

ಕೋಲಾರ ತಾಲೂಕಿನ ಮದನಹಳ್ಳಿಯ ರೈತ ಲೇಟ್‌ ಹನುಮಂತರಾಯಪ್ಪ ದಂಪತಿಯ  ಪುತ್ರರಾಗಿರುವ 39 ವರ್ಷದ ಮಂಜುನಾಥ್‌ 15 ವರ್ಷಗಳಿಂದಲೂ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನೆಲೆಸಿದ್ದು, ಸೇವಾ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದಾರೆ.

ವಿಕ್ಟೋರಿಯಾದಲ್ಲಿ ನ. 26ರಂದು ನಡೆಯಲಿರುವ ಚುನಾವಣೆಯ ಒಟ್ಟು 88 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಲೆಜಿಸ್ಲೇಟಿವ್‌ ಕೌನ್ಸಿಲ್‌ನ 40 ಅಭ್ಯರ್ಥಿಗಳು ಮೇಲ್ಮನೆಗೆ ಆಯ್ಕೆಯಾಗಬೇಕಿದ್ದು, ಲಿಬರಲ್‌ ಪಕ್ಷದ ಅಭ್ಯರ್ಥಿಯಾಗಿ ಸೌತ್‌ ಈಸ್ಟ್ರನ್‌ ಮೆಟ್ರೋಪಾಲಿಟಿನ್‌ ವಲಯದ ಕ್ಷೇತ್ರದಿಂದ ಮಂಜುನಾಥ್‌  ಸ್ಪರ್ಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next