Advertisement

ಸೂಚಿಸಿದರೆ ನಾನೂ ಚೆಂಡು ವಿರೂಪಗೊಳಿಸುತ್ತಿದ್ದೆ!

06:00 AM May 12, 2018 | Team Udayavani |

ಸಿಡ್ನಿ: ಒಂದು ವೇಳೆ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಜಾಗ ದಲ್ಲಿದ್ದರೆ ನಾನೂ ಕೂಡ ಚೆಂಡು ವಿರೂಪ ಮಾಡುತ್ತಿದ್ದೆ ಎಂದು ಆಸ್ಟ್ರೇಲಿಯ ತಂಡದ ನೂತನ ತರ ಬೇತುದಾರ ಜಸ್ಟಿನ್‌ ಲ್ಯಾಂಗರ್‌ ಹೇಳಿ ದ್ದಾರೆ. ಚಾನೆಲ್‌ 9ಗೆ ಸಂದರ್ಶನ ನೀಡಿದ ಅವರು ಬ್ಯಾನ್‌ಕ್ರಾಫ್ಟ್ ಪರಿಸ್ಥಿತಿಯ ಬಲಿಪಶು ಎಂದು ಸೂಚ್ಯ ವಾಗಿ ಹೇಳಿದ್ದಾರೆ.

Advertisement

“ನಾನು ಕ್ರಿಕೆಟ್‌ ಪ್ರವೇಶಿಸಿದ್ದಾಗ ಆಸ್ಟ್ರೇಲಿಯ ತಂಡದ ನಾಯಕರಾಗಿದ್ದ ಅಲನ್‌ ಬೋರ್ಡರ್‌ ಚೆಂಡು ವಿರೂಪ ಗೊಳಿಸುವಂತೆ ಹೇಳಿದ್ದರೆ ಇದನ್ನು ಪಾಲಿಸದೇ ಇರುವಷ್ಟು ಧೈರ್ಯ ನನಗಿರಲಿಲ್ಲ. ವ್ಯತ್ಯಾಸವೇನೆಂದರೆ, ಆಗ ಬೋರ್ಡರ್‌ ನನಗೆ ಹಾಗೆ ಹೇಳಲು ಸಾಧ್ಯವೇ ಇರಲಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ಅಂದಿನ ತರಬೇತುದಾರ ಬಾಬ್‌ ಸಿಂಪ್ಸನ್‌ ನನ್ನನ್ನು ಕೊಂದೇ ಬಿಡುತ್ತಿದ್ದರು. ಈಗ ನಿಷೇಧಕ್ಕೊಳಗಾಗಿರುವ ಬ್ಯಾನ್‌ಕ್ರಾಫ್ಟ್ ತಮ್ಮ ಪರಿಸ್ಥಿತಿಯಲ್ಲಿ ಆ ಕೃತ್ಯವನ್ನು ಎಸಗಲೇಬೇಕಾದ ಸ್ಥಿತಿಯಲ್ಲಿದ್ದರು…’ ಎಂದು ಲ್ಯಾಂಗರ್‌ ಹೇಳಿಕೊಂಡಿದ್ದಾರೆ. ಲ್ಯಾಂಗರ್‌ 1993ರಲ್ಲಿ ಆಸ್ಟ್ರೇಲಿಯ ತಂಡವನ್ನು ಪ್ರವೇಶಿಸಿದ್ದರು.

ತಿಂಗಳ ಹಿಂದೆ ಆಸ್ಟ್ರೇಲಿಯ ತಂಡದ ಅಂದಿನ ನಾಯಕ ಸ್ಟೀವ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌, ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಚೆಂಡು ವಿರೂಪ ಮಾಡಿದ್ದು ಜಗಜ್ಜಾಹೀರಾಗಿತ್ತು. ಪರಿಣಾಮ, ಈ ಮೂವರೂ ಈಗ ನಿಷೇಧಕ್ಕೊಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next