Advertisement
ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟ ಆಸ್ಟ್ರೇಲಿಯಾ ಕಪ್ತಾನ ಆರೋನ್ ಫಿಂಚ್ ನಿರ್ಧಾರ ಇನ್ನಿಂಗ್ಸ್ ನ ಪ್ರಾರಂಭದಲ್ಲೇ ಯಶ ಕಂಡಿತು. ರೋಹಿತ್ ಶರ್ಮಾ (10) ಅವರ ವಿಕೆಟ್ ತಂಡದ ಮೊತ್ತ 13 ರನ್ ಗಳಾಗುವಷ್ಟರಲ್ಲಿ ಬಿದ್ದಿತ್ತು. ಆದರೆ ಎರಡನೇ ವಿಕೆಟಿಗೆ ಧವನ್ ಮತ್ತು ರಾಹುಲ್ ಸೇರಿಕೊಂಡು ನಿಧಾನಗತಿಯಲ್ಲಿ ತಂಡದ ಮೊತ್ತವನ್ನು ಏರಿಸುತ್ತಾ ಹೋದರು. ಈ ಸಂದರ್ಭದಲ್ಲಿ ಮೊತ್ತ 134 ಆಗಿದ್ದಾಗ 61 ಎಸೆತೆಗಳಲ್ಲಿ 47 ರನ್ ಮಾಡಿದ್ದ ರಾಹುಲ್ ಔಟಾದರು. ಈ ಜೋಡಿ 121 ರನ್ ಗಳ ಜೊತೆಯಾಟವನ್ನು ನೀಡಿದರು.ಆದರೆ ರಾಹುಲ್ ಔಟಾದ ಬೆನ್ನಲ್ಲೇ 74 ರನ್ ಮಾಡಿ ಉತ್ತುಮವಾಗಿ ಆಡುತ್ತಿದ್ದ ಶಿಖರ್ ಧವನ್ ಔಟಾದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ (16), ಮತ್ತು ಶ್ರೇಯಸ್ ಅಯ್ಯರ್ (04) ಮಿಂಚಲು ವಿಫಲರಾದರು.
Related Articles
ಇನ್ನಿಂಗ್ಸ್ ನ ಪ್ರಾರಂಭದಿಂದಲೇ ಬಿಗು ದಾಳಿ ಸಂಘಟಿಸಿದ ಆಸೀಸ್ ತ್ರಿವಳಿ ವೇಗಿಗಳು ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ನಿಡಿಯಲು ಅವಕಾಶವನ್ನೇ ನೀಡಲಿಲ್ಲ. ಅನುಭವಿ ವೇಗಿ ಮಿಶೆಲ್ ಸ್ಟಾರ್ಕ್ 03 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಮತ್ತು ಕೇನ್ ರಿಚರ್ಡ್ಸನ್ ತಲಾ 02 ವಿಕೆಟ್ ಪಡೆದರೆ, ಸ್ಪಿನ್ನರ್ ಗಳಾದ ಆ್ಯಡಂ ಝಂಪ ಮತ್ತು ಆಶ್ಟನ್ ಆ್ಯಗರ್ ತಲಾ 01 ವಿಕೆಟ್ ಪಡೆದರು.
Advertisement