Advertisement

ಟಿ20: ವನಿತೆಯರಿಗೆ ಸೋಲು; ಆಸೀಸ್‌ 1-0 ಮುನ್ನಡೆ

11:30 PM Oct 09, 2021 | Team Udayavani |

ಗೋಲ್ಡ್‌ ಕೋಸ್ಟ್‌: ಸಣ್ಣ ಮೊತ್ತದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತದ ವನಿತೆಯರು ಆತಿಥೇಯ ಆಸ್ಟ್ರೇಲಿಯಕ್ಕೆ 4 ವಿಕೆಟ್‌ಗಳಿಂದ ಶರಣಾಗಿದ್ದಾರೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಆಸೀಸ್‌ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 9 ವಿಕೆಟಿಗೆ ಕೇವಲ 118 ರನ್‌ ಗಳಿಸಿದರೆ, ಆಸ್ಟ್ರೇಲಿಯ 19.1 ಓವರ್‌ಗಳಲ್ಲಿ 6 ವಿಕೆಟಿಗೆ 119 ರನ್‌ ಮಾಡಿ ಗುರಿ ಮುಟ್ಟಿತು.

ಅಗ್ರ ಕ್ರಮಾಂಕದ ತೀವ್ರ ಕುಸಿತದಿಂದಾಗಿ ಭಾರತಕ್ಕೆ ಸವಾಲಿನ ಮೊತ್ತ ಪೇರಿಸಲಾಗಲಿಲ್ಲ. ಮಂಧನಾ (1), ಶಫಾಲಿ ವರ್ಮ (3) ಮತ್ತು ಜೆಮಿಮಾ ರೋಡ್ರಿಗಸ್‌ (7) 24 ರನ್‌ ಆಗುವಷ್ಟರಲ್ಲಿ ವಾಪಸಾದರು.  ಲೆಮೆನಿಕ್‌ ಮೊದಲ ಓವರ್‌ನಲ್ಲೇ ಮಂಧನಾ ವಿಕೆಟ್‌ ಹಾರಿಸಿದರು. ತಮ್ಮ ಮುಂದಿನ ಓವರ್‌ನಲ್ಲಿ ಶಫಾಲಿಗೆ ಪೆವಿಲಿಯನ್‌ ಹಾದಿ ತೋರಿಸಿದರು.

81ಕ್ಕೆ ಕೌರ್‌ ಪಡೆಯ 9 ವಿಕೆಟ್‌ ಉರುಳಿತ್ತು. ಕೊನೆಯ ಹಂತದಲ್ಲಿ ಪೂಜಾ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ್ದರಿಂದ ಮೊತ್ತ ನೂರರ ಗಡಿ ದಾಟಿತು. ಪೂಜಾ 26 ಎಸೆತಗಳಿಂದ ಅಜೇಯ 37 ರನ್‌ ಬಾರಿಸಿದರು (3 ಬೌಂಡರಿ, 2 ಸಿಕ್ಸರ್‌). ಕೌರ್‌ 28, ದೀಪ್ತಿ 16 ರನ್‌ ಮಾಡಿದರು.
ಚೇಸಿಂಗ್‌ ವೇಳೆ ಆಸೀಸ್‌ 71ಕ್ಕೆ 5 ವಿಕೆಟ್‌ ಉದುರಿಸಿ ಕೊಂಡಾಗ ಪಂದ್ಯಕ್ಕೆ ಮರಳುವ ಅವಕಾಶವೊಂದು ಭಾರತದ ಮುಂದಿತ್ತು. ರಾಜೇಶ್ವರಿ ಗಾಯಕ್ವಾಡ್‌ ಘಾತಕ ಸ್ಪೆಲ್‌ ನಡೆಸಿದ್ದರು. ಆದರೆ ಟಹ್ಲಿಯಾ ಮೆಗ್ರಾತ್‌ ಅಜೇಯ 42 ರನ್‌ (33 ಎಸೆತ, 6 ಬೌಂಡರಿ) ಬಾರಿಸಿ ಆಸ್ಟ್ರೇಲಿಯದ ಗೆಲುವನ್ನು ಸಾರಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇದನ್ನೂ ಓದಿ:ಕಲ್ಲಿದ್ದಲು ಕೊರತೆ ನಿವಾರಿಸಲು ತಕ್ಷಣ ಕೇಂದ್ರ ಸ್ಪಂದನೆ : ಸುನಿಲ್‌ಕುಮಾರ್‌

Advertisement

ಸಂಕ್ಷಿಪ್ತ ಸ್ಕೋರ್‌: ಭಾರತ-9 ವಿಕೆಟಿಗೆ 118 (ಪೂಜಾ ಔಟಾಗದೆ 37, ಕೌರ್‌ 28, ದೀಪ್ತಿ 16, ಮೊಲಿನಾಕ್ಸ್‌ 11ಕ್ಕೆ 2, ಲೆಮೆನಿಕ್‌ 18ಕ್ಕೆ 2). ಆಸ್ಟ್ರೇಲಿಯ-19.1 ಓವರ್‌ಗಳಲ್ಲಿ 6 ವಿಕೆಟಿಗೆ 119 (ಮೆಗ್ರಾತ್‌ ಔಟಾಗದೆ 42, ಮೂನಿ 34, ಲ್ಯಾನಿಂಗ್‌ 15, ರಾಜೇಶ್ವರಿ 21ಕ್ಕೆ 3, ಕೌರ್‌ 9ಕ್ಕೆ 1). ಪಂದ್ಯಶ್ರೇಷ್ಠ: ಟಹ್ಲಿಯಾ ಮೆಗ್ರಾತ್‌.

Advertisement

Udayavani is now on Telegram. Click here to join our channel and stay updated with the latest news.

Next