Advertisement

ಸೆಮಿ ಫೈನಲ್‌ ಪಂದ್ಯದಲ್ಲಿ ಭಾರತ ಕನಿಷ್ಠ 180 ರನ್‌ ಅಗತ್ಯ: ರಿಚಾ ಘೋಷ್‌

11:13 PM Feb 22, 2023 | Team Udayavani |

ಕೇಪ್‌ ಟೌನ್‌: ಆಸ್ಟ್ರೇಲಿಯ ವಿರುದ್ಧದ ಸೆಮಿ ಫೈನಲ್‌ ಪಂದ್ಯದಲ್ಲಿ ಭಾರತ ಕನಿಷ್ಠ 180 ರನ್‌ ಗಳಿಸಬೇಕಾದ ಅಗತ್ಯವಿದೆ ಎಂಬುದಾಗಿ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಚಾ ಘೋಷ್‌ ಹೇಳಿದ್ದಾರೆ.

Advertisement

ಆಸೀಸ್‌ ಬ್ಯಾಟಿಂಗ್‌ ಸರದಿ ಅಷ್ಟೊಂದು ಆಳ ಹಾಗೂ ಬಲಿಷ್ಠ ಎಂಬುದು ರಿಚಾ ಅಭಿಪ್ರಾಯ.
“ಆಸ್ಟ್ರೇಲಿಯ ಎಷ್ಟೇ ದೊಡ್ಡ ಮೊತ್ತವನ್ನಾದರೂ ಚೇಸ್‌ ಮಾಡಿ ಗೆಲ್ಲಬಲ್ಲದು. ಅವರ ಬ್ಯಾಟಿಂಗ್‌ ಲೈನ್‌ಅಪ್‌ ಅಷ್ಟೊಂದು ಬಲಿಷ್ಠವಾಗಿದೆ. ಎಲ್ಲರೂ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೆ ಟಾಸ್‌ ಗೆಲುವು ಯಾರ ಕೈಯಲ್ಲೂ ಇಲ್ಲ. ಅಕಸ್ಮಾತ್‌ ನಮಗೆ ಮೊದಲು ಬ್ಯಾಟಿಂಗ್‌ ಲಭಿಸಿದರೆ ನಮ್ಮ ಯೋಜನೆಯಂತೆ ಬ್ಯಾಟಿಂಗ್‌ ನಡೆಸಲಿದ್ದೇವೆ’ ಎಂಬುದಾಗಿ ರಿಚಾ ಘೋಷ್‌ ಹೇಳಿದರು.

“ಪಿಚ್‌ ಹೇಗೆ ವರ್ತಿಸೀತು ಎಂಬುದು ನಮಗೆ ತಿಳಿದಿಲ್ಲ. ನಮ್ಮೆಲ್ಲ ಬ್ಯಾಟರ್‌ಗಳೂ ಯಶಸ್ಸು ಸಾಧಿಸಬೇಕಿದೆ. 180 ರನ್‌ ಪೇರಿಸುವ ಯೋಜನೆ ನಮ್ಮದು. ಒಂದು ವೇಳೆ ಮೊದಲು ಬೌಲಿಂಗ್‌ ಸಿಕ್ಕಿದರೆ ಆಸ್ಟ್ರೇಲಿಯವನ್ನು 140-150ರ ಗಡಿಯಲ್ಲಿ ಹಿಡಿದು ನಿಲ್ಲಿಸಬೇಕಿದೆ’ ಎಂದರು.

ಪಂದ್ಯಾವಳಿಯಲ್ಲಿ ತಮ್ಮ ಬ್ಯಾಟಿಂಗ್‌ ಬಗ್ಗೆ ಮಾತಾಡಿದರಿಚಾ ಘೋಷ್‌, “ಏರಿಳಿತ ಸಹಜ. ನಾನೂ ಇದಕ್ಕೆ ಹೊರತಲ್ಲ. ಪರಿಸ್ಥಿತಿಯನ್ನು ಗಮನಿಸಿ ಆಡುವುದು ಮುಖ್ಯ. ಒತ್ತಡವನ್ನು ನಿಭಾಯಿಸಿ ನಿಲ್ಲುವುದು ಇನ್ನೂ ಮುಖ್ಯ. ಈ ವಿಷಯದಲ್ಲಿ ನಾನು ಹೆಚ್ಚಿನ ಸುಧಾರಣೆ ಕಂಡಿದ್ದೇನೆ ಎನ್ನಬಹುದು’ ಎಂದರು.

ಒಂದೇ ಸೋಲು…
ಆಸ್ಟ್ರೇಲಿಯ ಕಳೆದ 22 ತಿಂಗಳ ಅವಧಿಯಲ್ಲಿ ಕೇವಲ ಒಂದು ಪಂದ್ಯದಲ್ಲಷ್ಟೇ ಸೋತಿದೆ, ಆ ಸೋಲು ಭಾರತದ ಎದುರು ಬಂದಿದೆ ಎನ್ನುತ್ತದೆ ಅಂಕಿಅಂಶ. ಆದರೆ ಆಸ್ಟ್ರೇಲಿಯ ಸೋಲಿಸಲಾಗದ ತಂಡವೇನಲ್ಲ ಎನ್ನುತ್ತಾರೆ ರಿಚಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next