Advertisement

ಭಾರತದ ಆಸೀಸ್‌ ಪ್ರವಾಸಕ್ಕೆ ತೊಂದರೆ

10:18 AM Mar 31, 2020 | Sriram |

ಹೊಸದಿಲ್ಲಿ: ಕೋವಿಡ್-19 ವೈರಸ್‌ನ ಅಟ್ಟಹಾಸದಿಂದಾಗಿ ಆಸ್ಟ್ರೇಲಿಯ ಸರಕಾರವು ಮುಂದಿನ ಆರು ತಿಂಗಳು ತನ್ನ ಗಡಿಗಳನ್ನು ಮುಚ್ಚಿಸುವ ನಿರ್ಧಾರ ತೆಗೆದುಕೊಂಡರೆ ಮುಂಬರುವ ಆಸ್ಟ್ರೇಲಿಯ ಪ್ರವಾಸ ಸಹಿತ ಭಾರತದ ಫ್ಯೂಚರ್ ಟೂರ್ ಪ್ರೋಗ್ರಾಮ್‌ (ಎಫ್ಟಿಪಿ)ಗೆ ಬಹಳಷ್ಟು ತೊಂದರೆಯಾಗಲಿದೆ.

Advertisement

ಭಾರತದ ಆಸ್ಟ್ರೇಲಿಯ ಪ್ರವಾಸವು ಅಕ್ಟೋಬರ್‌ನಲ್ಲಿ ಟಿ20 ತ್ರಿಕೋನ ಸರಣಿಯೊಂದಿಗೆ ಆರಂಭವಾಗಲಿದ್ದು ಡಿಸೆಂಬರ್‌ನಲ್ಲಿ ಟೆಸ್ಟ್‌ ಸರಣಿಯೊಂದಿಗೆ ಕೊನೆಗೊಳ್ಳಲಿದೆ. ಈ ನಡುವೆ ಅಕ್ಟೋಬರ್‌ 18ರಿಂದ ಟಿ20 ವಿಶ್ವಕಪ್‌ ಆಸ್ಟ್ರೇಲಿಯದಲ್ಲಿ ನಡೆಯಲಿದೆ. ಕೋವಿಡ್-19ದಿಂದಾಗಿ ವಿಶ್ವದೆಲ್ಲೆಡೆ ಆರೋಗ್ಯ ಸಮಸ್ಯೆ ಉದ್ಭವಿಸಿದ್ದರಿಂದ ವಿಶ್ವಕಪ್‌ ಕೂಡ ನಡೆಯುವುದು ಅನುಮಾನವೆಂದು ಹೇಳಲಾಗುತ್ತದೆ.

ಕೋವಿಡ್-19ದಿಂದಾಗಿ ಆಸ್ಟ್ರೇಲಿಯದಲ್ಲಿ ಈಗಾಗಲೇ 16 ಮಂದಿ ಸಾವನ್ನಪ್ಟಿದ್ದು 2 ಸಾವಿರ ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಹೀಗಾಗಿ ಸರಕಾರವು ತನ್ನ ಗಡಿಯನ್ನು ಮುಚ್ಚಿದೆ.

ಬದಲಿ ಯೋಜನೆ ಅಗತ್ಯ
ಕೋವಿಡ್-19ದಿಂದಾಗಿ ಸೌರವ್‌ ಗಂಗೂಲಿ ನೇತೃತ್ವದ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಮುಂಬರುವ ಸರಣಿಗಳಿಗಾಗಿ ಬದಲಿ ಯೋಜನೆ ರೂಪಿಸುವ ಅಗತ್ಯವಿದೆ. ಈ ವರ್ಷದ ಐಪಿಎಲ್‌ ಇನ್ನೂ ಅಂತಿಮ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿಲ್ಲ. ಅಂತಾರಾಷ್ಟ್ರೀಯ ಕ್ಯಾಲೆಂಡರ್‌ ಇನ್ನೊಂದು ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ (ಏಕದಿನ ಮತ್ತು ಟಿ20), ಜಿಂಬಾಬ್ವೆ, ಏಶ್ಯಕಪ್‌ (ಟಿ20) ಮತ್ತು ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಬಿಳಿ ಚೆಂಡಿನ ಸರಣಿ ನಡೆಯಲಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next