Advertisement

ಬಿಲ್ಗಾರಿಕೆ ವಿಶ್ವಕಪ್‌: ವನಿತಾ ತಂಡಕ್ಕೆ ಹ್ಯಾಟ್ರಿಕ್‌ ಚಿನ್ನ

11:50 PM Jun 22, 2024 | Team Udayavani |

ಅಂತಾಲ್ಯ (ಟರ್ಕಿ): ಇಲ್ಲಿ ನಡೆದ ಆರ್ಚರಿ ವಿಶ್ವಕಪ್‌ ಕೂಟದಲ್ಲಿ ಜ್ಯೋತಿ ಸುರೇಖ, ಅದಿತಿ ಸ್ವಾಮಿ ಮತ್ತು ಪರ್ಣೀತ್‌ ಕೌರ್‌ ಅವರನ್ನೊಳಗೊಂಡ ಮಹಿಳಾ ಕಾಂಪೌಂಡ್‌ ತಂಡ ಚಿನ್ನದ ಪದಕ ಗೆದ್ದಿದೆ. ಈ ಮೂಲಕ ಆರ್ಚರಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಚಿನ್ನದ ಪದಕ ಜಯಿಸಿದ ಸಾಧನೆಗೆ ಪಾತ್ರವಾಗಿದೆ.

Advertisement

ಶನಿವಾರ ನಡೆದ ಮೂರನೇ ಹಂತದ ಸ್ಪರ್ಧೆಯಲ್ಲಿ ಲಿಸೆಲ್‌ ಜಾತ್ಮಾ, ಮೀರಿ ಮರಿಟಾ ಪಾಸ್‌ ಮತ್ತು ಮಾರಿಸ್‌ ಟೆಟ್ಸ್‌ ಮನ್‌ ಅವರನ್ನೊಳಗೊಂಡ ಎಸ್ತೋನಿಯಾ ತಂಡವನ್ನು 232-229 ಅಂತರದಿಂದ ಸೋಲಿಸುವ ಮೂಲಕ ಭಾರತೀಯ ತಂಡ ಚಿನ್ನಕ್ಕೆ ಕೊರಳೊಡ್ಡಿತು. ಚೀನದ ಶಾಂಘೈ ಮತ್ತು ದಕ್ಷಿಣ ಕೊರಿಯಾದ ಯೆಚಿಯಾನ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಹಂತ-1 ಮತ್ತು ವಿಶ್ವಕಪ್‌ ಹಂತ-2ರಲ್ಲೂ ಭಾರತದ ಮಹಿಳಾ ಕಾಂಪೌಂಡ್‌ ತಂಡ ಬಂಗಾರ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next