Advertisement
ರಾಮ ಮಂದಿರ ಭೂಮಿ ಪೂಜೆ ಪೂರ್ವ ಸಿದ್ದತೆಯಾಗಿ ಸೊಮವಾರ 21 ಅರ್ಚಕರು ವಿಘ್ನವಿನಾಶಕ ಗಣಪತಿ ಪೂಜೆ ನಡೆಸಿದ್ದಾರೆ. ಇಂದು ಅಯೋಧ್ಯೆಯ ಹನುಮಂತ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ.
Related Articles
Advertisement
ನಾಳೆಯ ಭೂಮಿ ಪೂಜೆ ಕಾರ್ಯಕ್ರಮಕ್ಕೆ ದೇಶಾದ್ಯಂತ 175 ಜನರಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ 135 ಮಂದಿ ವಿವಿಧ ಸಾಧು ಸಂತರು, ಸ್ವಾಮೀಜಿಗಳು ಇರಲಿದ್ದಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಐವರು ಇರಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ ಮಹಾರಾಜ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೇದಿಕೆಯಲ್ಲಿರಲಿದ್ದಾರೆ.
ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಭೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದ್ದಾರೆ. ಬುಧವಾರದ ಕಾರ್ಯಕ್ರಮವನ್ನು ಅವರು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಇದು ನವ ಭಾರತಕ್ಕೆ ಅಡಿಪಾಯ ಎಂದು ಆದಿತ್ಯನಾಥ್ ವ್ಯಾಖ್ಯಾನಿಸಿದ್ದಾರೆ.