Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 288 ರನ್‌ಗಳಿಸಿ ಕೊಹ್ಲಿ ಪಡೆಗೆ ಗೆಲ್ಲಲು 289 ರನ್‌ಗಳ ಸವಾಲು ಮುಂದಿಟ್ಟಿತ್ತು. ಆದರೆ ಆರಂಭದಲ್ಲೇ ಭಾರೀ ಅಘಾತಕ್ಕೆ ಸಿಲುಕಿದ ತಂಡ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಹೊರತಾಗಿಯೂ ಸೋಲು ಒಪ್ಪಲೇ ಬೇಕಾಯಿತು. ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 254 ರನ್‌ಗಳಿಸಲಷ್ಟೇ ಶಕ್ತವಾಯಿತು.
Related Articles
Advertisement
ನೆಲಕಚ್ಚಿ ಆಟವಾಡಿದ ಧೋನಿ 96 ಎಸೆತಗಳಿಂದ 51 ರನ್‌ಗಳಿಸಿದ್ದ ವೇಳೆ ಔಟಾಗಿ ನಿರಾಸೆಗೊಳಗಾದರು. ದಿನೇಶ್ ಕಾರ್ತಿಕ್ 12, ರವೀಂದ್ರ ಜಡೇಜಾ 8 , ಭುವನೇಶ್ವರ್ ಕುಮಾರ್ 29 ರನ್ ಅಜೇಯ, ಕುಲದೀಪ್ ಯಾದವ್ 3 ಮತ್ತು ಮೊಹಮದ್ ಶಮಿ 1 ರನ್‌ಗಳಿಸಿ ಔಟಾದರು.
ಆಸೀಸ್ ಪರ ಜೇ ರಿಚರ್ಡ್‌ಸನ್ 4 ವಿಕೆಟ್ ಕಿತ್ತು ಗಮನ ಸೆಳೆದರು. ಜಾಸನ್ ಬೆಹೆಂಡಾಫ್ì ಮತ್ತು ಮಾರ್ಕಸ್ ಸ್ಟೊಯ್‌ನಿಸ್ ಅವರು ತಲಾ 2 ವಿಕೆಟ್ ಪಡೆದರು. ಪೀಟರ್ ಸಿಡ್ಲ್ 1 ವಿಕೆಟ್ ಪಡೆದರು.
ಆಸೀಸ್ ಭರ್ಜರಿ ಬ್ಯಾಟಿಂಗ್
8 ರನ್‌ಗೆ ಅರೋನ್ ಫಿಂಚ್ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಅಘಾತಕ್ಕೆ ಸಿಲುಕಿದ ಆಸೀಸ್ ನಂತರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಅಲೆಕ್ಸ್ ಕ್ರೆ 24 , ಉಸ್ಮಾನ್ ಖ್ವಾಜಾ 59, ಶಾನ್ ಮಾರ್ಶ್ 54, ಪೀಟರ್ ಹ್ಯಾಂಡ್ಸ್‌ಕೂಂಬ್ 73, ಮಾರ್ಕಸ್ ಸ್ಟೊಯ್‌ನಿಸ್ ಅಜೇಯ 47 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 11 ರನ್ ಗಳಿಸಿದರು.
ಭಾರತದ ಬೌಲರ್‌ಗಳ ಪರ ಭುವನೇಶ್ವರ್ ಕುಮಾರ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.