Advertisement

ಐಪಿಎಲ್‌ ಟೂರ್ನಿ ನಡೆದರೆ ಕಾಂಗರೂ ಕ್ರಿಕೆಟಿಗರು ಭಾಗಿ

01:14 AM Jul 10, 2020 | Sriram |

ಮೆಲ್ಬರ್ನ್: ಈ ವರ್ಷ ಐಪಿಎಲ್‌ ನಡೆದರೆ ಆಸ್ಟ್ರೇಲಿಯದ ಕ್ರಿಕೆಟಿಗರು ಇದರಲ್ಲಿ ಪಾಲ್ಗೊಳ್ಳಬಹುದು ಎಂದು “ಕ್ರಿಕೆಟ್‌ ಆಸ್ಟ್ರೇಲಿಯ’ (ಸಿಎ) ಹೇಳಿದ್ದಾಗಿ ವರದಿಯಾಗಿದೆ.

Advertisement

ಕ್ರಿಕೆಟ್‌ ಆಸ್ಟ್ರೇಲಿಯ ನಿರಾಕ್ಷೇಪಣ ಪತ್ರ ನೀಡಿದರಷ್ಟೇ ನಾವು ಐಪಿಎಲ್‌ನಲ್ಲಿ ಆಡುವ ಬಗ್ಗೆ ಯೋಚಿಸಬಹುದು ಎಂದು ಏಕದಿನ ತಂಡದ ನಾಯಕ ಆರನ್‌ ಫಿಂಚ್‌ ಹೇಳಿಕೆ ನೀಡಿದ ಒಂದೇ ದಿನದಲ್ಲಿ ಇಂಥದೊಂದು ಸುದ್ದಿ ಬಿತ್ತರಗೊಂಡಿದೆ.

ಇದಕ್ಕೂ ಮುನ್ನ ಸೆಪ್ಟಂಬರ್‌ನಲ್ಲಿ ಆಸ್ಟ್ರೇಲಿಯ ಕ್ರಿಕೆಟ್‌ತಂಡ ಇಂಗ್ಲೆಂಡಿಗೆ ಪ್ರವಾಸ ತೆರಳಲಿದೆ. ಇದು ಮುಗಿದ ಬಳಿಕ ಐಪಿಎಲ್‌ನಲ್ಲಿ ಆಡುವ ಬಗ್ಗೆ ಯೋಜನೆ ಹಾಕಿಕೊಳ್ಳಬಹುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯ ಹೇಳಿದೆ ಎ‡ನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next