Advertisement

ಆ.25:ಪಡುಬಿದ್ರಿ ಬಂಟರ ಸಂಘದಲ್ಲಿ ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ

11:11 AM Aug 21, 2024 | Team Udayavani |

ಪಡುಬಿದ್ರಿ: ಬಂಟರ ಸಂಘ ಮತ್ತು ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್, ಉಡುಪಿ ಗ್ರಾಮೀಣ ಬಂಟರ ಸಂಘ ದ ಚಾರಿಟೇಬಲ್ ಟ್ರಸ್ಟ್ ನ  ವತಿಯಿಂದ ಆ.25 ರಂದು ಪಡುಬಿದ್ರಿ ಬಂಟರ ಸಂಘದ ಆಶಾ ಪ್ರಕಾಶ್ ಶೆಟ್ಟಿ ಸಭಾಭವನದಲ್ಲಿ ಯುವಕರಿಗೆ ಮತ್ತು ಮಹಿಳೆಯರಿಗೆ ಒಂದು ದಿನದ “ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮ” ನಡೆಯಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು.

Advertisement

ಪಡುಬಿದ್ರಿ ಬಂಟರ ಸಂಘದಲ್ಲಿ ಆ.21ರ ಬುಧವಾರ ಸುದ್ದಿಗೋಷ್ಟಿಯಲ್ಲಿ  ಮಾತನಾಡಿದ ಅವರು, ಯುವಕರಿಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ಮುಕ್ತವಾಗಿ ನಡೆಯಲಿರುವ ಕಾರ್ಯಕ್ರಮವನ್ನು ಎಂ. ಆರ್. ಜಿ. ಗ್ರೂಪ್ ನ ಛೇರ್ಮನ್ ಡಾ| ಕೆ. ಪ್ರಕಾಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ಉಡುಪಿ ಗ್ರಾಮೀಣ ಬಂಟರ ಸಂಘ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶಶಿಧರ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರನಾಥ್ ಜಿ‌ ಹೆಗ್ಡೆ, ಸುರೇಶ ಶೆಟ್ಟಿ, ಸಾಂತೂರ್ ಭಾಸ್ಕರ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಉಡುಪಿ ಗ್ರಾಮೀಣ ಬಂಟರ ಸಂಘ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಉದ್ಘಾಟನಾ ಸಮಾರಂಭದ ಬಳಿಕ ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರೇರಣಾತ್ಮಕ ಮಾತುಗಳೊಂದಿಗೆ ತನ್ನ ಕಷ್ಟದ ದಿನಗಳು, ತನ್ನ ಉದ್ದಿಮೆ ಮಾಡುವ ಸಂದರ್ಭದಲ್ಲಿ ಬಂದಿರುವ ವಿವಿಧ ಸವಾಲುಗಳು, ಅವುಗಳನ್ನು ಎದುರಿಸಿ ಮುಂದೆ ಯಶಸ್ವಿಯಾಗಿ ಸಾಗಿ ಈಗ ಯಶಸ್ವಿ ಉದ್ಯಮಿಯಾಗಿ ಸಾಗಿ ಬಂದ ರೀತಿಯ ಬಗ್ಗೆ ವಿವರಿಸಿ ಸ್ವ – ಉದ್ಯೋಗ ಮಾಡಲು ಪ್ರೇರಣೆ ಕೊಡಲಿದ್ದಾರೆ.

ಪ್ರೊ| ದಿವ್ಯಾರಾಣಿ ಪ್ರದೀಪ್, ಮಹಿಳಾ ಸಬಲೀಕರಣ ಮತ್ತು ಮಹಿಳೆರು ಯಾವ ತರಹದ ಉದ್ಯಮದ ಮೂಲಕ ಬೆಳೆಯ ಬಹುದು, ಮಹಿಳಾ ಯುವ ಉದ್ಯಮಿ ಮೈತ್ರಿ ಮಲ್ಲಿ ಮಂಗಳೂರು, ಯಶಸ್ವಿ ಉದ್ಯಮಿಯಾಗಲು ಪ್ರಯತ್ನ ಪಡುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಡಾ. ಸಿ. ಕೆ.ಮಂಜುನಾಥ್, ಡಾ. ಶುಭ ಮಾಹೆ, ಪ್ರವೀಣ್ ಶೆಟ್ಟಿ ಎಂ. ಐ. ಟಿ, ಡಾ. ಸುಧೀರಾಜ್, ಲೀಡ್ ಬ್ಯಾಂಕ್ ಡಿವಿಷನಲ್ ಮ್ಯಾನೇಜರ್ ಹರೀಶ್ ಕುಮಾರ್ ಅವರು ನಾಯಕತ್ವ, ಸಂವಹನ‌ ಕಲೆ, ಇಂಟರ್ ವ್ಯೂ ಸಂದರ್ಶನಕ್ಕೆ ತಯಾರಿ, ಬ್ಯಾಂಕ್ ಗಳಿಂದ ಉದ್ಯಮಕ್ಕೆ ಸಿಗುವ ಸಹಾಯ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಭಾಗವಹಿಸಿದ ಅಭ್ಯರ್ಥಿ ಗಳಿಗೆ ಸ್ಕಿಲ್ ಡೆವಲಪ್ಟೆಂಟ್ ಸೆಂಟರ್ ವತಿಯಿಂದ ಸರ್ಟಿಫಿಕೇಟ್ ನೀಡಲಾಗುವುದು ಎಂದರು.

Advertisement

ಪಡುಬಿದ್ರಿ ಬಂಟರ ಸಂಘದ ಸಿರಿಮುಡಿ ದತ್ತಿನಿಧಿ ಸ್ಥಾಪಕಾಧ್ಯಕ್ಷ ಭಾಸ್ಕರ್ ಶೆಟ್ಟಿ ಸಾಂತೂರು, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಯುವ ಬಂಟರ ಸಂಘದ ಅಧ್ಯಕ್ಷ ನವೀನ್‌ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ಸಂತೃಪ್ತಿ ಎಂ. ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯದರ್ಶಿ ವಿಜೀತ್ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next