Advertisement

ಹಾಲೆ ಮರದಲ್ಲಿ ಅಮಾವಾಸ್ಯೆ ದಿನವೇ ಅಧಿಕ ಔಷಧೀಯ ಗುಣ!

10:21 PM Jul 29, 2019 | Sriram |

ಉಡುಪಿ: ಆಷಾಢ ಮಾಸದ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ (ಆ. 1) ಹಾಲೆ ಮರದ ತೊಗಟೆ ಕಷಾಯ ಸೇವಿಸುವುದು ಧಾರ್ಮಿಕವೂ ವೈದ್ಯಕೀಯವೂ ವೈಜ್ಞಾನಿಕವೂ ಆದ ಒಂದು ಕ್ರಮವಾಗಿದೆ.

Advertisement

ಇದು ಕರಾವಳಿಯಲ್ಲಿರುವ ಪದ್ಧತಿ. ಉ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿಯೂ ಈ ಪದ್ಧತಿ ಇದೆ. ಇಲ್ಲಿ ಹೆಚ್ಚಿಗೆ ಮಳೆ ಬರುತ್ತಿರುವುದು ಈ ಔಷಧೀಯ ಕ್ರಮಕ್ಕೆ ಕಾರಣ ಎಂದು ತಿಳಿದುಬರುತ್ತದೆ.

ಆಷಾಢ ಮಾಸದ ಅಮಾವಾಸ್ಯೆ ದಿನವೇ ಇದು ಏಕೆ ಚಾಲ್ತಿಗೆ ಬಂದಿರಬಹುದು ಎಂಬ ಜಿಜ್ಞಾಸೆ ಮೂಡುವುದು ಸಹಜ. ಉಡುಪಿ ಕುತ್ಪಾಡಿ ಶ್ರೀಧರ್ಮಸ್ಥಳ ಆಯುರ್ವೇದ ಕಾಲೇಜಿನ ಜನಪದ ವೈದ್ಯಕೀಯ ಸಂಶೋಧನ ವಿಭಾಗದಿಂದ ಇದನ್ನು ಕಳೆದ ವರ್ಷ ಪರೀಕ್ಷೆ ನಡೆಸಿದ್ದಾರೆ. ಅಮಾವಾಸ್ಯೆ ದಿನ ಮತ್ತು ಅದಕ್ಕೂ ಹಿಂದೆ ನಾಲ್ಕು ದಿನ, ಅನಂತರ ನಾಲ್ಕು ದಿನ ಬಿಟ್ಟು ತೊಗಟೆಯನ್ನು ತೆಗೆದು ಪರೀಕ್ಷಿಸಲಾಯಿತು. ಅಮಾವಾಸ್ಯೆ ದಿನ ಮುಂಜಾನೆ 4 ಗಂಟೆಗೂ ಹೊರತಾದ ದಿನಗಳಲ್ಲಿ ಬೆಳಗ್ಗೆ 10 ಗಂಟೆಗೂ ತೊಗಟೆಯನ್ನು ತೆಗೆಯಲಾಗಿದೆ.

ತೊಗಟೆಯಲ್ಲಿರುವ ಫ್ಲಾವನಾಯ್ಡ್ಸ್, ನೈಸರ್ಗಿಕ ಸ್ಟಿರಾಯ್ಡ, ಟೆಪೆìನಾಯ್ಡ್ಸ್ ಎಂಬ ಅಂಶ ಅಮಾವಾಸ್ಯೆ ದಿನ ಹೆಚ್ಚಿಗೆ ಇರುವುದು ಕಂಡುಬಂದಿದೆ. ಇದರರ್ಥ ಅದೇ ದಿನ ಮಾತ್ರ ತೆಗೆದುಕೊಳ್ಳಬೇಕೆಂಬುದಲ್ಲ. ಆ ದಿನ ಔಷಧೀಯ ಗುಣ ಹೆಚ್ಚಿಗೆ ಇರುವುದು ಗಮನಿಸಬೇಕಾದ ಅಂಶ. ಇದನ್ನು ಪೂರ್ವಿಕರು ಚಾಲ್ತಿಗೆ ತರುವಾಗಲೂ ಪ್ರಾಕೃತಿಕವಾಗಿಯೂ ತಿಳಿವಳಿಕೆ ಹೊಂದಿದ್ದರು ಎಂಬುದು ದೃಢಪಡುತ್ತದೆ.

ಫ್ಲಾವನಾಯ್ಡ್ಸ್ ಅಂಶವು ಮಳೆಗಾಲದಲ್ಲಿ ಚರ್ಮಕ್ಕೆ ಬರಬಹುದಾದ ಅಲರ್ಜಿ, ಊತವನ್ನು ನಿವಾರಿಸಲು, ನೈಸರ್ಗಿಕ ಸ್ಟಿರಾಯ್ಡ ಮತ್ತು ಟೆಪೆìನಾಯ್ಡ್ಸ್ ಶಾರೀರಿಕ ಯೌವನ (ಆ್ಯಂಟಿ ಏಜಿಂಗ್‌), ವಿವಿಧ ಬಗೆಯ ಕ್ರಿಮಿನಾಶಕ (ವೈರಸ್‌) ನಿವಾರಣೆಗೆ ಸಹಾಯಕಾರಿ. ಬೇರಾವುದೋ ಸಂದರ್ಭ ದೇಹದೊಳಕ್ಕೆ ಹೋದ ವಿಷಾಂಶ ಜೀರ್ಣಗೊಳ್ಳದೆ ಇದ್ದರೆ, ನಿವಾರಣೆಯಾಗದೆ ಇದ್ದರೆ, ಅಂಗಾಂಗಗಳಿಗೆ ಇವುಗಳನ್ನು ನಿರ್ವಹಿಸಲು ಆಗದೆ ಇದ್ದರೆ ಮುಂದೊಂದು ದಿನ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಗಟ್ಟಲು ಕಹಿ ಔಷಧವನ್ನು ಬಳಸುತ್ತಿದ್ದರು. ಆಟಿ ಕಷಾಯವೂ ಕಹಿಯಾದ ಕಾರಣ ಇದೂ ಅದೇ ತೆರನಾದ ಚಿಕಿತ್ಸೆ ಎನ್ನುತ್ತಾರೆ ಜನಪದ ವೈದ್ಯಕೀಯ ಸಂಶೋಧನ ವಿಭಾಗದ ಮುಖ್ಯಸ್ಥೆ ಡಾ| ಚೈತ್ರಾ ಹೆಬ್ಟಾರ್‌.

Advertisement

ಶ್ರೀಕೃಷ್ಣಮಠದಲ್ಲಿ ವಿತರಣೆ
ಉಡುಪಿ ಶ್ರೀಕೃಷ್ಣಮಠದಲ್ಲಿ ಪ್ರತಿವರ್ಷ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ಕಷಾಯ ವಿತರಿಸುತ್ತಾರೆ. ಅದೇ ದಿನ ಬೆಳಗ್ಗೆ ಮೇಸಿŒಯವರು ನಾಲ್ಕೈದು ಕೆ.ಜಿ. ಆಗುವಷ್ಟು ಹಾಲೆ ಮರದ ತೊಗಟೆ ತಂದು ಕೊಡುತ್ತಾರೆ. ಇದನ್ನು ಕಷಾಯ ಮಾಡಿ ಬೆಳಗ್ಗೆ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವಾಗ ಸಮರ್ಪಿಸಿ ಬಳಿಕ ಸಾರ್ವಜನಿಕರಿಗೆ ವಿತರಿಸುತ್ತಾರೆ.

ರೋಗ ನಿರೋಧಕ ಶಕ್ತಿ ಹೆಚ್ಚು
ಆಟಿ ಅಮಾವಾಸ್ಯೆ ದಿನ ಮತ್ತು ಇತರ ದಿನಗಳಲ್ಲಿ ಹಾಲೆ ಮರದ ತೊಗಟೆಯನ್ನು ಪರೀಕ್ಷಿಸಿದಾಗ ಅಮಾವಾಸ್ಯೆ ದಿನ ಫ್ಲಾವನಾಯ್ಡ್ಸ್, ನೈಸರ್ಗಿಕ ಸ್ಟಿರಾಯ್ಡ, ಟೆಪೆìನಾಯ್ಡ್ಸ್ ಮೂರು ಅಂಶಗಳು ಇತರ ದಿನಗಳಿಗಿಂತ ಹೆಚ್ಚಿಗೆ ಇರುವುದು ಕಂಡುಬಂದಿದೆ. ಫ್ಲಾವನಾಯ್ಡ್ಸ್ ಚರ್ಮದ ಅಲರ್ಜಿ, ಊತ, ನೈಸರ್ಗಿಕ ಸ್ಟಿರಾಯ್ಡ ಮತ್ತು ಟೆಪೆìನಾಯ್ಡ್ಸ್ ಶಾರೀರಿಕ ಯೌವನ (ಆ್ಯಂಟಿ ಏಜಿಂಗ್‌), ಕ್ರಿಮಿನಾಶಕ (ವೈರಸ್‌) ನಿವಾರಣೆಗೆ ಸಹಾಯಕಾರಿ.
– ಡಾ| ಚೈತ್ರಾ ಹೆಬ್ಟಾರ್‌, ಜನಪದ ವೈದ್ಯಕೀಯ ಸಂಶೋಧನ ವಿಭಾಗ ಮುಖ್ಯಸ್ಥೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಕುತ್ಪಾಡಿ

ತೊಗಟೆ ತೆಗೆಯುವಾಗ ಇರಲಿ ಎಚ್ಚರ
ಅಮಾವಾಸ್ಯೆ ದಿನ ಮುಂಜಾವ ತೊಗಟೆಯನ್ನು ತೆಗೆಯಬೇಕೆಂದಿದೆ. ಆದ್ದರಿಂದ ಬೆಳಕಿಲ್ಲದ ನಸುಕಿನಲ್ಲಿ ಹಾಲೆ ಮರದ ಬದಲು ಬೇರಾವುದೋ ಮರದ ತೊಗಟೆಯನ್ನು ತೆಗೆದು ಅದನ್ನು ಸ್ವೀಕರಿಸಿದರೆ ಜೀವಕ್ಕೆ ಅಪಾಯವಿರುವ ಸಾಧ್ಯತೆಯೂ ಇದೆ. ಕಾಸಾನು ಮರವೂ ಹಾಲೆ ಮರವೂ ಒಂದೇ ತೆರನಾಗಿರುವುದರಿಂದ ಇಂತಹ ಗೊಂದಲ ಉಂಟಾದದ್ದು ಇದೆ. ಹೀಗೆಂದ ಮಾತ್ರಕ್ಕೆ ಕಾಸಾನು ಮರ ವಿಷಕಾರಿ ಎಂದು ಅವುಗಳನ್ನು ಕಡಿಯುವ ಅಜ್ಞಾನಿಗಳೂ ಸಾಕಷ್ಟು ಇದ್ದಾರೆ. ಕಾಸಾನು ಮರದಿಂದ ಅನೇಕ ಪ್ರಯೋಜನಗಳಿದ್ದು ಆ ಪ್ರಯೋಜನವನ್ನು ತಿಳಿದು ಬಳಸಬೇಕಾದ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದು ಉತ್ತಮ.

ಅಗ್ಗದ ಚಿಕಿತ್ಸಾಕ್ರಮ
ಹಾಲೆ ಮರಕ್ಕೆ ಆಯು ರ್ವೇದದಲ್ಲಿ ಸಪ್ತಪರ್ಣಿ ಎನ್ನುತ್ತಾರೆ. ಒಂದು ತೊಟ್ಟಿನಲ್ಲಿ ಏಳು ಎಲೆಗಳಿರುವ ಕಾರಣ ಸಪ್ತ ಪರ್ಣಿ ಎಂಬ ಹೆಸರು ಬಂದಿದೆ. ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇದೆ. ಡೆಂಗ್ಯೂ, ಮಲೇರಿಯಾದಂತಹ ಜ್ವರದ ನಾನಾ ಪ್ರಕಾರಗಳು ಹುಟ್ಟಿ ಕೊಳ್ಳುತ್ತಿರುವುದರಿಂದ ಹಿರಿಯರು ಕಂಡುಕೊಂಡ ದುಬಾರಿಯಲ್ಲದ ಒಂದು ಚಿಕಿತ್ಸಾ ವಿಧಾನವೂ ಹೌದು. ಆಯುರ್ವೇದ ಔಷಧಗಳಲ್ಲಿ ಇದರ ಬಳಕೆ ಧಾರಾಳ ಇದೆ. ಹೀಗಾಗಿ ಕೇವಲ ಆಟಿ ಅಮಾವಾಸ್ಯೆ ದಿನವಲ್ಲದೆ ಇತರ ದಿನಗಳಲ್ಲಿಯೂ ನಾವು ಗೊತ್ತಿಲ್ಲದೆ ಹಾಲೆ ಮರದ ಅಂಶವನ್ನು ಸ್ವೀಕರಿಸುತ್ತಿದ್ದೇವೆ.

ತಯಾರಿಸುವ
ವಿಧಾನ
ತೊಗಟೆಗೆ ನೀರು ಮಿಶ್ರ ಮಾಡಿ ಜಜ್ಜಿ ರಸವನ್ನು ತೆಗೆಯುತ್ತಾರೆ. ಕೆಲವರು ಓಮಾ ಕಾಳು ಸೇರಿಸುತ್ತಾರೆ. ಕಾಳುಮೆಣಸು, ಜೀರಿಗೆ ಮಿಶ್ರ ಮಾಡಿ ಕುದಿಸಿ ಕುಡಿಯುವ ಕ್ರಮವೂ ಇದೆ. ಜೀರಿಗೆ, ಓಮಾ ಇತ್ಯಾದಿಗಳನ್ನು ಸೇರಿಸುವುದು ಕಹಿಯನ್ನು ಕಡಿಮೆ ಮಾಡಲೋಸುಗವಾಗಿದೆ. ಕಷಾಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕುಡಿಯ ಬೇಕೆಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಿದೆ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next