ಭವನದಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಶಿಕ್ಷಣ ಟ್ರಸ್ಟ್ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್(ಸಾಧಕರ ಪುಟ) ಗಾಗಿ ಹಮ್ಮಿಕೊಂಡಿರುವ ಅನಾವ ರಣಗೊಂಡಿತು.
Advertisement
ಮೈಸೂರಿನ ಶಾಲಿನಿ ಎಂಬ ಬಾಲಕಿ ತನ್ನ ಎರಡೂ ಕೈಗಳನ್ನು ಏಕ ಕಾಲಕ್ಕೆ ಬಳಸಿ ಗಣೇಶನ ಎರಡು ತದ್ರೂಪು ಚಿತ್ರಗಳನ್ನು ಬಿಡಿಸಿದಳು. ನಂತರ ಮತ್ತೆ ಎಡಗೈಲಿ ಗಣಪನ ಚಿತ್ರ ಬರೆದ ಆಕೆ ಬಲಗೈಲಿ ಗಣಪನ ಉಲ್ಟಾ ಚಿತ್ರವನ್ನು ಬರೆದು ಪ್ರಕೇಕಕರನ್ನು ಚಕಿತಗೊಳಿಸಿದಳು.
ಳಿರುವ “ಪೂಜೆ’ಯನ್ನು ಹೊತ್ತು ತಮಟೆ ಮೇಳದ ನಾದಕ್ಕೆ ತಕ್ಕದಾಗಿ ಹೆಜ್ಜೆಗಳನ್ನು ಹಾಕುತ್ತ ಪೂಜಾ ಕುಣಿತ ನಡೆಸಿಕೊಟ್ಟಿದ್ದು ಪ್ರೇಕ್ಷಕರ ಗಮನ ಸೆಳೆಯಿತು. ಚನ್ನಪಟ್ಟಣ ತಾಲೂಕಿನ ಯುವತಿ ಪುನರ್ವಸು ಎಂಬಾಕೆ ಗಂಡಭೇರುಂಡ ಆಸನ ಸೇರಿದಂತೆ ಅತ್ಯಂತ ಕಠಿಣ ಆಸನಗಳನ್ನು ಪ್ರದರ್ಶಿಸಿದರು. ನಿಶ್ಚಲ್ ಸಾಹಸಕ್ಕೆ ಪ್ರೇಕ್ಷಕ ಫಿದಾ: ಬೆಂಗಳೂರಿನ ನಿಶ್ಚಲ್ ಎಂಬ ಯುವಕ ಚಾಕುವೊಂದರ ಹಿಡಿಯನ್ನು ತನ್ನ
ಬಾಯಲ್ಲಿ ಇರಿಸಿಕೊಂಡು ಚಾಕುವಿನ ಹರಿತ ಇರುವ ಭಾಗದ ಮೇಲೆ ಗ್ಲಾಸ್ ಪೇಟ್‌ಗಳು, ಪೆಗ್ ಗ್ಲಾಸುಗಳನ್ನು ಒಂದರ
ಮೇಲೊಂದು ಪೇರಿಸಿ ಬ್ಯಾಲೆನ್ಸ್ ಮಾಡಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
Related Articles
Advertisement
ಮೈಸೂರಿನ ರಾಹುಲ್ ರಾಯ್ ಕೈಗಳನ್ನು ನೆಲಕ್ಕೆ ತಾಗಿಸದೆ ಗಿರಗಿಟಲೆಯಂತೆ ಸುತ್ತಿದ್ದು ನೆರೆದಿದ್ದವರ ಚಕಿತಕ್ಕೆಕಾರಣವಾಯಿತು. ಈತ ಕಿಕ್‌ಬಾಕ್ಸಿಂಗ್ ಏರೋಬಿಕ್ಸ್ ಸೇರಿದಂತೆ ವಿವಿಧ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು
ಪ್ರತಿನಿಧಿಸಿ 3 ಬಾರಿ ಚಿನ್ನದ ಪದಗಳನ್ನು ಪಡೆದಿದ್ದಾಗಿ ಆಯೋಜಕರು ತಿಳಿಸಿದರು. ಸ್ಪೈಡರ್ ಮನ್ ಗಿರಿಗಟ್ಲೆಗೆ ತಲೆ ಸುತ್ತಿದ್ದ ವೀಕ್ಷಕ: ಕರ್ನಾಟಕದ ಸ್ಪೈಡರ್ ಮನ್ ಅಂತಲೆ ಕರೆಯಲ್ಪಡುವ ಅನಿಲ್ ಎಂಬ ಯುವಕನ ಪ್ರದರ್ಶನ ರೋಮಾಂಚನಕ್ಕೆ ಕಾರಣವಾಯಿತು. ಕೆಲ ಹೆಜ್ಜೆಗಳ ಹಿಂದಿನಿಂದ ಓಡಿ ಬಂದ ಆತನ ಒಮ್ಮೇಲೆ ನಾಲ್ಕು ಮಂದಿಯನ್ನು ದಾಟಿ ಗಿರಗಿಟ್ಲೆ ಸುತ್ತಿ ನೆಲದ ಮೇಲೆ ನಿಂತಿದ್ದನ್ನು ಕಂಡ ಪ್ರೇಕ್ಷಕರು ರೋಮಾಂಚನಗೊಂಡರು. ಸುರಪುರ ತಾಲೂಕಿನ ಲೆಮನ್ ಪರಶುರಾಮ್ ಒಂದು ನಿಮಿಷದಲ್ಲಿ 6 ನಿಂಬೆ ಹಣ್ಣುಗಳನ್ನು ಒಂದರ ಹಿಂದೆ
ಒಂದನ್ನು ತಿಂದಿದ್ದು ಸಹ ಅದ್ಭುತ ಎನಿಸಿತು. ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಹೊರತರಲು ಉದ್ದೇಶಿಸಿರುವ ಗೌತಂ ವರ್ಮ ಕೆಲವೇ ಸೆಕಂಡುಗಳಲ್ಲಿ ತೆಂಗಿನ ಕಾಯನ್ನು ಸುಲಿದರು. 54 ಕೇಜಿ ತೂಗುವ ವ್ಯಕ್ತಿಯೊಬ್ಬನನ್ನು ತಮ್ಮ ಹಲ್ಲುಗಳಿಂದ ಹಿಡಿದೆತ್ತಿ ಚಕಿತಗೊಳಿಸಿದರು. ರಾಮನಗರ ತಾಲೂಕಿನ ಆನಂದ ಅವರು ದಾಖಲೆ ಪ್ರಮಾಣದಲ್ಲಿ ಟೊಮೆಟೋ ಬೆಳೆದಿರುವುದರ ಬಗ್ಗೆ ಮಾಹಿತಿ ಲಭ್ಯವಾಯಿತು. ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಪ್ರತಿಭೆಗಳು ತಮ್ಮ ಅದ್ಬುತ ಸಾಹಸವನ್ನು ಪ್ರದರ್ಶಿಸಿ ಗಣ್ಯರು ಮತ್ತು ಪ್ರೇಕಕರನ ಮೆಚ್ಚುಗೆಗಳಿಸಿದರು.