ಸಾಮಾನ್ಯವಾಗಿ ಒಬ್ಬ ನಟನ ವರ್ಷಕ್ಕೆ ಒಂದಾದರೂ ಸಿನಿಮಾ ಬಿಡುಗಡೆಯಾಗುತ್ತದೆ. ಸ್ಟಾರ್ ನಟರೆಲ್ಲರೂ ವರ್ಷಕ್ಕೊಂದು ಸಿನಿಮಾದ ಮೂಲಕವಾದರೂ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡುತ್ತಿರುತ್ತಾರೆ. ಆದರೆ, ಈಗ ಒಬ್ಬ ನಟನ ಚಿತ್ರವೊಂದು ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ. ಅದು ಚೇತನ್ ಅವರ ಸಿನಿಮಾ.
“ಆ ದಿನಗಳು’ ಮೂಲಕ ಚಿತ್ರರಂಗಕ್ಕೆ ಬಂದ ಚೇತನ್ ಇಲ್ಲಿವರೆಗೆ ನಟಿಸಿದ್ದು, ಬರೀ ಆರು ಸಿನಿಮಾಗಳಲ್ಲಷ್ಟೇ. ಅವರ ಕೊನೆಯ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ ನಾಲ್ಕು ವರ್ಷ ಕಳೆದಿದೆ. “ಮೈನಾ’ ಚಿತ್ರದ ನಂತರ ಚೇತನ್ ನಟಿಸಿರುವ ಯಾವೊಂದು ಚಿತ್ರವೂ ಬಂದಿಲ್ಲ. ಬಂದಿಲ್ಲ ಎನ್ನುವುದಕ್ಕಿಂತ ಚೇತನ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಕೆಲವು ಸಿನಿಮಾಗಳಲ್ಲಿ ಚೇತನ್ ನಟಿಸುತ್ತಾರೆಂದು ಸುದ್ದಿಯಾದರೂ ನಂತರ ಆ ಸಿನಿಮಾಗಳು ಸೆಟ್ಟೇರಲೇ ಇಲ್ಲ.
ಈಗ ಚೇತನ್ ನಾಯಕರಾಗಿ ನಟಿಸಿರುವ ಸಿನಿಮಾವೊಂದು ಬಿಡುಗಡೆಗೆ ರೆಡಿಯಾಗಿದೆ. ಅದು “ನೂರೊಂದು ನೆನಪು’. ಹೌದು, ಚೇತನ್ ನಟಿಸಿರುವ “ನೂರೊಂದು ನೆನಪು’ ಚಿತ್ರ ಜೂನ್ 9ರಂದು ಬಿಡುಗಡೆಯಾಗುತ್ತಿದೆ. ಇದು ಮರಾಠಿಯ “ದುನಿಯಾದಾರಿ’ ಚಿತ್ರದ ರೀಮೇಕ್. ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಕಾಲೇಜ್ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುತ್ತದೆ. ಇಲ್ಲಿ ಚೇತನ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.
ಈ ಪಾತ್ರ ಮಾಡಿ ಚೇತನ್ ಕೂಡಾ ಎಕ್ಸೆ„ಟ್ ಆಗಿದ್ದಾರೆ. ಅವರು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಅವರನ್ನು ನೋಡಿದವರು ಚೇತನ್ ಕಾಲೇಜು ಪಾತ್ರಗಳಿಗೆ ಸರಿ ಹೊಂದುತ್ತಾರೆಂದು ಹೇಳುತ್ತಿದ್ದರಂತೆ. ಆದರೆ, ಚೇತನ್ ಚಿತ್ರರಂಗಕ್ಕೆ ಬಂದು 10 ವರ್ಷಗಳ ನಂತರ ಅವರಿಗೆ ಕಾಲೇಜಿಗೆ ಹೋಗುವ ಪಾತ್ರ ಸಿಕ್ಕಿದೆ. ಬಿಳಿ ಕೂದಲು ಬರಿ¤ದೆ. ಇನ್ನು ಕಾಲೇಜ್ ಪಾತ್ರಗಳು ಸಿಗುವುದಿಲ್ಲ ಎಂದು ಚೇತನ್ ಭಾವಿಸಿಕೊಂಡಿದ್ದರಂತೆ.
ಆದರೆ, ಈಗ ಕಾಲೇಜ್ ಪಾತ್ರ ಸಿಕ್ಕಿದೆ. “ಇದು ಕಾಲೇಜ್ ಕಥೆಯಾದರೂ, ಎಲ್ಲರೂ ಮೆಲುಕು ಹಾಕುವಂತಹ ಚಿತ್ರ. ಎಲ್ಲರ ಪಾತ್ರಕ್ಕೂ ಒಂದು ಕಥೆ ಇದೆ. ಸರಿಯಾಗಿ ಹೇಳಬೇಕೆಂದರೆ, ಇದೊಂದು ಸಲಾಡ್ ಬೌಲ್ ತರಹ ಇದೆ. ಒಂದು ಬೌಲ್‌ನಲ್ಲಿ ಪ್ರತಿ ತರಕಾರಿಗೂ ಸತ್ವ ಇರುವಂತೆ, ಇಲ್ಲೂ ಪ್ರತಿ ಪಾತ್ರಕ್ಕೂ ತನ್ನದೇ ಆದ ಸತ್ವ ಇದೆ’ ಎನ್ನುವುದು ಚೇತನ್ ಮಾತು.
ನಿರ್ದೇಶಕ ಕುಮರೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸೂರಜ್ ದೇಸಾಯಿ ನಿರ್ಮಾಪಕರು. 80ರ ದಶಕದಲ್ಲಿ ಕತೆ ನಡೆಯುವುದರಿಂದ ಅದಕ್ಕೆ ಬೇಕಾದಂತಹ ಪರಿಸರವನ್ನು ಸೃಷ್ಟಿಸಲಾಗಿದೆ. ಚಿತ್ರದಲ್ಲಿ ಎಲ್ಲಾ ಪಾತ್ರಧಾರಿಗಳಿಗೂ ಅವರವರದ್ದೇ ಹಲವು ನೆನಪುಗಳಿರುತ್ತವೆ. ಹಾಗಾಗಿ “ನೂರೊಂದು ನೆನಪು’ ಸರಿ ಹೊಂದುತ್ತದೆಯಂತೆ. ಚಿತ್ರದಲ್ಲಿ ರಾಜವರ್ಧನ್, ಮೇಘನಾ ರಾಜ್ ಕೂಡಾ ನಟಿಸಿದ್ದಾರೆ.