Advertisement

ಪುಸ್ತಕ ಕೇಳಿಸುವ ಆಡಿಬಲ್‌

04:48 PM Apr 06, 2020 | Suhan S |

ಹಿಂದೆಲ್ಲಾ ಟೇಪ್‌ ರೆಕಾರ್ಡರುಗಳು, ಹಾಡು ಕೇಳುವುದಕ್ಕೆ ಮಾತ್ರವೇ ಸೀಮಿತವಾಗಿದ್ದವು. ನಂತರದ ದಿನಗಳಲ್ಲಿ, ಸಿನಿಮಾಗಳನ್ನು ಆಡಿಯೊ ರೂಪದಲ್ಲಿ ಕ್ಯಾಸೆಟ್‌ ಮಾಡಿ ಬಿಡುಗಡೆ ಮಾಡಲಾಯಿತು.

Advertisement

ಇಂದು ಕ್ಯಾಸೆಟ್ಟುಗಳ ಟ್ರೆಂಡ್‌ ಇಲ್ಲ. ಆದರೆ, ಡಿಜಿಟಲ್‌ ಜಗತ್ತಿನಲ್ಲಿ ಶ್ರವಣಮಾಧ್ಯಮ ವಿವಿಧ ಮಜಲುಗಳನ್ನು ಕಂಡಿದೆ. ಇಂದಿನ ಬಿಝಿ ಜಗತ್ತಿನಲ್ಲಿ, ಪುಸ್ತಕ ಓದಲು ಹೆಚ್ಚಿನವರಿಗೆ ಆಸೆಯಿದೆ, ಆದರೆ ಪುರುಸೊತ್ತಿಲ್ಲ. ಅಂಥವರನ್ನು ಗಮನದಲ್ಲಿರಿಸಿಕೊಂಡು ಸೃಷ್ಟಿಯಾದ ಉದ್ಯಮವೇ “ಆಡಿಬಲ್’. ಇದು, ಇ-ಕಾಮರ್ಸ್‌ ದೈತ್ಯ ಅಮೇಜಾನ್‌ ಸಂಸ್ಥೆಗೆ ಸೇರಿದ ಉದ್ಯಮ.

ಇಲ್ಲಿ, ಪುಸ್ತಕಗಳನ್ನು ಖ್ಯಾತನಾಮರ ದನಿಯಲ್ಲಿ ರೆಕಾರ್ಡ್‌ ಮಾಡಿ, ಜನರಿಗೆ ಒದಗಿಸುತ್ತಾರೆ. ಮಕ್ಕಳ ಕಥೆ ಪುಸ್ತಕಗಳು, ನರ್ಸರಿ ಗೀತೆಗಳು, ಪ್ರೇಮ ಕಥನಗಳು, ಕಾದಂಬರಿಗಳು, ಪ್ರಸಿದ್ಧ ಸಾಹಿತಿಗಳ ಕೃತಿಗಳು. ಹೀಗೆ, ಎಲ್ಲದರ ಆಡಿಯೊ ಆವೃತ್ತಿಯೂ ಇಲ್ಲಿ ಲಭ್ಯ. ಅದನ್ನು ಕೇಳಬೇಕೆಂದರೆ, ನಿಗದಿತ ಶುಲ್ಕ ಕೊಟ್ಟು ಚಂದಾದಾರರಾಗಬೇಕಿತ್ತು. ಇದೀಗ ಮನೆಯಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಸಮಯದಸದುಪಯೋಗ ಪಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ, “ಆಡಿಬಲ್’ ಸಂಸ್ಥೆ 200ಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ನೀಡಿದೆ. ಇಲ್ಲಿರುವುದರಲ್ಲಿ ಹೆಚ್ಚಿನವು ಇಂಗ್ಲಿಷ್‌ ಪುಸ್ತಕಗಳು. ಇತರೆ ಕೆಲಸಗಳನ್ನು ಮಾಡಿಕೊಂಡೇ ಪುಸ್ತಕ ಕೇಳುವುದರಿಂದ, ಕೆಲಸ ಮುಗಿಸುವುದರ ಜೊತೆಗೆ ಪುಸ್ತಕ ಓದಿದ ಸಂತಸವೂ ಜೊತೆಯಾಗುತ್ತದೆ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರ ಕಲಿಕೆಯೂ ಆಗುತ್ತದೆ. ಹೇಗೆಂದರೆ, ಇದರಲ್ಲಿ ಮಕ್ಕಳ ಕಥೆಗಳೂ, ಶಿಶುಗೀತೆಗಳೂ ಇವೆ. ಕಂಪ್ಯೂಟರ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ಫೋನ್‌ ಯಾವುದರಲ್ಲಾದರೂ ಆಡಿಬಲ್‌ ಸೇವೆ ಪಡೆದುಕೊಳ್ಳಬಹುದು. tinyurl.com/r5w33tr ­

Advertisement

Udayavani is now on Telegram. Click here to join our channel and stay updated with the latest news.

Next