ಬೆಂಗಳೂರು: ಐಪಿಎಲ್ ನ ಮೆಗಾ ಹರಾಜು ನಡೆಯುತ್ತಿದ್ದ ವೇಳೆ ಆತಂಕಕಾರಿ ಬೆಳವಣಿಗೆ ನಡೆದಿದೆ. ಆಟಗಾರರ ಹೆಸರು ಕೂಗಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಹ್ಯೂ ಎಡ್ಮೆಡ್ಸ್ ಇದ್ದಕ್ಕಿಂದ್ದಂತೆ ಕುಸಿದು ಬಿದ್ದಿದ್ದು, ಗೊಂದಲ ಉಂಟಾಯಿತು.
ವಾನಿಂದು ಹಸರಂಗ ಅವರ ಹರಾಜು ಪ್ರಕ್ರಿಯೆ ನಡೆಯತ್ತಿದ್ದ ವೇಳೆ ಈ ಘಟನೆ ನಡೆಯಿತು. ಹೀಗಾಗಿ ಕೆಲಸ ಸಮಯದ ತನಕ ಹರಾಜನ್ನು ಸ್ಥಗಿತ ಮಾಡಲಾಗಿತ್ತು. ಸದ್ಯ ಎಡ್ಮೆಡ್ಸ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಐಪಿಎಲ್ ಹರಾಜುದಾರರಾದ ಎಡ್ಮೆಡ್ಸ್ ಅವರು ಹರಾಜಿನ ಸಮಯದಲ್ಲಿ ಪೋಸ್ಚರಲ್ ಹೈಪೊಟೆನ್ಶನ್‌ನಿಂದ ಕುಸಿದು ಬಿದ್ದರು. ಘಟನೆಯ ನಂತರ ವೈದ್ಯಕೀಯ ತಂಡವು ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಚಾರು ಶರ್ಮಾ ಇಂದು ಹರಾಜು ಪ್ರಕ್ರಿಯೆಗಳನ್ನು ಮುಂದುವರೆಸಲಿದ್ದಾರೆ ಎಂದು ಐಪಿಎಲ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ಹ್ಯೂ ಎಡ್ಮೆಡ್ಸ್ ಅವರು 2018ರಿಂದ ಐಪಿಎಲ್ ನ ಹರಾಜು ಕೂಗುತ್ತಿದ್ದಾರೆ. ಇದು ಅವರ ನಾಲ್ಕನೇ ಐಪಿಎಲ್ ಹರಾಜು ಕೂಟ.
ವಾನಿಂದು ಹಸರಂಗ ಹರಾಜು ಪ್ರಕ್ರಿಯೆ ಅಂತ್ಯವಾಗಿದ್ದು 10.75 ಕೋಟಿ ರೂ ಬೆಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿದೆ.