Advertisement

52 ನಿವೇಶನಗಳ ಬಹಿರಂಗ ಹರಾಜು 11ಕ್ಕೆ

04:30 PM Dec 24, 2020 | Suhan S |

ಬಳ್ಳಾರಿ: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ವ್ಯಾಪ್ತಿಯ 52 ನಿವೇಶನಗಳನ್ನು ಜ.11 ರಂದು ಬಹಿರಂಗ ಹರಾಜು ಮಾಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಹೇಳಿದರು.

Advertisement

ಬುಧವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 52 ವಾಸ ಯೋಗ್ಯ ಮೂಲೆ, ಬಿಡಿ ನಿವೇಶನಗಳು, ವರ್ಕ್ ಶಾಪ್‌ ವಾಣಿಜ್ಯ ನಿವೇಶನಗಳು ಹಾಗೂ ಖಾಲಿ ಜಾಗಗಳು ಬಹಿರಂಗ ಹರಾಜಿನ ಮೂಲಕ ಸಾರ್ವಜನಿಕರಿಗೆ ಹಂಚಿಕೆ ಮಾಡಲು ಅನುಮೋದಿಸಲಾಯಿತು.

ನಗರದ ರಾಘವೇಂದ್ರ ಕಾಲೋನಿ 2ನೇ ಹಂತದ 26 ವಾಸ ಯೋಗ್ಯ ನಿವೇಶನಗಳು, ಶ್ರೀಕನಕದುರ್ಗಮ್ಮ ಬಡಾವಣೆಯಲ್ಲಿರುವ 1 ವಾಸ ಯೋಗ್ಯ ನಿವೇಶನ, ಅಟಲ್‌ ಬಿಹಾರಿ ವಾಜಪೇಯಿಬಡಾವಣೆಯಲ್ಲಿ 7 ವಾಸ ಯೋಗ್ಯ ನಿವೇಶನಗಳು ಹಾಗೂ ವಾಣಿಜ್ಯ ನಿವೇಶನ 1, ಡಾ| ಸರ್‌| ಎಂ.ವಿ. ಲಾರಿ ತಂಗುದಾಣ ವರ್ಕ್‌ಶಾಪ್‌ ವಾಣಿಜ್ಯ ನಿವೇಶನಗಳು 11, ಕುವೆಂಪು ನಗರದಲ್ಲಿ 3 ವಾಸ ಯೋಗ್ಯ ನಿವೇಶನಗಳು, ಲಾಲ್‌ ಬಹದ್ದೂರ್‌ ಶಾಸ್ರ್ತಿ ವಾಣಿಜ್ಯ ಸಂಕೀರ್ಣದಲ್ಲಿ 3 ಖಾಲಿ ಜಾಗಗಳನ್ನು ಜ.11 ರಂದು ಹರಾಜು ಮೂಲಕ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಬಿ.ಗೋನಾಳ್‌ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ50:50 ಅನುಪಾತದಂತೆ, ಪ್ರಾಧಿಕಾರ ಮತ್ತುಖಾಸಗಿ ಸಹಭಾಗಿತ್ವದಲ್ಲಿ ವಸತಿ ಬಡಾವಣೆಯನ್ನುನಿರ್ಮಿಸಲು ಇ-ಟೆಂಡರ್‌ ಪ್ರಾಕ್ಯೂಮೆಂಟ್‌ಮುಖಾಂತರ ಟೆಂಡರ್‌ ಆಹ್ವಾನಿಸುವ ಕುರಿತುಸಭೆಯಲ್ಲಿ ಅನುಮೋದಿಸಲಾಯಿತು. ಶೀಘ್ರವೇ ಇ-ಪ್ರಾಕ್ಯೂರ್‌ವೆುಂಟ್‌ ಮೂಲಕಟೆಂಡರ್‌ ಆಹ್ವಾನಿಸಲಾಗುತ್ತದೆ ಎಂದ ಅವರು,ಪ್ರಾಧಿಕಾರದ ವ್ಯಾಪ್ತಿಯಲ್ಲಿ 20 ಜಾಹೀರಾತುಫಲಕಗಳಿಗೆ ಪ್ರತಿಯೊಂದಕ್ಕೆ 10 ಲಕ್ಷ ರೂ. ವಿಧಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆಭೂ-ಉಪಯೋಗ ಬದಲಾವಣೆಗೆ ಅನುಮೋದನೆನೀಡುವ ಬಗ್ಗೆ, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ ಮಂಜೂರು ಕೋರಿರುವ ಅರ್ಜಿಗಳಿಗೆಅನುಮೋದನೆ ನೀಡುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

Advertisement

ನಗರ ಶಾಸಕ ಜಿ.ಸೋಮಶೇಖರ್‌ ರೆಡ್ಡಿ,ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೀರೇಂದ್ರ ಕುಂದಗೋಳ, ಪ್ರಾಧಿಕಾರದಕಾರ್ಯಪಾಲಕ ಅಭಿಯಂತರ ರವಿಶಂಕರ್‌ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next