Advertisement
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಜಾತ್ರೆ ರವಿವಾರದಿಂದ ವಿಜೃಂಭಣೆಯಿಂದ ಆರಂಭಗೊಂಡಿದೆ. ಅತ್ತೂರು ಜಾತ್ರೆ ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿ ಮೂಡುವ ಯೋಚನೆ ಈ ವರ್ಷ ಎಷ್ಟು ಸಂತೆ ಬಂದಿರಬಹುದು ಎಂಬುದೇ ಆಗಿದೆ. ತೊಟ್ಟಿಲಿನಿಂದ ಹಿಡಿದು ಆಟದ ಜೋಕಾಲಿ, ಮನೋರಂಜನೆ. ಜಾಯಿಂಟ್‌ವೀಲ್, ಮಕ್ಕಳು ಕುಳಿತು ತಿರುಗಾಡುವ ವಿವಿಧ ಆಟಿಕೆಗಳು, ಡ್ರೆಸ್ ಮೆಟೀರಿಯಲ್, ಮಣಿಸರಕಿನ ಸ್ಟಾಲ್‌ಗಳು, ಐಸ್‌ಕ್ರಿಂ, ಪಾನಿಪುರಿ, ಗೋಬಿ ಮಂಚೂರಿ ಸಹಿತ ವಿವಿಧ ತಿನಿಸುಗಳ ಸ್ಟಾಲ್‌ಗಳು ಈ ಬಾರಿ ಇವೆ. ವ್ಯಾಪಾರ ಮಾಡುವುದಕ್ಕೆ ಸಂತೆ ಮಾರುಕಟ್ಟೆಯಲ್ಲಿ 400 ಮಳಿಗೆಗಳು ತೆರೆದುಕೊಂಡಿವೆ. ಆರಂಭದ ದಿನದಿಂದಲೆ ಜನರು ಚರ್ಚ್ ಕಡೆ ಆಗಮಿಸುತ್ತಿದ್ದು, ಮಳಿಗೆಗಳ ಮುಂದೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಇನ್ನು ಹೆಚ್ಚುವ ಸಾಧ್ಯತೆಗಳಿವೆ. ಮರಳಿ ಹಿಂದಿನ ಸ್ಥಿತಿಗೆ ಅತ್ತೂರು ಜಾತ್ರೆ ಮರಳುವ ಲಕ್ಷಣ ಗೋಚರಿಸುತ್ತಿದೆ.
Related Articles
Advertisement