ಕಾರ್ಕಳ: ಪವಿತ್ರ ಆತ್ಮರ ಕೃಪೆಯಿಂದ ಅವುಗಳ ಮೇಲೆ ಜಯ ಸಾಧಿ ಸಿ, ದೇವರಲ್ಲಿ ಅಚಲ ನಂಬಿಕೆಯಿಟ್ಟು ಅವರ ಸಾಕ್ಷಿಗಳಾಗಿ ಬಾಳಿದಾಗ ಮತ್ತು ಒಳಿತನ್ನು ಮಾಡಿ ದಾಗ ನಾವು ಆಶೀರ್ವಾದವನ್ನು ಪಡೆಯುತ್ತೇವೆ. ಪ್ರಾಪಂಚಿಕ ಅನುಭವಗಳಾದ ಕಷ್ಟಕಾರ್ಪಣ್ಯಗಳು, ದುಷ್ಟತನ ನಮ್ಮನ್ನು ಧೃತಿಗೆಡುವಂತೆ ಮಾಡುತ್ತವೆ ಎಂದು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಪ್ರಬೋಧನೆ ನೀಡಿದರು.
ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಪ್ರಮುಖ ಬಲಿಪೂಜೆ ನೆರವೇರಿಸಿ ಮಾತನಾಡಿದರು.
ಅಸ್ವಸ್ಥರಿಗಾಗಿ ವಿಶೇಷವಾಗಿ ಪೂಜೆ, ಪ್ರಾರ್ಥನೆ ನೆರವೇರಿಸ ಲಾಯಿತು.
ಮಂಗಳೂರು ಧರ್ಮಪ್ರಾಂತದ ಶ್ರೇಷ್ಠಗುರು ವಂ| ಮ್ಯಾಕ್ಸಿಮ್ ನೊರೊನ್ಹಾ ಬೆಳಗ್ಗೆ 10 ಗಂಟೆಯ ಬಲಿಪೂಜೆ ಅರ್ಪಿಸಿದರು. ದಿನದ ಇತರ ಬಲಿಪೂಜೆಗಳನ್ನು ವಂ| ಆಲ್ವಿನ್ ಸಿಕ್ವೇರಾ ಕಟೆRರೆ, ವಂ| ವೀರೇಶ್ ಮೋರಸ್ ಶಿವಮೊಗ್ಗ, ವಂ| ಥಾಮಸ್ ರೋಶನ್ ಡಿ’ಸೋಜಾ, ಗಂಗೊಳ್ಳಿ, ವಂ| ಆ್ಯಂಡ್ರು ಡಿ’ಸೋಜಾ ಬೋಂದೆಲ್ ನೆರವೇರಿಸಿದರು.
ವಂ| ವಿಕ್ಟರ್ ಡಿಮೆಲ್ಲೊ ಪಾನೀರ್ ನೆರವೇರಿಸಿದ ಬಲಿಪೂಜೆಯೊಡನೆ ಮೂರನೇ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು. ಮಾಜಿ ಶಾಸಕರಾದ ಅಭಯಚಂದ್ರ, ವಿನಯ್ ಕುಮಾರ್ ಸೊರಕೆ ಭೇಟಿ ನೀಡಿದರು.
4ನೇ ದಿನ ಬುಧವಾರ ಬೆಳಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಮಧ್ಯಾಹ್ನ 12 ಗಂಟೆ ಬಲಿಪೂಜೆ ಕನ್ನಡದಲ್ಲಿದ್ದು, 10 ಗಂಟೆಯ ವಿಶೇಷ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ.