ಮಾಡುವವರು ಕೂಡ ರೈನ್‌ಕೋಟ್ ಖರೀದಿಗೆ ಮುಂದಾಗುತ್ತಾರೆ.
Advertisement
ಯುವಸಮೂಹದ ಆಸಕ್ತಿಪ್ರಸ್ತುತ ಎಲ್ಲರೂ ಫ್ಯಾಶನ್ ಲೋಕಕ್ಕೆ ಒಗ್ಗಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಉಡುಗೆ, ತೊಡುಗೆ ಹಾಗೂ ಎಲ್ಲ ವಸ್ತುಗಳನ್ನು ಬದಲಾಯಿಸುತ್ತಾರೆ. ಮಳೆಗಾಲಕ್ಕೆ ರೈನ್ ಕೋಟ್ ಹೇಳಿ ಮಾಡಿಸಿದ್ದು. ನೋಡಲು ಒಂದೇ ರೀತಿ ಕಂಡರೂ ಅದರ ವಿನ್ಯಾಸ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ರೈನ್ ಜಾಕೆಟ್ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಹೆಚ್ಚಾಗಿ ಯುವ ಸಮೂಹವನ್ನು ಸೆಳೆಯುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಲೇಟೆಸ್ಟ್ ಟ್ರೆಂಡಿನ ರೈನ್ ಕೋಟ್ ಕಡೆಗೆ ಯುವ ಸಮೂಹ ಆಸಕ್ತರಾಗುತ್ತಾರೆ.
ಅದೆಷ್ಟೆ ದುಬಾರಿಯಾದರೂ ಸರಿ ಎಲ್ಲರಿಗಿಂತ ವಿಭಿನ್ನವಾಗಿ ಕಾಣಬೇಕು ಎಂಬ ಹಂಬಲವಿರುವ ಕೆಲವು ಮಂದಿ ಬಳಸುವ ವಸ್ತುಗಳಲ್ಲಿ
ವಿಭಿನ್ನತೆಯನ್ನು ಹುಡುಕುತ್ತಾರೆ. ಅಂತೆಯೇ ಮಳೆಗಾಲಕ್ಕೆ ದುಬಾರಿ ಬೆಲೆ ತೆತ್ತು ವಾಟರ್ ಪ್ರೂಫ್ ಜಾಕೆಟ್ ಖರೀದಿಸುತ್ತಾರೆ. ಇವು ಇತರ ಜಾಕೆಟ್‌ಗಳಿಗಿಂತ ಹೆಚ್ಚು ಸುರಕ್ಷಿತ. ಯಾವುದೇ ಕಾರಣಕ್ಕೂ ನೀರು ಒಳಪ್ರವೇಶಿಸದು. ಅದರೊಂದಿಗೆ ಎಷ್ಟೇ ವರ್ಷ ಕಳೆದರೂ ಜಾಕೆಟ್‌ಗೆ ಹಾನಿಯಾಗದು. ದುಬಾರಿಯೂ ಹೌದು
ಇತರ ಮಳೆಗಾಲದ ರೈನ್‌ಕೋಟ್ ಗಳು 1,000 ರೂ. ನಿಂದ 4,000ರೂ. ಒಳಗೆ ಲಭಿಸಿದರೆ ವಾಟರ್ ಪ್ರೂಫ್ ರೈನ್ ಕೋಟ್‌ಗಳು 5,000ರೂ.ನಿಂದ ಆರಂಭವಾಗಿ 30,000 ರೂ. ವರೆಗೂ ಮಾರುಕಟ್ಟೆಯಲ್ಲಿ ಲಭ್ಯವಿದೆ.
Related Articles
ವಾಟರ್ ಪ್ರೂಫ್ ಜಾಕೆಟ್‌ಗಳು ವಿವಿಧ ಬಣ್ಣ, ಆಕಾರ ಮತ್ತು ಆಕರ್ಷಕ ಶೈಲಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಮಳೆಗಾಲದಲ್ಲಿ ನೀರಿನಿಂದ ರಕ್ಷಣೆ ಪಡೆಯುವುದಕ್ಕಿಂತಲೂ ಫ್ಯಾಷನೇಬಲ್ ಆಗಿ ಕಾಣಿಸಿಕೊಳ್ಳುವತ್ತ ಯುವಜನತೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದಾರೆ. ಅದಕ್ಕೆ ತಕ್ಕುದಾದ ಜಾಕೆಟ್ ಗಳು ಲಭಿಸುತ್ತದೆ. ಚಿಕ್ಕ ಮಕ್ಕಳು, ಪುರುಷರು ಮತ್ತು ಮಹಿಳೆಯರಿಗಾಗಿ ವಿವಿಧ ಗಾತ್ರದಲ್ಲಿ ಸಿಗುತ್ತದೆ. ಉದ್ದನೆಯ ತೋಳಿನ ಅಂಗಿಗಳಿಗೆ ತೋಳಿಲ್ಲದ ಫ್ಯಾನ್ಸಿ ಜಾಕೆಟ್ ಸುಂದರವಾಗಿ ಕಾಣುತ್ತದೆ. ಜಾಕೆಟ್‌ಗಳಲ್ಲಿ ಬಟನ್ ಮತ್ತು ಜಿಪ್‌ಗ್ಳನ್ನು ಅಳವಡಿಸಿರುವುದರಿಂದ ತಮಗೆ ಸೂಕ್ತ ಎನಿಸುವ ಜಾಕೆಟ್ ಖರೀದಿಸಿಕೊಳ್ಳಬಹುದು.
Advertisement
ಪ್ರಜ್ಞಾ ಶೆಟ್ಟಿ