Advertisement

ಹೆಣ್ಮಕ್ಕಳ ಮನಸೆಳೆಯುತ್ತಿದೆ ಶರ್ಟ್‌ ಡ್ರೆಸ್‌

02:45 PM Aug 10, 2018 | |

ಹೆಣ್ಣುಮಕ್ಕಳು ಸೀರೆಯಿಂದಲೇ ಸಮಾರಂಭಗಳನ್ನು ಕಳೆಯುವ ಸಮಯ ಕಳೆದು ಅದೆಷ್ಟೋ ದಶಕಗಳಾಗಿವೆ. ದಿನಕ್ಕೊಂದರಂತೆ ಬರುವ ಟ್ರೆಂಡಿ ಬಟ್ಟೆಗಳನ್ನು ಧರಿಸಿ ಮಿಂಚುವ ಹೆಣ್ಣುಮಕ್ಕಳಿಗೆ ಎಲ್ಲರ ನಡುವೆ ಆಕರ್ಷಕವಾಗಿ ಕಾಣುವಂತೆ ಬಟ್ಟೆಗಳನ್ನು ಧರಿಸಬೇಕೆಂಬ ಹಂಬಲವಿರುತ್ತದೆ. ಅದಕ್ಕೆ ತಕ್ಕಂತಹ ಬಟ್ಟೆಗಳನ್ನು ಡಿಸೈನ್‌ ಮಾಡಲು ಡಿಸೈನರ್‌ಗಳು ಸಿದ್ಧರಿರುತ್ತಾರೆ.

Advertisement

ಸಿನೆಮಾ ತಾರೆಯರಂತೂ ಅವರ ಪಾತ್ರಕ್ಕೆ ತಕ್ಕಂತೆ ಬಟ್ಟೆ ರೆಡಿ ಮಾಡಿಕೊಳ್ಳುತ್ತಾರೆ. ಇನ್ನೂ ಸಮಾರಂಭಗಳಿಗಾಗಿಯೇ ವಿಭಿನ್ನವಾಗಿ ಕಾಣಿಸಿಕೊಳ್ಳಲು ಸಿದ್ಧರಾಗುವುದು ಬೇರೆಯೇ ಇದೆ. ಇದೀಗ ಬಹುತೇಕ ಸಿನಿಮಾ ತಾರೆಯರು ಇದೀಗ ಶರ್ಟ್ಸ್ ಡ್ರೆಸ್‌ನತ್ತ ವಾಲಿದ್ದಾರೆ.  ಆಕರ್ಷಕವಾಗಿ ಕಾಣುವ ಶರ್ಟ್ಸ್ ಡ್ರೆಸ್‌ ನಾನಾ ಬಗೆಯ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

ಪಾರ್ಟಿ ಹಾಗೂ ಇತರ ಕ್ಯಾಶುವಲ್‌ ಸಮಾರಂಭಗಳಲ್ಲಿ ಸಿಂಪಲ್‌ ಆಗಿ ಕಾಣಲು ಈ ಬಟ್ಟೆಯನ್ನು ಬಹುತೇಕ ಮಂದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ರೀತಿಯ ಬಟ್ಟೆಗಳು ನೋಡಲು ಪುರುಷರ ಶರ್ಟ್‌ನಂತೆ ಕಾಣುತ್ತವೆ. ಚೆಕ್ಸ್‌ ವಿನ್ಯಾಸದಲ್ಲಿರುವ ಈ ಬಟ್ಟೆಗಳು ಮೊಣಕಾಲು ಉದ್ದ, ಇತರ ಶರ್ಟ್‌ಗಳಂತೆ ಸೊಂಟದವರೆಗೆ ಇರುತ್ತದೆ. ಸೊಂಟದವರೆಗೆ ಇರುವ ಬಟ್ಟೆಗಳಿಗೆ ಜೀನ್ಸ್‌ ಧರಿಸಲಾಗುತ್ತದೆ. ಇನ್ನೂ ಮೊಣಕಾಲಿನುದ್ದಕ್ಕಿರುವ ಶರ್ಟ್‌ಗಳಿಗೆ ಪ್ಯಾಂಟ್‌ ಧರಿಸದೆ ಇರುವುದೇ ಚೆನ್ನ.

ಈ ಉಡುಪುಗಳು ರೆಡಿ ಟು ವೇರ್‌ ಕಾನ್ಸೆಪ್ಟ್ ನಲ್ಲಿ ದೊರಕುವುದರಿಂದ ಖರೀದಿಸಿದ ಕೂಡಲೇ ಧರಿಸಬಹುದು. ಶಾಪಿಂಗ್‌ ಸೆಂಟರ್‌ಗಳಿಗೆ ತೆರಳಿ ಖರೀದಿಸಿದರೆ ಆಲ್ಟ್ರೇಶನ್ ನ್‌ ಮಾಡುವ ಪ್ರಮೇಯ ಬರುವುದಿಲ್ಲ. ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಡ್ರೆಸ್‌ ವಿನ್ಯಾಸಕ್ಕೆ ಬಹುತೇಕ ಯುವತಿಯರು ಮಾರು ಹೋಗುತ್ತಿದ್ದಾರೆ.

ಡ್ರೆಸ್‌ ಆಯ್ಕೆ ಮಾಡುವಾಗ ಎಚ್ಚರ
ಡಾಟ್ಸ್‌, ಇಲ್ಲವೇ ಡೈಮಂಡ್‌, ಸ್ಕ್ವೇರ್‌, ಬಾಕ್ಸ್‌ ಶೇಪ್‌, ಪ್ರಿಂಟ್ಸ್‌ ಇರುವ ಶರ್ಟ್‌ ಡ್ರೆಸ್‌ಗಳನ್ನು ಧರಿಸುವಾಗ ಎಚ್ಚರವಹಿಸಬೇಕು. ಯಾಕೆಂದರೆ, ಎಲ್ಲರಿಗೂ ಈ ರೀತಿ ಬಟ್ಟೆಗಳು ಒಪ್ಪದು. ಅದರಲ್ಲೂ ಲೈಟ್‌ ಕಲರ್‌ನ ಶರ್ಟ್‌ಗಳ ಮೇಲೆ ಇಂತಹ ಡಾಟ್ಸ್‌ ಎದ್ದು ಕಾಣುತ್ತವೆ. ಡಾರ್ಕ್‌ ಕಲರ್‌ನ ಶರ್ಟ್‌ ಮೇಲೆ ಇಂತಹ ಡಾಟ್ಸ್‌ ಎದ್ದು ಕಾಣುವುದಿಲ್ಲ. ಇವು ಕೊಂಚ ಕಾರ್ಪೊರೇಟ್‌ ಲುಕ್‌ ನೀಡುತ್ತವೆ. ನಮ್ಮ ಮೈಬಣ್ಣ ಹಾಗೂ ಧರಿಸುವ ಬಟ್ಟೆಯ ಬಣ್ಣ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸಿ ಖರೀದಿಸಬೇಕಾಗುತ್ತದೆ.

Advertisement

ಡ್ರೆಸ್‌ ಮೆಟೀರಿಯಲ್‌ ಮೇಲೆ ದರ ನಿಗದಿ
ಶರ್ಟ್‌ ಡ್ರೆಸ್‌ ಕಾಟನ್‌ನಲ್ಲೇ ಹೆಚ್ಚಾಗಿ ಬರುತ್ತದೆ. ಅದನ್ನು ಹೊರತುಪಡಿಸಿ ಇನ್ನಿತರ ಬಟ್ಟೆ ಮೆಟೀರಿಯಲ್‌ಗ‌ಳಲ್ಲಿ ಬಟ್ಟೆ ಬರುವುದರಿಂದ ಅದರ ಮೇಲೆ ದರ ನಿಗದಿಯಾಗುತ್ತದೆ. ಇದೀಗ ಶಟ್ಸ್‌ ಡ್ರೆಸ್‌ ಟ್ರೆಂಡ್‌ ಆಗಿರುವುದರಿಂದ ಬಟ್ಟೆಯ ದರದ ಬಗ್ಗೆ ತಲೆಕೆಡಿಸುವ ಗೋಜಿಗೆ ಯುವತಿಯರಂತೂ ಹೋಗುವುದಿಲ್ಲ.

ಕಾಲೇಜು ಹುಡುಗಿಯರ ಮೊದಲ ಆಯ್ಕೆ
ಕಾಲೇಜಿಗೆ ಹೋಗುವ ಹುಡುಗಿಯರಂತೂ ಟೀ -ಶರ್ಟ್‌ನಿಂದ ಶರ್ಟ್‌ ಡ್ರೆಸ್‌ನತ್ತ ವಾಲಿದ್ದಾರೆ. ಅದರಲ್ಲೂ ಕೊಂಚ ಫಂಕಿ ಲುಕ್‌ ನೀಡುವ ಡಾಟ್ಸ್‌ ಪ್ರಿಂಟ್‌ ಇರುವ ಬ್ಲಾಕ್‌ ಶರ್ಟ್‌ಗಳು ಇಂದು ಟ್ರೆಂಡಿಯಾಗಿವೆ. ಕಲರ್‌ ಫುಲ್‌ ಶರ್ಟ್‌ ಗಳ ಮೇಲೂ ಡೆ„ಮಂಡ್‌, ಸ್ಕ್ವೇರ್‌ ಇರುವಂತಹ ಡಿಸೈನ್‌ಗಳು ಹುಡುಗಿಯರಿಗೆ ಪ್ರಿಯವಾಗಿವೆ. 

 ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next