Advertisement

ಲಾಕ್‌ಡೌನ್‌ದಲ್ಲಿ ಬರಹದ ಮೂಲಕ ಗಮನ ಸೆಳೆದ ಮನಸ್ವಿ

06:18 PM Mar 03, 2021 | Team Udayavani |

ಕಲಬುರಗಿ: ಲಾಕ್‌ಡೌನ್‌ ಎಂಬ “ಗೃಹ ಬಂಧನ’ ಅವ ಧಿಯನ್ನೇ ಸದುಪಯೋಗ ಪಡಿಸಿಕೊಂಡ 17 ವರ್ಷದ ವಿದ್ಯಾರ್ಥಿನಿ ಮನಸ್ವಿ ಪಾಟೀಲ ತಮ್ಮ ಬರವಣಿಗೆ
ಮೂಲಕ ದೇಶದ ಗಮನ ಸೆಳೆದಿದ್ದಾರೆ. ಕೆಲವೇ ಕೆಲ ತಿಂಗಳ ಪರಿಶ್ರಮಕ್ಕೆ ಅವರಿಗೆ ಅಂತರಾಷ್ಟ್ರೀಯ ಮಟ್ಟದ “ಕಲಾಂ ಗೋಲ್ಡನ್‌ ಅವಾರ್ಡ್‌’ ಒಲಿದು ಬಂದಿದೆ.

Advertisement

ನಗರದ ರಾಮ ಮಂದಿರ ವೃತ್ತದ ಅಫಜಲಪುರ ರಸ್ತೆಯ ಬಿ.ಎಲ್‌ .ನಗರ ನಿವಾಸಿಯಾಗಿರುವ ಮನಸ್ವಿ ಪಾಟೀಲಗೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್‌ ಫೌಂಡೇಷನ್‌ದವರು 2021ರ ಕಲಾಂ ಗೋಲ್ಡನ್‌ ಅವಾರ್ಡ್‌ ವಿಭಾಗದಲ್ಲಿ ಉತ್ತಮ ಬರಹಗಾರ್ತಿ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪ್ರತಿಷ್ಠಿತ ಶರಣಬಸವೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಮನಸ್ವಿ, ಚಿಕ್ಕಂದಿನಿಂದಲೂ ತುಂಬಾ ಕ್ರಿಯಾಶೀಲ ವಿದ್ಯಾರ್ಥಿನಿ. ಹವ್ಯಾಸಕ್ಕಾಗಿ ಒಂದೆರಡು ಸಾಲುಗಳ “ಕೋಟ್‌’ ಬರೆಯುವ ಚುಟುಕು ಸಾಹಿತ್ಯ ರೂಢಿಸಿಕೊಂಡಿದ್ದರು. ಆದರೆ, ಲಾಕ್‌ ಡೌನ್‌ ಕಾಲ ಇವರನ್ನು ಓರ್ವ ಮೊನಚು ಬರಹಗಾರ್ತಿಯನ್ನಾಗಿ ರೂಪಿಸಿದೆ. ಕಳೆದ ಏಪ್ರಿಲ್‌ನಲ್ಲಿ ಆರಂಭವಾದ ಇವರ ಬರಹ ಇದೀಗ ದೇಶದ ವಿವಿಧ ಪ್ರಕಾಶನಗಳು ಪ್ರಕಟಿಸಿದ ಪುಸ್ತಕಗಳಲ್ಲಿ ಅಚ್ಚಾಗಿದೆ. ಇಲ್ಲಿಯವರೆಗೆ 50ಕ್ಕೂ ಹೆಚ್ಚು ಪುಸ್ತಕಗಳಿಗೆ ಬರೆದುಕೊಟ್ಟಿದ್ದಾರೆ.

ಈಗಾಗಲೇ 25 ಪುಸ್ತಕಗಳು ಹೊರ ಬಂದಿವೆ. “ದಿವ್ಯಾಂ-ಲೈಫ್‌ ಆ್ಯಂಡ್‌ ರಿಯಾಲಿಟಿ ವಿಥಿನ್‌’ ಪುಸ್ತಕದಲ್ಲಿ ಪ್ರಕಟಗೊಂಡ “ಸೈನ್ಸ್‌ ನೀಡ್ಸ್‌ ಮೈಥ್ಸ್ ಟು ಥ್ರಿವ್‌’ ಇಂಗ್ಲಿಷ್‌ ಪಂದ್ಯಕ್ಕೆ ಈ ಕಲಾಂ ಗೋಲ್ಡನ್‌ ಅವಾರ್ಡ್‌ ದೊರೆತಿದೆ.

ಇಂಗ್ಲಿಷ್‌ ಮೇಲೆ ಹಿಡಿತ: ವಿಜ್ಞಾನ ವಿದ್ಯಾರ್ಥಿನಿಯಾಗಿರುವ ಮನಸ್ವಿ ಪಾಟೀಲ್‌ ಇಂಗ್ಲಿಷ್‌ ಮೇಲೆ ಹಿಡಿತ ಹೊಂದಿದ್ದಾರೆ. ಇಂಗ್ಲಿಷ್‌ನಲ್ಲೇ ತಮ್ಮ ಬರವಣಿಗೆ ಕೌಶಲ ಹೆಚ್ಚಿಸಿಕೊಂಡಿದ್ದಾರೆ. ಹೊಸ ಆಲೋಚನೆ, ಹೊಸ ಚಿಂತನೆಯೊಂದಿಗೆ ಇಂಗ್ಲಿಷ್‌ನಲ್ಲಿ ತಮ್ಮದೇ ಆದ ಕವನಗಳು, ಉಲ್ಲೇಖಗಳು (ಕೋಟ್‌) ಬರೆಯುತ್ತಿದ್ದಾರೆ.

Advertisement

ಶಾಲಾ ಮತ್ತು ಕಾಲೇಜಿನಲ್ಲಿ ಕಾರ್ಯಕ್ರಮ ನಿರೂಪಣೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ತೊಡಿಸಿ ಕೊಳ್ಳುತ್ತಿದ್ದೆ. ಸಮಯ ಸಿಕ್ಕಾಗ ಮನಸ್ಸಿನಲ್ಲಿ ಮೂಡುತ್ತಿದ್ದ ಚಿಕ್ಕ-ಚಿಕ್ಕ “ಕೋಟ್‌’ ಬರೆಯುತ್ತಿದ್ದೆ. ಆದರೆ, ಲಾಕ್‌ಡೌನ್‌ ಸಮಯದಲ್ಲಿ ಮನೆಯೊಳಗೆ ಕೂಡಿ ಹಾಕಿದಂತೆ ಆಗಿತ್ತು. ಹೀಗಾಗಿ ಮನೆಯಲ್ಲಿ ಸಮಯ ಕಳೆಯಲು ಮತ್ತು ಬೇಸರ ದೂರ ಮಾಡಿಕೊಳ್ಳಲು ಪದ್ಯಗಳು ಮತ್ತು ಶಾಯಿರಿ ಬರೆಯಲು ಶುರು ಮಾಡಿದೆ ಎನ್ನುತ್ತಾರೆ ಮನಸ್ವಿ. ನಾನು ವಿಜ್ಞಾನ ವಿದ್ಯಾರ್ಥಿನಿ ಆಗಿರುವುದರಿಂದ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಪದ್ಯಗಳು ಹೆಚ್ಚಾಗಿ ಬರೆಯುತ್ತೇನೆ. ವಿಜ್ಞಾನದೊಂದಿಗೆ ವಿಧಾನಶಾಸ್ತ್ರ ಹೋಲಿಕೆ ಮಾಡಿ ಬರೆಯುವುದು ಇಷ್ಟ. ಜತೆಗೆ ಪ್ರಕೃತಿ, ಬಾಲ್ಯ, ಸ್ನೇಹ, ನೆನಪು ಹೀಗೆ ಬೇರೆ ವಿಷಯದ ಬಗ್ಗೆಯೂ ಬರೆದಿದ್ದೇನೆ ಎಂದು ಹೇಳುತ್ತಾರೆ.

ಇನ್‌ಸ್ಟಾಗ್ರಾಮ್‌ “ಸೇತುವೆ’
ಮನಸ್ವಿ ಪಾಟೀಲ ಅವರ ಬರಹ ಹೊರ ಜಗತ್ತಿಗೆ ಬರಲು ಸೇತುವೆ ಆಗಿರುವುದು ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ “ಇನ್‌ಸ್ಟಾಗ್ರಾಮ್‌’. ತಮ್ಮ
ಬರಹಕ್ಕೆ “ಫೋಟೋ ಫ್ರೇಮ್‌’ ಮಾಡಿ ಅದರ ಅಂದ ಹೆಚ್ಚಿಸಿ “ಇನ್‌ಸ್ಟಾಗ್ರಾಮ್‌ ‘ನಲ್ಲಿ ಹಂಚಿಕೊಳ್ಳುತ್ತಿದ್ದರು. ಅಲ್ಲಿ ಅನೇಕರು ಇವರ ಬಹರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೊದಲ ಬಾರಿಗೆ ದೆಹಲಿಯ ಇನ್‌ಫೆದರ್ ಪ್ರಕಾಶನದವರು “ಮೆಮೋರಿ ಕಾರ್ಡ್‌’ ಎನ್ನುವ ಕವನವನ್ನು ಗಮನಿಸಿ, ಕಮೆಂಟ್‌ ಮತ್ತು ಇನ್‌ಬಾಕ್ಸ್‌ ಗೆ ಮೇಸೆಜ್‌ ಕಳಿಸುವ ಮೂಲಕ ಇವರು ಸಂಪರ್ಕಿಸಿದರು. ತಮ್ಮ ಬರಹ ಚೆನ್ನಾಗಿದೆ ಎಂದು “ಮಿಡ್‌ನೈಟ್‌ ರೈಟರ್’ ಎನ್ನುವ “ಮೆಮೋರಿ ಕಾರ್ಡ್‌’ ಕವನ
ಪ್ರಕಟಿಸಿದರು. ಅಲ್ಲಿಂದ ಅವರು ಬರಹ ಆರಂಭವಾಗಿ, ಇದುವರೆಗೆ 52 ಪುಸ್ತಕಗಳಿಗೆ ತಮ್ಮ ಬರಹಗಳನ್ನು ಬರೆದುಕೊಟ್ಟಿದ್ದಾರೆ. 25 ಪುಸ್ತಕಗಳು ಹೊರ ಬಂದಿದ್ದು, ಇನ್ನೂ 27 ಪುಸ್ತಕಗಳು ಪ್ರಕಟಣೆ ಹಂತದಲ್ಲಿವೆ ಎಂದು ಮನಸ್ವಿ ಪಾಟೀಲ ಹೇಳಿಕೆ.

ಏಳೆಂಟು ತಿಂಗಳ ಹಿಂದೆಷ್ಟೇ ಬರವಣಿಗೆ ನನಗೆ ಕೇವಲ ಹವ್ಯಾಸ ಆಗಿತ್ತು. ಈಗ ಅದು ನನಗೆ ಚೈತನ್ಯದಾಯಕವಾಗಿದೆ. ನನ್ನ ಬರಹದ ಬಗ್ಗೆ ಪ್ರಶಂಸೆ
ವ್ಯಕ್ತವಾಗುತ್ತಿದ್ದು, ಖುಷಿ ಪಡೆಯುವಂತೆಯೂ ಆಗಿದೆ. ಯಾವುದೋ ಜವಾಬ್ದಾರಿ ನಮ್ಮ ಮೇಲೆ ಹೆಚ್ಚುವಂತೆ ಮಾಡಿದ ಭಾವನೆ ಮೂಡುತ್ತಿದೆ.
ಮನಸ್ವಿ ಪಾಟೀಲ, ಯುವ ಬರಹಗಾರ್ತಿ

Advertisement

Udayavani is now on Telegram. Click here to join our channel and stay updated with the latest news.

Next