Advertisement
ಹೂ ಮತ್ತು ತರಕಾರಿಗಳಿಂದ ಅಲಂಕರಿಸಿದ ವಿವಿಧ ಸ್ತಬ್ಧಚಿತ್ರಗಳು, ಡಾ.ಎಂ.ಮರೀಗೌಡರ ಮರಳಿನ ಕೆತ್ತನೆ, ದೊಣ್ಣೆ ಮೆಣಸಿನಕಾಯಿ, ಮನೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖಾ ಮಳಿಗೆಗೆಳು, ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷಿಕೆ, ಆಧುನಿಕ ಪದ್ಧತಿಯಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆ, ಹಸಿರು ಮನೆಯಲ್ಲಿ ಇಂಗ್ಲಿಷ್ ಸೌತೆ ಕಾಯಿ, ಕೈತೋಟ ಮತ್ತು ತಾರಸಿ ತೋಟ, ಜೇನು ಸಾಕಣೆ ಪ್ರಾತ್ಯಕ್ಷಿಕೆ, ಹೈಡ್ರೋಪೋನಿಕ್ಸ್ ಮಾದರಿ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳಲ್ಲಿ ಕೆತ್ತನೆ ಮಾಡಿದ್ದ ಕಲಾಕೃತಿಗಳು ವೀಕ್ಷಕರ ಗಮನ ಸೆಳೆದವು.
Related Articles
Advertisement
ತಾಲೂಕು ಮಟ್ಟದಲ್ಲಿ ಕೋಲಾರದ ಮೈಲಾಂಡಹಳ್ಳಿಯ ಎ.ಸಿ.ಎತ್ನಮ್ಮ, ಕಲ್ವ ಕೆ.ಎಸ್.ಮಂಜುನಾಥ್, ಯಡಹಳ್ಳಿಯ ವಿ.ರಘು, ಕಲ್ಲೂರು ಕೆ.ಎನ್.ಬಸವರಾಜ, ಶಿಳ್ಳಂಗೆರೆ ವಿ.ನಾರಾಯಣಸ್ವಾಮಿ, ಮುಳಬಾಗಿಲಿನ ಊರುಕುಂಟೆ ಮಿಟ್ಟೂರು ಕೆ.ಎಂ.ಸಾವಿತ್ರಮ್ಮ, ಮಂಡಿಕಲ್‌ನ ಎಂ.ವಿ.ನೇತಾಜಿ, ಯಚ್ಚನಹಳ್ಳಿ ವನಜಾಕ್ಷಮ್ಮ, ಮರಳಮೇಡು ಡಿ. ರಾಮಚಂದ್ರ, ಎಚ್ ಕೋಡಿಹಳ್ಳಿ ರಾಧಾಕೃಷ್ಣ, ಶ್ರೀನಿವಾಸಪುರದ ಗೆಂಟರನ್ನಗಾರಪಲ್ಲಿ ಆರ್.ರೆಡ್ಡಪ್ಪ, ಜೋಡಿಕೊತ್ತಪಲ್ಲಿ ಕೆ.ಎಸ್.ಮಂಜುನಾಥ್, ಪುಲಗುಟ್ಲಪಲ್ಲಿ ಸುಧಾಕರ, ದಿಂಬಾಲ ಕೆ.ಎನ್. ಶಿವಮ್ಮ, ಲಕ್ಷ್ಮಣಪುರ ಜಿ.ರಾಮಾಂಜಿರನ್ನು ಆಯ್ಕೆ ಮಾಡಲಾಗಿದೆ.
ಮಾಲೂರು ತಾಲೂಕಿನ ಎಂ.ಹೊಸಹಳ್ಳಿ ವೆಂಕಟೇಗೌಡ, ಪುರ ಆರ್. ನಾಗರಾಜ್, ರಾಜೇನಹಳ್ಳಿಯ ಎ.ಎನ್.ಅಬ್ಬಯ್ಯ, ನೆಲ್ಲಹಳ್ಳಿಯ ಆರ್. ವೆಂಕಟೇಶ್, ದ್ಯಾಪಸಂದ್ರದ ಡಿ.ಕೆ.ಮುನಿಶಾಮಿಗೌಡ, ಬಂಗಾರ ಪೇಟೆಯ ಕಾಮಾಂಡಹಳ್ಳಿ ಶಿವಣ್ಣ, ಕ್ಯಾಸಂಬಳ್ಳಿಯ ಸರಸ್ವತಮ್ಮ, ಅಕ್ಕಮ್ಮನದಿನ್ನೆ ವಿ.ರಾಮಕೃಷ್ಣಪ್ಪ, ಹೊಸಕೋಟೆಯ ಸಿ.ಕೃಷ್ಣಪ್ಪ, ಕಾರಮಾನಹಳ್ಳಿಯ ಪದ್ಮಾವತಿರನ್ನು ಸಚಿವರು ಸನ್ಮಾನಿಸಿದರು. ಸಂಸದ ಎಸ್ ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷ ಸಿ.ಎಸ್ ವೆಂಕಟೇಶ್, ಉಪಾಧ್ಯಕ್ಷರಾದ ಯಶೋದಾ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಉಪಸ್ಥಿತರಿದ್ದರು.