Advertisement

ತಿಮ್ಮಕ್ಕ ಗಾರ್ಡನ್‌ನಲ್ಲಿ ಚಿಟ್ಟೆ ಪಾರ್ಕ್‌ಗೆ ಯತ್ನ

05:48 PM Dec 04, 2019 | Team Udayavani |

ಕಾರವಾರ: ಇಲ್ಲಿನ ಕಡಲತೀರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದಲ್ಲೇ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಚಿಟ್ಟೆ ಪಾರ್ಕ್‌ಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಯ ಯತ್ನಗಳು ಸದ್ದಿಲ್ಲದೇ ಸಾಗಿವೆ. ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಚಿಟ್ಟೆಗಳ ಉದ್ಯಾನ, ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಪತಂಗ ಉದ್ಯಾನವನ ಆಗಲಿದೆ ಎಂಬ ಹೆಗ್ಗಳಿಕೆ ಪಡೆದಿರುವ ಸದರ್ನ್ ಬಟರ್‌ ಫ್ಲೈ ಗಳನ್ನೂ ಒಳಗೊಂಡು ಸುಮಾರು 48 ಪ್ರಭೇದದ ಚಿಟ್ಟೆಗಳಿಗೆ ಆಶ್ರಯ ಕಲ್ಪಿಸಿದೆ.

Advertisement

ಕೋಡಿಬಾಗದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ ಸುಮಾರು 1.5 ಹೆಕ್ಟೇರ್‌ ವಿಸ್ತಾರವಾದ ಜಾಗ ಹೊಂದಿದೆ. ಇದರಲ್ಲಿ ಈಗಾಗಲೇ ಸುಮಾರು 16 ಎಕರೆ ಜಾಗವನ್ನು ಅಭಿವೃದ್ಧಿಪಡಿಸಿ ವೃಕ್ಷಉದ್ಯಾನ ನಿರ್ಮಾಣ ಮಾಡಲಾಗಿದೆ. ಅದರಲ್ಲೇ 2 ಗುಂಟೆ ಪ್ರದೇಶವನ್ನು ಈಗ ಚಿಟ್ಟೆ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರವೇಶದ್ವಾರದ ಒಳ ಹೊಕ್ಕುತ್ತಿದ್ದಂತೆ ಎಡಭಾಗದಲ್ಲೇ ಈ ಉದ್ಯಾನವಿದೆ. ಉದ್ಯಾನದ ಒಳಭಾಗದಲ್ಲಿ ಚಿಟ್ಟೆಗಳು ಕುಳಿತು ಪರಾಗಸ್ಪರ್ಶ ಕ್ರಿಯೆ ನಡೆಸಲು ಅನುಕೂಲವಾಗುವ ಹಾಗೂ ಹೆಚ್ಚು ಮಕರಂದ ನೀಡುವ ಚಿಕ್ಕ ಚಿಕ್ಕಹೂವುಗಳ ಹಾಗೂ ಕಾಡು ಗಿಡಗಳನ್ನು ಬೆಳೆಸಲಾಗಿದೆ. ಮಳೆಗಾಲದಲ್ಲಿ ಇನ್ನಷ್ಟು ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಮಧ್ಯಮ ಪ್ರಮಾಣದ ಬಿಸಿಲು ಹಾಗೂ ತಂಪಿನ ವಾತಾವರಣ ಚಿಟ್ಟೆಗಳು ಬಯಸುವುದರಿಂದ ಉದ್ಯಾನದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.

ಸದ್ಯ ಪ್ರಾಯೋಗಿಕವಾಗಿ ಸಣ್ಣ ಜಾಗದಲ್ಲಿ ಚಿಟ್ಟೆ ಉದ್ಯಾನ ಅಭಿವೃದ್ಧಿಗೊಳ್ಳುತ್ತಿದೆ. ಇದು ಯಶಸ್ವಿಯಾದರೆ ಮತ್ತಷ್ಟು ಪ್ರದೇಶದಲ್ಲಿ ಉದ್ಯಾನವಿಸ್ತರಿಸಲಾಗುತ್ತದೆ. ಚಿಟ್ಟೆಯ ಕುರಿತಾದ ಮಾಹಿತಿ ಫಲಕಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಉದ್ಯಾನಕ್ಕೆ ಭೇಟಿ ನೀಡುವವರಿಗೆ ಚಿಟ್ಟೆಗಳ ಜೀವನ ಶೈಲಿಯ ಬಗ್ಗೆ ಮಾಹಿತಿ ಒದಗಿಸುವಕಾರ್ಯವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next