Advertisement

ಗಡಿನಾಡ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಜಯಮಾಲಾ

07:00 AM Jul 27, 2018 | Team Udayavani |

ಕಾಸರಗೋಡು: ಕಾಸರಗೋಡಿನ ಸಾಹಿತ್ಯ ವಲಯದ ಕನ್ನಡ ಚಳವಳಿಗಾರರ ಸಮಗ್ರ ಮಾಹಿತಿ ಕಲೆಹಾಕಿ ಕೈಪಿಡಿಯನ್ನು ಹೊರತರುವ ಕಾರ್ಯ ಶ್ಲಾಘನೀಯ ಎಂದು ಬಹುಭಾಷಾ ಚಿತ್ರನಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು. 

Advertisement

ಮಂಗಳೂರಿನಲ್ಲಿ ಕೈರಳಿ ಪ್ರಕಾಶನ ಬಿಡುಗಡೆಗೊಳಿಸುವ ಕಾಸರಗೋಡಿನ ಸಾಹಿತಿಗಳ ಮಾಹಿತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೈರಳಿ ಪ್ರಕಾಶನಕ್ಕೆ ಅಭಿನಂದನೆ
ಕಾಸರಗೋಡು ಬಹುಭಾಷೆ, ಸಂಸ್ಕೃತಿ ಗಳ ನೆಲೆವೀಡು. ಕನ್ನಡ ಸಾರಸ್ವತ ಲೋಕವು ಇಲ್ಲಿ ಸಂಪತ್ಸಮೃದ್ಧವಾಗಿದೆ. ಇಲ್ಲಿನ ಕನ್ನಡ ಹೋರಾಟ, ಚಳವಳಿಯು ದೇಶಕ್ಕೇ ಮಾದರಿ. ಆದರೆ ಇಲ್ಲಿನ ಸಾಹಿತಿಗಳ, ಚಳವಳಿಗಾರರ ಸಮಗ್ರ ಮಾಹಿತಿಯ ದಾಖಲೀಕರಣ ಇನ್ನೂ ಆಗಿಲ್ಲ. ಆ ನಿಟ್ಟಿನಲ್ಲಿ   ಸಮಗ್ರ ಮಾಹಿತಿಯ ಕೋಶ ರಚಿಸಲು ಮುಂದಾಗಿರುವ ಕೈರಳಿ ಪ್ರಕಾಶನದ  ಸಾಹಸ ನಿಜಕ್ಕೂ   ಶ್ಲಾಘನೀಯ. ಪ್ರಕಾಶಕರು ಅಭಿನಂದನಾರ್ಹರೆಂದು ಅವರು ಹೇಳಿದರು.

ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇನೆ. ಇಲ್ಲಿನ ಸಮಸ್ಯೆ ಪರಿಹಾರಕ್ಕೆ ತನ್ನಿಂದಾದ ಪ್ರಯತ್ನ ನಿರ್ವಹಿಸುವುದಾಗಿಯೂ ಭರವಸೆಯನ್ನಿತ್ತರು. ಈ ಸಂದರ್ಭದಲ್ಲಿ ಕೈರಳಿ ಪ್ರಕಾಶನದ ಎ.ಆರ್‌. ಸುಬ್ಬಯ್ಯಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ನಿವೃತ್ತ ಪ್ರಾಂಶುಪಾಲ ಪ್ರೊ| ಶ್ರೀನಾಥ್‌, ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‌ ನಿದೆೇìಶಕರಾದ ದೇವಿಪ್ರಸಾದ್‌ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕೋಶಾಧಿ ಕಾರಿ ರವಿ ನಾಯ್ಕಪು ಮೊದಲಾದವರು ಉಪಸ್ಥಿತರಿದ್ದರು.

ಎಲೆಮರೆಯ ಕಾಯಿಗಳಾಗಿರುವ ಕಾಸರಗೋಡಿನ ಪ್ರತಿಭಾವಂತ ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಹೊರ ತರುವ ಕೈಂಕರ್ಯ ಕೈರಳಿ ಪ್ರಕಾಶನವು ಮುಂದುವರಿಸಿದೆ. ಇದೀಗ ಎರಡನೇ ಹಂತವಾಗಿ ಕನ್ನಡ ಸಾಹಿತಿಗಳ, ಚಳವಳಿಗಾರರ ಪರಿಶ್ರಮ, ಕಟ್ಟುಪಾಡು, ವಚನ ಬದ್ಧತೆ, ಸಾಧನೆ ಮತ್ತು ಕೊಡುಗೆ ಗಳನ್ನು ಗುರುತಿಸುವ, ಪರಿಚಯಿಸುವ, ದಾಖಲಿಸುವ ಅಭಿಯಾನ ಕೈಗೊಂಡಿದೆ ಎಂದು ಎ.ಆರ್‌. ಸುಬ್ಬಯ್ಯಕಟ್ಟೆ. ಹೇಳಿದರು. 

Advertisement

ಕಾಸರಗೋಡು ವಲಯ ಸಾಹಿತಿಗಳು ಜಯಮಾಲಾ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next