Advertisement

ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಯತ್ನ

04:21 PM Jan 20, 2020 | Suhan S |

ಶಿರಸಿ: ತಾಲೂಕಿನ ಕೋಳಿಗಾರನಲ್ಲಿ ಭಾನುವಾರ ನಡೆದ ರಾಸು ಪ್ರದರ್ಶನ ಹಾಗೂ ಬರಡು ದನ ಚಿಕಿತ್ಸಾ ಶಿಬಿರ ಜನ ಮೆಚ್ಚುಗೆಗೆ ಪಾತ್ರವಾಯಿತು.

Advertisement

ಕೆ.ಎಂ.ಎಫ್‌ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ರಾಸು ಪ್ರದರ್ಶನಕ್ಕೆ ಚಾಲನೆ ನೀಡಿ, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಕೇಂದ್ರ ರಚಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಈ ಕುರಿತು ಹೋರಾಡುತ್ತಿದ್ದೇವೆ ಎಂದರು. ದೇಶಿ ತಳಿಗಳಿಗೆ ವಿದೇಶಿ ತಳಿಗಳ ಮಿಶ್ರಣದಿಂದಗುಣಮಟ್ಟದ ತಳಿಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕೆ.ಎಂ.ಎಫ್‌ ಹಾಗೂ ಪಶು ಇಲಾಖೆ ತಳಿಗಳ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸುತ್ತಿದೆ ಎಂದರು.

ಹಳ್ಳಿ ಬಿಟ್ಟು ಪಟ್ಟಣ ಸೇರಿದ ಯುವಕರಲ್ಲಿಯೂ ಹೈನುಗಾರಿಕೆ ಕುರಿತು ಜಾಗೃತಿ ಮೂಡಿದೆ. ಕೃಷಿ ಲಾಭದಾಯವೆಂಬಜಾಗೃತಿ ಮೂಡಿಸಿ ಪುನಃ ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಹೆಚ್ಚಿಸುವ ಕಾರ್ಯ ಮಾಡಬೇಕಿದೆ ಎಂದರು. ಪಶು ಇಲಾಖೆ ಉಪನಿರ್ದೇಶಕ ಡಾ| ಸುಬ್ರಾಯ ಭಟ್ಟ ಮಾತನಾಡಿ, ಈಚೆಗೆ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಯುವಕರು ಪಶುವೈದ್ಯಕೀಯ ವಿದ್ಯಾಭ್ಯಾಸದ ಮೂಲಕ ವೈದ್ಯಕೀಯ ವೃತ್ತಿಗೆ ಪಾದಾರ್ಪಣೆ ಮಾಡಬೇಕಿದೆ. ಯುವಕರು ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಬೇಕು ಎಂದರು.

ತಾಪಂ ಸದಸ್ಯ ರವಿ ಹೆಗಡೆ ಹಳದೋಟ ಮಾತನಾಡಿ, ಸರ್ಕಾರದಿಂದ ಹೈನುಗಾರರಿಗೆ ನೀಡಲ್ಪಡುವ ಔಷಧಗಳನ್ನು ಹಣಕ್ಕೆ ಮಾರಾಟ ಮಾಡುತ್ತಿರುವ ದೂರುಗಳು ಕೇಳಿಬಂದಿವೆ. ಅಂತಹ ಪ್ರಕರಣಗಳು ಮತ್ತೆಮತ್ತೆ ನಡೆಯದಂತೆ ಪಶು ಇಲಾಖೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು. ಇದೇ ವೇಳೆ ಕೋಳಿಗಾರ್‌ ಹಾಲು ಉತ್ಪಾದಕ ಸಂಘದ ಸದಸ್ಯರಿಗೆ ಹಾಲು ಕ್ಯಾನ್‌ ವಿತರಣೆ ಮಾಡಲಾಯಿತು. ಸಂಘದ ಹಿರಿಯ ಸದಸ್ಯ ರಾಮಕೃಷ್ಣ ಗಣಪತಿ ಹೆಗಡೆ ಮುರೇಗಾರ್‌ ಅವರನ್ನು ಸನ್ಮಾನಿಸಲಾಯಿತು.

ಅಂತೆಯೇ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಹಾಗೂ ಉಪನಿರ್ದೇಶ ಡಾ| ಸುಬ್ರಾಯ ಭಟ್ಟ ಅವರನ್ನು ಗೌರವಿಸಲಾಯಿತು. ಜಿಪಂ ಸದಸ್ಯ ಜಿ.ಎನ್‌. ಹೆಗಡೆ ಮುರೇಗಾರ್‌,ಕೆಎಂಎಫ್‌ ಸಹಾಯಕ ಸಿ.ಎಸ್‌. ಪರಮೇಶ್ವರಪ್ಪ, ತಟ್ಟಿಸರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಟಿ. ಹೆಗಡೆ ಇನ್ನಿತರರು ಇದ್ದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ| ಆರ್‌.ಜಿ. ಹೆಗಡೆ, ಪಶು ವೈದ್ಯಾಧಿಕಾರಿ ಡಾ| ಎನ್‌.ಎಚ್‌. ಸವಣೂರು, ಡಾ| ರೋಹಿತ್‌ ಹೆಗಡೆ, ಡಾ| ರಾಕೇಶ್‌ ಇವರು ರಾಸುಗಳ ಆರೋಗ್ಯಕ್ಕೆ ಅಗತ್ಯವಿರುವ ಮಾಹಿತಿ ನೀಡಿದರು. ಪ್ರದರ್ಶನಗೊಂಡ ರಾಸುಗಳಲ್ಲಿ ಆಯಾ ವಿಭಾಗಕ್ಕೆ ತಕ್ಕಂತೆ ಉತ್ತಮ ರಾಸುಗಳೆಂದು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next