ಬೆಂಗಳೂರು: ಐದು ವರ್ಷಗಳ ಹಿಂದೆ ಅಮಾನ್ಯಗೊಂಡ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳು ಹಾಗೂ ಕಲರ್ ಜೆರಾಕ್ಸ್‌ನ ನಕಲಿ ನೋಟುಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದ ಬಿಬಿಎಂಪಿಯ ಉಪ ಗುತ್ತಿಗೆ ದಾರ ಸೇರಿ ಐವರು ಆರೋಪಿಗಳು ಗೋವಿಂದಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೆ.ಆರ್.ಪುರಂ ನಿವಾಸಿ ಸುರೇಶ್ ಕುಮಾರ್(32), ರಾಜಾಜಿನಗರ ನಿವಾಸಿ ರಾಮಕೃಷ್ಣ (32), ಆನೇಕಲ್ ನಿವಾಸಿ ಮಂಜುನಾಥ್ (43), ಹೊಂಗಸಂದ್ರದ ವೆಂಕಟೇಶ್(53), ದಯಾನಂದ(45) ಬಂಧಿತರು.
ಕೇರಳ ಮೂಲದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಅವರಿಂದ 80 ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡಿರುವ 500 ಮತ್ತು 1000 ಮುಖ ಬೆಲೆಯ ನೋಟುಗಳು ಮತ್ತು ಐದು ಕೋಟಿ ರೂ. ಮೌಲ್ಯದ ಕಲರ್ ಜೆರಾಕ್ಸ್ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಸುರೇಶ್, ರಾಮಕೃಷ್ಣ ಬಟ್ಟೆ ವ್ಯಾಪಾರಿಗಳಾಗಿದ್ದಾರೆ. ಮಂಜು ನಾಥ್, ದಯಾನಂದ್ ರೈತರಾಗಿದ್ದು, ವೆಂಕಟೇಶ್ ಬಿಬಿಎಂಪಿಯ ಉಪ ಗುತ್ತಿಗೆದಾರನಾಗಿದ್ದಾನೆ. ಆರೋ ಪಿಗಳು ಪರಸ್ಪರ ಪರಿಚಯವಾಗಿದ್ದು, ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ;- ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ
ಇತ್ತೀಚೆಗೆ ಗೋವಿಂದಪುರ ಠಾಣಾ ವ್ಯಾಪ್ತಿಯ ಎಚ್‌ಬಿಆರ್ ಲೇಔಟ್‌ನ ಪೆಟ್ರೋಲ್ ಬಂಕ್ ಬಳಿ ಮೂವರು ಅರೋಪಿಗಳು ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ಯತ್ನಿಸಿರುವ ಮಾಹಿತಿ ಮೇರೆಗೆ ಗೋವಿಂದ ಠಾಣೆ ಪೊಲೀಸರು ದಾಳಿ ನಡೆಸಿ ನಿಷೇಧಿತ 500 ಮತ್ತು 1000 ಮುಖ ಬೆಲೆಯ 45 ಲಕ್ಷ ರೂ. ಮೌಲ್ಯದ ನೋಟುಗಳನ್ನು ಜಪ್ತಿ ಮಾಡಲಾಗಿತ್ತು.
ಬಳಿಕ ಮೂವರು ನಿಷೇಧಿತ ನೋಟುಗಳ ಬದಲಾವಣೆಗೆ ಬಂದಿರುವುದಾಗಿ ಹೇಳಿದ್ದರು. ಅವರ ವಿಚಾರಣೆ ಯಲ್ಲಿ ಇತರೆ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಕೇರಳದಿಂದ ಬಂದಿದ್ದ ನೋಟುಗಳು: ಅಲ್ಲದೆ, ಕೇರಳದ ಕಾಸರಗೋಡಿನಿಂದ ಕೋಟ್ಯಂತರ ರೂ. ನೋಟುಗಳು ಬರುತ್ತಿದ್ದು, ಅವುಗಳ ಬದಲಾವಣೆ ಮಾಡಿದರೆ ಇಂತಿಷ್ಟು ಕಮಿಷನ್ ನೀಡುವುದಾಗಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಕೇರಳದ ಬೇನೂರು-ಕುಂದಡುಕ್ಕುಂ ರಸ್ತೆಯಲ್ಲಿರುವ ಫಾರ್ಮ್ ಹೌಸ್‌ಗೆ ಆರೋಪಿಗಳನ್ನು ಕರೆದೊಯ್ದಾಗ ಅಲ್ಲಿಯೂ 500 ಮತ್ತು 1000 ರೂ. ಮುಖ ಬೆಲೆಂಯ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿಸಿ ಮೂಟೆಗಳಲ್ಲಿ ತುಂಬಿಸಿ ಜೋಡಿಸಿದ್ದರು. ಕೆಲವೊಂದು ನೋಟುಗಳನ್ನು ಥರ್ಮಾಕೋಲ್ ಮೇಲೆ ಅಂಟಿಸಿ ಬಂಡಲ್ ರೀತಿಯಲ್ಲಿ ಮಾಡಿರುವುದು ಕಂಡುಬಂದಿದೆ. ಒಟ್ಟು 12 ಥರ್ಮಾಕೋಲ್‌ಗಳು ಹಾಗೂ 24 ಮೂಟೆಗಳಲ್ಲಿ ತುಂಬಿದ್ದ ಕಲರ್ ಜೆರಾಕ್ಸ್ ಮಾಡಿದ್ದ 5 ಕೋಟಿ ರೂ. ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.