Advertisement

LIC ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕರ ಕೊಲೆ ಯತ್ನ:ಇಬ್ಬರ ಬಂಧನ

11:49 PM May 31, 2024 | Team Udayavani |

ಹೊನ್ನಾಳಿ: ಗೃಹ ಸಾಲದ ವಿಚಾರಕ್ಕೆ ಎಲ್ ಐಸಿ ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ರೊಬ್ಬರನ್ನು ಅಪಹರಿಸಿ ಕೊಲೆಗೆ ಯತ್ನಿಸಿದ್ದವರನ್ನು ಶುಕ್ರವಾರ ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಹೊನ್ನಾಳಿ ಪೊಲೀಸರು ಬಂಧಿಸಿ ದಾವಣಗೆರೆಯ ಕೆಟಿಜೆ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಂದನ್ ಮತ್ತು ವಿಶ್ವನಾಥ್ ಎಂಬಿಬ್ಬರು ತಪ್ಪಿಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ.

ದಾವಣಗೆರೆಯ ಪಿಬಿ ರಸ್ತೆಯಲ್ಲಿನ ಜೀವ ವಿಮಾ ನಿಗಮದ(ಹೋಂ ಲೋನ್ ವಿಭಾಗ) ಅಧಿಕಾರಿ ಶರಣ್ ಎಂಬುವರನ್ನು ಅಪಹರಿಸಿ, ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದರು.

ಶಿಕಾರಿಪುರದ ನಾಗರಾಜ, ನಾಸಿರ್ ಎಂಬಿಬ್ಬರು ಕುಂದಾಪುರ ಮೂಲದ ಶೆಟ್ಟಿ ಎಂಬುವರೊಡಗೂಡಿ ನಕಲಿ ದಾಖಲೆ ಸೃಷ್ಟಿಸಿ, ಹರಿಹರದ ಯಾವುದೋ ಒಂದು ಮನೆಯ ತೋರಿಸಿ, ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು.

49.60 ಲಕ್ಷ ಸಾಲ ಮಂಜೂರಾ ಗಿತ್ತು.ಆದರೆ, ಅವರು ಕೊಟ್ಟ ದಾಖಲೆ ನಕಲಿ ಎಂದು ತಿಳಿದು ಮಂಜೂರಾಗಿದ್ದ 49.60 ಲಕ್ಷ ಚೆಕ್ ಕೊಡದೆ ಇದ್ದರಿಂದ ವ್ಯವಸ್ಥಾಪಕನ ಮೇಲೆ ಕೋಪಗೊಂಡಿದ್ದರು.

Advertisement

ಶುಕ್ರವಾರ ಸಂಜೆ 6 ಗಂಟೆಯಲ್ಲಿ ಕಚೇರಿಗೆ ಬಂದಿದ್ದ ಆರೋಪಿಗಳಾದ ನಾಗರಾಜ್, ನಾಸಿರ್ ಹಾಗೂ ಇತರರು ಏಕಾಏಕಿ ಶರಣ್ ಅವರಿಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಣ ಮಾಡಿದ್ದರು.

ದಾವಣಗೆರೆಯಿಂದ ಹೊನ್ನಾಳಿ ಕಡೆಗೆ ಕಾರಿನಲ್ಲಿಎಲ್ ಐಸಿ ಅಧಿಕಾರಿಯನ್ನು ಅಪಹರಣ ಮಾಡಿಕೊಂಡು ಬರುತ್ತಿರುವ ಮಾಹಿತಿ ಪಡೆದ ಹೊನ್ನಾಳಿ ಪೊಲೀಸರು ಪಟ್ಟಣದ ವಡ್ಡಿನಕೆರೆ ಹಳ್ಳದ ಬಳಿ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುರಾಜು ನೇತೃತ್ದಲ್ಲಿ ಕಾರು ಅಡ್ಡ ಹಾಕಿ ಗಾಯಾಳು ಶರಣ್ ಅವರನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಹರಣಕಾರರು ಹೊನ್ನಾಳಿಗೆ ಬಂದ ತತ್ ಕ್ಷಣ ವಡ್ಡಿನಕೆರೆ ಬಳಿ ಅಡ್ಡಕಟ್ಟಿ ಗಾಯಾಳು ಅನ್ನು ರಕ್ಷಿಸಿ ಆರೋಪಿಗಳಾದ ನಾಗರಾಜ್ ಹಾಗೂ ನಾಸಿರ್ ನನ್ನು ಬಂಧಿಸಲಾಗಿದೆ.ವಿಶ್ವನಾಥ್ ಹಾಗೂ ಚಂದನ್‌ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next