Advertisement

ಕಲಬುರಗಿ: ಹಲ್ಲೆಗೆ ಯತ್ನ, ರೌಡಿ ಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

10:31 AM Aug 29, 2020 | Mithun PG |

ಕಲಬುರಗಿ: ನಗರದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ದಾಳಿ ಸದ್ದು ಕೇಳಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟ ಕೃತ್ಯಕ್ಕೆ ಬಳಿಸಿದ ಮಾರಕಾಸ್ತ್ರಗಳು ತೋರಿಸುವುದಾಗಿ ಸ್ಥಳಕ್ಕೆ ಕರೆದೊಯ್ದ ರೌಡಿ ಶೀಟರ್, ಪೊಲೀಸರ ಮೇಲೆಯೇ ಹಲ್ಲೆಗೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಆತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

Advertisement

ಇಲ್ಲಿನ ಶಹಬಾದ್ ರಸ್ತೆಯ ಕೆಸರಟಗಿ ಗಾರ್ಡನ್ ಬಳಿ ರೌಡಿ ಫಯೂಮ್ ಅಲಿ ಮಿರ್ಜಾ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೆಲ ದಿನಗಳ ಹಿಂದೆ ನಗರದ ಅಂಡರ್‌ ಬ್ರಿಡ್ಜ್ ಬಳಿ ಸಾಗರ್ ಎಂಬ ಯುವಕನ ಮೇಲೆ ಆರೋಪಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದ.

ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಸಂಬಂಧಿಸಿದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಸ್ಥಳ ಪಂಚನಾಮೆಗೆ ಹೋದ ಸಮಯದಲ್ಲಿ ಆರೋಪಿ‌ ಪೊಲೀಸರು ಮೇಲೆ ಹಲ್ಲೆಗೈದಿದ್ದಾನೆ.

ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಆತನ ಯತ್ನಿಸಿದ್ದು, ಇದರಿಂದ ಪೊಲೀಸರು ತಮ್ಮ ಆತ್ಮರಕ್ಷಣೆ ಹಾಗೂ ಆರೋಪಿಯನ್ನು ತಡೆಯುವ ನಿಟ್ಟಿನಲ್ಲಿ ಕಾಲಿಗೆ ಗುಂಡು ಹಾರಿಸಿದ್ದಾರೆ‌.

Advertisement

ಸ್ಟೇಷನ್ ಬಜಾರ್ ಠಾಣೆ ಸಿಪಿಐ ಲಾಲ್‌ಸಾಬ್ ಗೌಂಡಿ ಫೈರಿಂಗ್ ಮಾಡಿದ್ದಾರೆ. ಆರೋಪಿ ಫಯೂಮ್ ಅಲಿ ಮಿರ್ಜಾ ಕಾಲಿಗೆ ಗುಂಡು ಬಿದ್ದಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಇಬ್ಬರು ಪೇದೆಗಳೂ ಗಾಯಗೊಂಡಿದ್ದಾರೆ.

ಆರೋಪಿ ಫಯೂಮ್ ಮೇಲೆ ಕೊಲೆ ಯತ್ನ, ಸುಲಿಗೆ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಹೈದರಾಬಾದ್ ನಲ್ಲೂ ಕೊಲೆ ಯತ್ನ ಸಂಬಂಧ ಕೇಸ್ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next