Advertisement

10,000 ಅಮೆರಿಕನ್‌ ಡಾಲರ್‌ ಸಾಗಿಸಲು ಯತ್ನ: ಬಂಧನ

11:42 PM Aug 19, 2019 | Team Udayavani |

ಮಂಗಳೂರು: ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ದುಬಾಯಿಗೆ ಸಾಗಿಸಲು ಯತ್ನಿಸುತ್ತಿದ್ದ ಪ್ರಯಾಣಿಕ ಬೆಂಗಳೂರಿನ ಶಶಾಂಕ್‌ ಬೈಸಾನಿ ಗುಪ್ತ ಎಂಬಾತನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಅಧಿಕಾರಿಗಳು ಸೋಮವಾರ ಬಂಧಿಸಿ, 7,13,800 ರೂ. ಮೌಲ್ಯದ 10,000 ಅಮೆರಿಕನ್‌ ಡಾಲರ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.

Advertisement

ಆರೋಪಿ ಶಶಾಂಕ್‌ ಸೋಮವಾರ ಬೆಳಗ್ಗೆ 10 ಗಂಟೆಗೆ ಮಂಗಳೂರಿನಿಂದ ಸ್ಪೈಸ್‌ಜೆಟ್‌ ನಂ.ಎಸ್‌ಜಿ-59′ ವಿಮಾನ ಮೂಲಕ ದುಬಾಯಿಗೆ ತೆರಳಲು ಯತ್ನಿಸಿದ್ದ. ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಪಾಸಣೆ ನಡೆಸಿದಾಗ ಆತನ ಬಳಿ ವಿದೇಶಿ ಕರೆನ್ಸಿ ಇರುವುದು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next