Advertisement

ನನ್ನ ಇಮೇಜ್‌ ಹಾಳು ಮಾಡುವ ಯತ್ನ

01:50 AM May 16, 2019 | mahesh |

ಇತ್ತೀಚೆಗೆ ಅಮೆರಿಕದ ಟೈಮ್‌ ನಿಯತಕಾಲಿಕೆಯಲ್ಲಿ ತಮ್ಮನ್ನು ಕಟುವಾಗಿ ಟೀಕಿಸಿದ್ದರ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ 20 ವರ್ಷಗಳಿಂದಲೂ ನನ್ನ ಇಮೇಜ್‌ ಹಾಳು ಮಾಡುವ ಯತ್ನ ನಡೆಯುತ್ತಿದೆ. ಆದರೆ ನನ್ನ ಇಮೇಜ್‌ ಹಾಳು ಮಾಡಲು ಯತ್ನಿಸಿದವರ ಇಮೇಜ್‌ ಹಾಳಾಗುತ್ತಿದೆ ಎಂದಿದ್ದಾರೆ. ಪಟನಾ ರ್ಯಾಲಿಯ ವೇಳೆ ಮಾತ ನಾಡಿದ ಅವರು, ವಿಭಜನೆ ಮಾಡಲಾಗುತ್ತಿದೆ ಎಂದಾದರೆ ಜನರು ಯಾಕೆ ಮೋದಿಯನ್ನು ಮೆಚ್ಚುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ಬಡವರು ಸುಧಾರಣೆಯಾಗಲು ಬಯಸಿದ್ದರೆ, ಅದರಿಂದ ದೇಶಕ್ಕೆ ಅನುಕೂಲವಾಗುತ್ತದೆ ಎಂದಾದರೆ ಸಮಸ್ಯೆಯೇನಿದೆ? ಬಡವರು ಜಾತಿ ಹಾಗೂ ಸಮುದಾಯಗಳ ಕಟ್ಟಳೆ ಯನ್ನು ಬಿಟ್ಟು ತಮ್ಮ ಮಕ್ಕಳ ಭವಿಷ್ಯ ಉತ್ತಮವಾಗಬೇಕು ಎಂದು ಬಯಸುತ್ತಿದ್ದಾರೆ. ಅದಕ್ಕೆ ಇವರಿಗೆ ಏಕೆ ಸಿಟ್ಟು ಎಂದು ಮೋದಿ ಪ್ರಶ್ನಿಸಿದ್ದಾರೆ.

Advertisement

ಇಬ್ಬರು ಬ್ಯಾಟ್ಸ್‌ಮನ್‌: ಮೋದಿ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೋಲು ಖಚಿತ ಎಂದು ಹೇಳಿ ರುವ ಪ್ರಧಾನಿ ನರೇಂದ್ರ ಮೋದಿ, “ಆ ಸೋಲಿನ ಹೊಣೆ ಹೊತ್ತುಕೊಳ್ಳಲು ಈಗಾಗಲೇ ಕಾಂಗ್ರೆಸ್‌ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಸಿದ್ಧಪಡಿಸಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಬುಧವಾರ ಜಾರ್ಖಂಡ್‌ನ‌ಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, “ಕಾಂಗ್ರೆಸ್‌ಗೆ ಸೋಲಿನ ಮಾಹಿತಿ ಸಿಕ್ಕಾಗಿದೆ. ಯಾರ ತಲೆಯ ಮೇಲೆ ಆ ಸೋಲಿನ ಹೊಣೆ ಹೊರಿಸುವುದು ಎಂದು ಕಾಂಗ್ರೆಸ್‌ ಯೋಚಿಸುತ್ತಿತ್ತು. ಕೊನೆಗೆ ನಾಮ್‌ಧಾರ್‌(ರಾಹುಲ್‌) ನನ್ನು ರಕ್ಷಿಸಲು ಇಬ್ಬರು ಬ್ಯಾಟ್ಸ್‌ಮನ್‌(ಸ್ಯಾಮ್‌ ಪಿತ್ರೋಡಾ ಮತ್ತು ಮಣಿ ಶಂಕರ್‌ ಅಯ್ಯರ್‌)ಗಳನ್ನು ಸಿದ್ಧಪಡಿಸಿದೆ. ಅದರಲ್ಲಿ ಒಬ್ಬರು ಸಿಕ್ಖ್ ದಂಗೆ ಬಗ್ಗೆ ಹುವಾ ತೋ ಹುವಾ ಎಂದು ಹೇಳುತ್ತಾರೆ. ಮತ್ತೂಬ್ಬರು ನನ್ನ ಮೇಲೆ ಕೆಂಡಕಾರುತ್ತಾರೆ. ಇದು ಮೇ 23ರಂದು ಏನಾಗುತ್ತದೆ ಎನ್ನುವುದಕ್ಕೆ ಜೀವಂತ ಉದಾಹರಣೆ’ ಎಂದು ಟೀಕಿಸಿದ್ದಾರೆ. ಇದೇ ವೇಳೆ, ಬಿಹಾರ ದಲ್ಲೂ ಪ್ರಚಾರ ನಡೆಸಿ ಮಾತನಾಡಿದ ಮೋದಿ, ಮುಂದಿನ ಆಡಳಿತಾ ವಧಿಯಲ್ಲಿ ನಾನು ಬಿಹಾರಕ್ಕೆ ವಿಕಾಸದ ಗಂಗೆಯನ್ನು ಹರಿಸುತ್ತೇನೆ ಎಂದು ವಾಗ್ಧಾನ ನೀಡಿದ್ದಾರೆ. ಜತೆಗೆ, ರಾಷ್ಟ್ರೀಯ ಭದ್ರತೆಯನ್ನು ಚುನಾವಣಾ ವಿಚಾರ ವನ್ನಾಗಿ ಏಕೆ ಬಳಸಬಾರದು ಎಂದು ಪ್ರಶ್ನಿಸುವ ಮೂಲಕ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸರಕಾರ ಕೈಗೊಂಡಂಥ ಆಕ್ರಮಣಕಾರಿ ಕಾರ್ಯತಂತ್ರದಿಂದ ಮಾತ್ರವೇ ಭಯೋತ್ಪಾದನೆ ನಿರ್ಮೂಲನೆ ಸಾಧ್ಯ. ಅದನ್ನು ಚುನಾವಣಾ ಪ್ರಚಾರಕ್ಕೆ ಬಳಸದೇ ಮತ್ತೇನು ಮಾಡಬೇಕು ಎಂದೂ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next