Advertisement

ಮೂಡಬಿದಿರೆ: ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆ ಯತ್ನ

03:41 PM Sep 24, 2018 | Team Udayavani |

ಮೂಡಬಿದಿರೆ: ಸುಮಾರು ಎರಡು ವರ್ಷಗಳ ನಂತರ ಮೂಡಬಿದಿರೆಯಲ್ಲಿ ನೆತ್ತರು ಹರಿದಿದೆ. ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಇಮ್ತಿಯಾಜ್ ( 30) ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. 

Advertisement

ಮೂಡಬಿದಿರೆಯ ಹೊರವಲಯದ ಗಂಟಾಲ್ ಕಟ್ಟೆ ಎಂಬಲ್ಲಿ ಈ ಕೃತ್ಯ ನಡೆದಿದೆ. ಬೆಳಿಗ್ಗೆ6 ಗಂಟೆ ಸುಮಾರಿಗೆ ಕಾರಿನಲ್ಲಿ ಇಮ್ತಿಯಾಜ್ ಹೋಟೇಲಿಗೆ ಬಂದಿದ್ದ ದುಷ್ಕರ್ಮಿಗಳು ಚಹಾ ನೀಡುವಂತೆ ಕೇಳಿದ್ದರು. ಇಮ್ತಿಯಾಜ್ ಚಹಾ ಮಾಡಲು ಒಳ ಹೋದಾಗ ತಲವಾರಿನಿಂದ ಆತನ ತಲೆ, ಮತ್ತು ಕಾಲಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಮ್ತಿಯಾಜ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಎರಡು ವರ್ಷಗಳ ಹಿಂದೆ ಹಿಂದೂ ಸಂಘಟನೆಯ ಪ್ರಶಾಂತ್ ಪೂಜಾರಿಯನ್ನು ಹಾಡು ಹಗಲೇ ಕೊಚ್ಚಿ ಕೊಲ್ಲಲಾಗಿತ್ತು. ಇಮ್ತಿಯಾಜ್ ಈ ಪ್ರಕರಣದ ಆರೋಪಿಯಾಗಿದ್ದ. ಪ್ರಶಾಂತ್ ಪೂಜಾರಿ ಕೊಲೆಗೆ ಪ್ರತಿಕಾರವಾಗಿ ಈ ಕೊಲೆ ಯತ್ನ ನಡೆದಿರಬಹುದು ಎಂದು ಶಂಕಿಸಲಾಗಿದೆ. ದುಷ್ಕರ್ಮಿಗಳು ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ  ಬಿಸಿದ್ದಾರೆ .


ಎರಡು ವರ್ಷಗಳ ಹಿಂದೆ ಕೊಲೆಯಾಗಿದ್ದ ಪ್ರಶಾಂತ್ ಪೂಜಾರಿ 

Advertisement

Udayavani is now on Telegram. Click here to join our channel and stay updated with the latest news.

Next