Advertisement
ಮಂಗಳೂರು ಹೊರ ವಲಯದ ಚಿತ್ರಾಪುರ ಗ್ರಾಮದ ಜನ ತೆ ಕಡಲ್ಕೊರೆತದಿಂದಾಗಿ ಜೀವನಾಧಾರವಾಗಿದ್ದ ತೆಂಗಿನ ಮರಗಳು ಸಹಿ ತ ಹಲವು ವಸ್ತು-ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಕಡಲ್ಕೊರೆತ ತೀವ್ರವಾಗಿ ಎಲ್ಲಿ ಸೂರು ಕಳೆದುಕೊಳ್ಳುವೆವೋ ಎಂಬ ಆತಂಕ ಸ್ಥಳೀಯರದ್ದು. ಪ್ರತಿ ವರ್ಷ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಆದರೆ ಯಾರೂ ಈ ಕಡೆ ಗಮನ ಹರಿಸಿಲ್ಲ. ಇದರಿಂದ ರೋಸಿ ಹೋದ ಊರವರು ಮಕ್ಕಳು, ಮಹಿಳೆಯರನ್ನು ಸೇರಿಸಿಕೊಂಡು ಸ್ವಂತ ಪರಿಶ್ರಮದಿಂದ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಸ್ಥಳೀಯ ಮೀನುಗಾರರಾದ ಯೋಗೀಶ್ ಕಾಂಚನ್ ಬೈಕಂಪಾಡಿ.
ಗ್ರಾಮದ ಸುಮಾರು 200ಕ್ಕೂ ಹೆಚ್ಚು ಮಂದಿ ಬೆಳಗ್ಗೆ, ಸಂಜೆ ತಲಾ 100 ಮಂದಿ ಯಂತೆ ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡಿ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ. ಜೆಸಿಬಿ ಸಹಾಯದಿಂದ ಗುಂಡಿ ತೆಗೆದು ಅದರಲ್ಲಿ ಜಂಬೋ ಗೋಣಿಗೆ ಮರಳು ತುಂಬಿಸಿಡುತ್ತಾರೆ. ಅನಂತರ ಅದರ ಮೇಲೆ ಸಾಮಾನ್ಯ ಪ್ಲಾಸ್ಟಿಕ್ ಗೋಣಿಯಲ್ಲಿ ಮರಳು ತುಂಬಿ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ರೂ. ಖರ್ಚಾಗಿದೆ ಎನ್ನುವುದು ಊರವರ ಮಾತು.
Related Articles
ಕಳೆದ ವರ್ಷದಿಂದ ಕಡಲ್ಕೊರೆತ ಶುರುವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಮುಂದಿನ ವರ್ಷ ಮಾಡಿಕೊಡುತ್ತೇವೆ ಎಂದಿದ್ದಾರೆ. ಆದರೆ, ಮಳೆ ಶುರುವಾದರೂ ಯಾರೂ ಗಮನ ಹರಿಸಿಲ್ಲ. ಹೀಗಾಗಿ ಊರಿನವರೇ ಸೇರಿಕೊಂಡು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ತಡೆಗೋಡೆ ನಿರ್ಮಾಣ ಮಾಡಲು ಆರಂಭಿಸಿದ್ದೇವೆ.
- ಮಾಧವ ಸುವರ್ಣ,
ಅಧ್ಯಕ್ಷರು, ಪಣಂಬೂರು ಮಹಾಸಭೆ
Advertisement