Advertisement

ಸೂರು ಫ‌ಲಾನುಭವಿಗಳ ಆರ್ಥಿಕ ಮಿತಿ ಹೆಚ್ಚಳಕ್ಕೆ ಪ್ರಯತ್ನ: ಖಾದರ್‌

06:50 AM Nov 16, 2018 | Team Udayavani |

ಬೆಂಗಳೂರು: 2018-19 ನೇ ಸಾಲಿನ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ ಆಶ್ರಯ ಮನೆಗಳನ್ನು ನೀಡಲು ಫ‌ಲಾನುಭವಿಗಳ ಆದಾಯ ಮಿತಿಯನ್ನು 32 ಸಾವಿರದಿಂದ ಬಿಪಿಎಲ್‌ ಕಾರ್ಡ್‌ಗೆ ನಿಗದಿ ಪಡಿಸಿರುವ 1.20 ಲಕ್ಷ ರೂ. ಹೆಚ್ಚಳ ಮಾಡುವಂತೆ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ.  ಒಪ್ಪಿಗೆ ದೊರೆತ ತಕ್ಷಣ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಮನೆಗಳನ್ನು ಮಂಜೂರು ಮಾಡಲಾಗುವುದು ವಸತಿ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

Advertisement

ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಆಶ್ರಯ ಮನೆಗಳನ್ನು ನೀಡುವುದು ವಿಳಂಬವಾಗಿದೆ. ಕೆಲವು ನಿಯಮಗಳನ್ನು ಬದಲಾಯಿಸುವಾಗ ವಿಳಂಬ ಆಗುವುದು ಸಹಜ. ಹೀಗಾಗಿ ಆರೋಪ ಕೇಳಿ ಬರುತ್ತಿದೆ. ಎಲ್ಲವನ್ನೂ ಸರಿಪಡಿಸಲು ಇಲಾಖೆ ಪ್ರಯತ್ನ ನಡೆಸಿದೆ. ಆಹಾರ ಇಲಾಖೆಯಲ್ಲಿಯೂ ಇದೇ ರೀತಿ ಹೊಸ ಸುಧಾರಣೆ ಕ್ರಮ ಕೈಗೊಂಡಿದ್ದಾಗ ಸಾಕಷ್ಟು ಆರೋಪ ಕೇಳಿ ಬಂದಿತ್ತು. ಆದರೆ, ಈಗ ಆ ಇಲಾಖೆಯಲ್ಲಿ ರೇಷನ್‌ ಕಾರ್ಡ್‌ ಪಡೆಯುವುದಾಗಲಿ, ಅಥವಾ ಪಡಿತರ ಪಡೆಯುವುದಾಗಲೀ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಎಸ್ಸಿ ಎಸ್ಟಿ ಕುಟುಂಬಗಳಿಗೆ ನೀಡುವ ಮನೆಗಳನ್ನು ಹೆಚ್ಚುವರಿಯಾಗಿದ್ದರೆ, ಸಾಮಾನ್ಯ ವರ್ಗದವರಿಗೆ ನೀಡಬೇಕೆಂಬ ಬೇಡಿಕೆ ಇದೆ. ಆದರೆ, ಎಸ್ಸಿ ಎಸ್ಟಿ ಸಮುದಾಯದವರಿಗೆ ವಿಶೇಷವಾಗಿ ನೀಡುವುದರಿಂದ ಬೇರೆ ವರ್ಗದವರಿಗೆ ಅದನ್ನು ವರ್ಗಾಯಿಸಲು ಅವಕಾಶ ಇಲ್ಲ ಎಂದು ಹೇಳಿದರು.

ಮೊಬೈಲ್‌ ಟವರ್‌ ಹಾಕಲು ನೀತಿ: ನಗರ ಪ್ರದೇಶಗಳಲ್ಲಿ ಮನೆಗಳ ಮೇಲೆ ಮೊಬೈಲ್‌ ಟವರ್‌ ಹಾಕಲು ಹೊಸ ನೀತಿ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತಂತೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶೀಘ್ರವೆ ಹೊಸ ನೀತಿ ಜಾರಿಗೆ ತರಲಾಗುವುದು. ಸಾರ್ವಜನಿಕರು ಮನೆಗಳ ಮೇಲೆ ಮೊಬೈಲ್‌ ಟವರ್‌ ಹಾಕುವ ಉದ್ದೇಶ ಇದ್ದರೆ, ಮನೆ ನಿರ್ಮಾಣದ ಸಂದರ್ಭದಲ್ಲಿಯೇ ಅದನ್ನು ನಮೂದಿಸಬೇಕು. ಇಲ್ಲದಿದ್ದರೆ, ನಂತರ ಅಳವಡಿಸಲು ಮುಂದಾದರೆ, ಮನೆಯ ಯೋಜನಾ ರೂಪ ರೇಷೆಯನ್ನು ಬದಲಾಯಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next