Advertisement
ಜಡಲ ಭೈರವೇಶ್ವರಸ್ವಾಮಿ ದೇವಾಲಯದ ರಸ್ತೆಯಲ್ಲಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಹಳೇ ಪಿಂಚಣಿ ವ್ಯವಸ್ಥೆ ರದ್ದು ಮಾಡಿರುವುದರಿಂದ ನಿವೃತ್ತಿ ನಂತರ ನೌಕರರು ಕುಟುಂಬ ಪೋಷಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.
Related Articles
Advertisement
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ :
ಚಿಂತಾಮಣಿ: ಮಕ್ಕಳನ್ನು ಕೋವಿಡ್ -19ನಿಂದ ಸಂರಕ್ಷಿಸಲು ಸ್ವ-ಗ್ರಾಮದ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವುದೇ ಸೂಕ್ತ ಎಂದು ದಾನಿ ಟಿ.ಎನ್. ಚಂದ್ರಶೇಖರರೆಡ್ಡಿ ಅಭಿಪ್ರಾಯಪಟ್ಟರು.
ತಾಲೂಕಿನ ಬುರುಡಗುಂಟೆ ಕ್ಲಸ್ಟರ್‌ನತುಳವನೂರು ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲಾ ಬ್ಯಾಗ್ ಉಚಿತವಾಗಿ ವಿತರಿಸಿ ಮಾತನಾಡಿ, ಪೋಷಕರಿಗೆ ಮಕ್ಕಳವಿದ್ಯಾಭ್ಯಾಸದಬಗ್ಗೆಇರುವಕಾಳಜಿಯಷ್ಟೇ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ಇರಬೇಕು. ದಿನೇ ದಿನೆ ಕೋವಿಡ್ ವೈರಸ್ ಹರಡುವ ವೇಗ ಜಾಸ್ತಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ದೂರದ ಶಾಲೆಗಳಿಗೆ ಹಾಗೂ ವಸತಿ ಶಾಲೆಗಳಿಗೆದಾಖಲು ಮಾಡುವುದು ಒಳ್ಳೆಯದಲ್ಲ. ಪ್ರಸ್ತುತ ನಮ್ಮೂರಿನ ಶಾಲೆ ತುಂಬಾ ಅಭಿವೃದ್ಧಿಯಾಗಿದೆ. ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ. ಪೋಷಕರು ಇದೇ ಶಾಲೆಯಲ್ಲಿಮಕ್ಕಳನ್ನು ಸೇರಿಸಿಅವರ ವಿದ್ಯೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಹಿಂದಿನ ವರ್ಷದಂತೆ ಈ ವರ್ಷವೂ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿದ್ದೇವೆ. ಇನ್ನೂ ಅಗತ್ಯಮೂಲಸೌಲಭ್ಯಗಳನ್ನುಒದಗಿಸಲು ನಮ್ಮ ಕುಟುಂಬ ಸಿದ್ಧವಿದೆ ಎಂದರು.
ಮುಖ್ಯ ಶಿಕ್ಷಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಮಾತನಾಡಿ, ಶಿಕ್ಷಕರ ಜೊತೆ ಸಕಾರಾತ್ಮಕವಾಗಿ ಸ್ಪಂದಿಸಿದಾನಿಗಳಕೊಡುಗೆಗಳನ್ನು ಮಕ್ಕಳ ಶೈಕ್ಷಣಿಕಾಭಿವೃದ್ಧಿಗಾಗಿ ಬಳಸಬೇಕು. ಮಕ್ಕಳನ್ನು ವಿದ್ಯಾಗಮಕ್ಕೆ ತಪ್ಪದೇ ಕಳುಹಿಸ ಬೇಕೆಂದರು. ಸಹ ಶಿಕ್ಷಕ ಸಿ.ವೆಂಕಟರವಣ, ವಿ.ಆಂಜ ನೇಯ,ಮಕ್ಕಳ ಪೋಷಕರಾದವೆಂಕಟರವಣಪ್ಪ, ರಾಮಾಂಜಿ, ವಿ.ಆಂಜನೇಯ, ರತ್ನಮ್ಮ, ಶ್ಯಾಮಲಾ ಮತ್ತಿತರರು ಇದ್ದರು.