ಚಿತ್ರದುರ್ಗ: ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಓರ್ವ ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದಾನೆ.
ಬುಧವಾರ 2ನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಈ ಘಟನೆ ನಡೆದಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಸುನಿಲ್ ಎಂಬಾತ ಮೃತಪಟ್ಟಿದ್ದು, ಮತ್ತೋರ್ವ ಆರೋಪಿ ವೀರಭದ್ರಗೆ ಚಿಕಿತ್ಸೆ ನೀಡಲಾಗುತ್ತಿದೆ.
2016 ಡಿ. 6ರಂದು ಚಿತ್ರದುರ್ಗ ಜಿಲ್ಲೆ ವಿಶ್ವನಾಥನಹಳ್ಳಿ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿತ್ತು. ನಂತರ ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ತಾಳಿ ಕಟ್ಟಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಪೊಲೀಸರು ಒಟ್ಟು 6 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಬಳಿಕ ಶಿಕ್ಷೆ ಪ್ರಕಟಿಸಲಾಯಿತು. ಪ್ರಮುಖ ಆರೋಪಿ ಪ್ರತಾಪ್ ರಂಗಪ್ಪನಿಗೆ ಜೀವಾವಧಿ ಶಿಕ್ಷೆ ಮತ್ತು 85 ಸಾವಿರ ರೂ. ದಂಡ ವಿಧಿ ಸಲಾಗಿದೆ.
ಉಳಿದ ಐವರು ಅಪರಾ ಧಿಗಳಲ್ಲಿ ರವಿ, ಸುನೀಲ್, ಮಣಿಕಂಠ, ವೀರಭದ್ರ ಅವರಿಗೆ ತಲಾ 10 ವರ್ಷ ಜೈಲು ತಲಾ 50 ಸಾವಿರ ರೂ. ದಂಡ ವಿಧಿಸಿನ್ಯಾಯಾಧೀಶರು ಶಿಕ್ಷೆ ಪ್ರಟಿಸಿದರು. ತೀರ್ಪು ಹೊರಬೀಳುತ್ತಿದ್ದಂತೆ ಪೊಲೀಸರು ಅಪರಾಧಿಗಳನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಕೈಕೊಳ
ತೊಟ್ಟಿದ್ದ ಸುನಿಲ್ ಹಾಗೂ ವೀರಭದ್ರ ಸುಮಾರು 15-20 ಅಡಿಗಳ ಎತ್ತರದ ಕಟ್ಟಡದಿಂದ ಹಾರಿ ಪರಾರಿಯಾಗಲು
ಯತ್ನಿಸಿದ್ದಾರೆ.