Advertisement

ಪ್ರಕರಣ ದುರ್ಬಲಗೊಳಿಸುವ ಯತ್ನ: ಬಿಜೆಪಿ

03:49 PM Apr 04, 2017 | |

ಉಡುಪಿ: ಕುಂದಾಪುರದ ಕಂಡೂರಿನಲ್ಲಿ ನಡೆದ ಅಧಿಕಾರಿಗಳ ಮೇಲಿನ ಕೊಲೆ ಯತ್ನ ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದ ವತಿಧಿಯಿಂದ ಸೋಮವಾರ ಉಡುಪಿಯ ಕ್ಲಾಕ್‌ಟವರ್‌ ಬಳಿ ಬೃಹತ್‌ ಪ್ರತಿಭಟನೆ ನಡೆಯಿತು. 

Advertisement

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕೊಲೆಯತ್ನ ಘಟನೆ ಸಂಭವಿಸಿದೆ. ಈ ವೇಳೆ ಅಧಿಕಾರಿಗಳ ಸಭೆ ಕರೆದು ಅಧಿಕಾರಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಿತ್ತು. ಆದರೆ, ಎಲ್ಲ ಜವಾಬ್ದಾರಿಯಿಂದ ತಪ್ಪಿಸಿಧಿಕೊಂಡು ಚುನಾವಣಾ ಪ್ರಚಾರದಲ್ಲಿ ನಿರತಧಿರಾಗಿದ್ದಾರೆ. ಅದಲ್ಲದೆ ಎಡಿಜಿಪಿ ಆಲೋಕ್‌ ಮೋಹನ್‌ ಅವಧಿರನ್ನು ಕಳುಹಿಸಿ ಪ್ರಕರಣ ದುರ್ಬಲಧಿಗೊಳಿಧಿಸುವ ಯತ್ನವನ್ನು ಸಚಿವರು ನಡೆಸಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಿಸುವ ವಿಚಾರ ಮನಗಂಡ ಸಚಿವರು ಎಡಿಜಿಪಿಯನ್ನು ತುರ್ತಾಗಿ ಕಳುಹಿಸಿ ಪೊಲೀಸರ ಸಭೆ ನಡೆಸಲು ಸೂಚಿಸಿ, ಪೊಲೀಸರಿಗೆ ಮಾಹಿತಿ ನೀಡದೇ ದಾಳಿ ನಡೆಸಿದ ನೆಪವೊಡ್ಡಿ ಜಿಲ್ಲಾಧಿಕಾರಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಪ್ರಕರಣವನ್ನೇ ತಿರುಚುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

ಮರಳು ಮಾಫಿಯಾಕ್ಕೆ ಪ್ರಮೋದ್‌ ನೇತೃತ್ವ
ಮಾಜಿ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಉಡುಪಿಯಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಸಂಪ್ರದಾಯ ಹಿಂದೆ ಇರಲಿಲ್ಲ. ಇದೇ ಮೊದಲ ಬಾರಿಗೆ ಇಂತಹ ಹೇಯ ಕೃತ್ಯ ಜಿಲ್ಲೆಯಲ್ಲಿ ನಡೆದಿದೆ. ಅಕ್ರಮ ಮರಳು ದಂಧೆಯನ್ನು ನಿರಂತರ ಪೋತ್ಸಾಧಿಹಿಸುತ್ತಾ ಬಂದಿರುವ ಕಾಂಗ್ರೆಸ್‌ ಈ ಘಟನೆಯ ನೇರ ಹೊಣೆ ಹೊರಬೇಕು. ಅಕ್ರಮ ಮರಳುಗಾರಿಕೆ ಹಿಂದೆ ದೊಡ್ಡ ಮಾಫಿಯಾ ಅಡಗಿದ್ದು, ಇದರ ನೇತೃತ್ವವನ್ನು ಜಿಲ್ಲಾ ಉಸ್ತುಧಿವಾರಿ ಸಚಿವ ಪ್ರಮೋದ್‌ ಮಧ್ವರಾಜ… ವಹಿಸಿದ್ದಾರೆ ಎಂದು ಆರೋಪಿಸಿದರು. 

ಅಕ್ರಮ ಮರಳುಗಾರಿಕೆ ಪೋತ್ಸಾಹಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿದರು. ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಬಿಜೆಪಿ ಮುಖಂಡಧಿರಾದ ಕುಯಿಲಾಡಿ ಸುರೇಶ್‌ ನಾಯಕ್‌, ಗೀತಾಂಜಲಿ ಸುವರ್ಣ, ಕುತ್ಯಾರು ನವೀನ್‌ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಸುಮಿತ್‌ ಶೆಟ್ಟಿ, ತಾ. ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ನಯನಾ ಗಣೇಶ್‌, ಉಪೇಂದ್ರ ನಾಯಕ್‌ ಶ್ರೀಶ ನಾಯಕ್‌ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next