Advertisement

ಬೆಂಕಿ ಕಡ್ಡಿಯಲ್ಲಿ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ

12:03 AM Apr 18, 2019 | Team Udayavani |

ಬೆಳ್ಳಾರೆ: ಮತದಾನ ಕೇಂದ್ರದಲ್ಲಿ ಸಾಲು ನಿಂತಿರುವ ಮತದಾರರ ಗುರುತು ಚೀಟಿ ಪರಿಶೀಲಿಸಿ, ಬೆರಳಿಗೆ ಶಾಯಿ ಹಾಕುವ, ಮತ ಚಲಾಯಿಸುವ ದೃಶ್ಯಗಳನ್ನು ಬೆಂಕಿ ಕಡ್ಡಿಗಳಲ್ಲಿ ಚಿತ್ರಿಸಿ, ಮತದಾರರನ್ನು ಮತಗಟ್ಟೆಗೆ ಸೆಳೆಯುವ ವಿನೂತನ ಪ್ರಯತ್ನವನ್ನು ಸಾಮಾಜಿಕ ಜಾಲತಾಣದ ಮೂಲಕ ಬೆಳ್ಳಾರೆಯ ಭರತ್‌ ಪೂಜಾರಿ ಮಾಡಿದ್ದಾರೆ.

Advertisement

ಲೋಕಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಮತದಾನ ಕೇಂದ್ರದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಕಾತರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಕುರಿತು ಜಾಗೃತಿ ಆಗುತ್ತಲಿದೆ. ಜಿಲ್ಲಾಡಳಿತ, ಸ್ವೀಪ್‌ ಸಮಿತಿಯೂ ಮತದಾನ ಪ್ರಮಾಣ ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.

ಬೆಳ್ಳಾರೆಯ ಹವ್ಯಾಸಿ ಛಾಯಾಗ್ರಾಹಕ ಭರತ್‌ ಪೂಜಾರಿ ತಮ್ಮ ಕೈಚಳಕದಿಂದ ಬೆಂಕಿಕಡ್ಡಿಗಳಲ್ಲೇ ಮತಗಟ್ಟೆಯ ಪೂರ್ಣ ಚಿತ್ರಣವನ್ನು ಮೂಡಿಸಿದ್ದಾರೆ. ಮತದಾನ ನಮ್ಮ ಹಕ್ಕು. ತಪ್ಪದೇ ಮತ ಚಲಾಯಿಸೋಣ ಎನ್ನುವ ಸಂದೇಶದೊಂದಿಗೆ ಇದರ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪಸರಿಸಿದ್ದಾರೆ.

ವಿಶಿಷ್ಟ ಪ್ರಯತ್ನ
ಸಾಮಾಜಿಕ ಜಾಲತಾಣದಲ್ಲಿ ಇವರ ಚಿತ್ರವು ವ್ಯಾಪಕವಾಗಿ ಪ್ರಚಾರವಾಗಿದ್ದು, ಬೆಂಕಿ ಕಡ್ಡಿಯಲ್ಲಿ ಅರಳಿದ ಈ ಮತದಾನ ಜಾಗೃತಿ ಎಲ್ಲರನ್ನೂ ಆಕರ್ಷಿಸಿದೆ. ಗ್ರಾಮೀಣ ಪ್ರದೇಶಗಳ ಯುವಕರನ್ನು ಮತ ಚಲಾಯಿಸುವಂತೆ ಸಾಮಾಜಿಕ ಜಾಲತಾಣದ ಮೂಲಕ ಪ್ರೇರೇಪಿಸುವ ವಿಶಿಷ್ಟ ಪ್ರಯತ್ನವನ್ನು ಭರತ್‌ ಮಾಡಿದ್ದಾರೆ.

ಮತ ಚಲಾಯಿಸಿ
ಮತದಾನ ನಮ್ಮ ಹಕ್ಕು. ಯುವ ಮತದಾರರೇ ಉತ್ತಮ ನಾಯಕನ ಆಯ್ಕೆ ಮಾಡುವಲ್ಲಿ ನಿರ್ಣಾಯಕರಾಗಿರುತ್ತಾರೆ. ಯುವ ಸಮುದಾಯ ತಪ್ಪದೇ ಮತ ಚಲಾಯಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರ ಪ್ರಚಾರ ಮಾಡುವುದಕ್ಕಿಂತಲೂ ಮತದಾನ ಮಾಡಿ ಎನ್ನುವ ಜಾಗೃತಿಯನ್ನು ಮೂಡಿಸುವ ಕಾರ್ಯಕ್ಕೆ ಯುವಕರು ಮುಂದಾಗಬೇಕು.
ಭರತ್‌ ಪೂಜಾರಿ ಬೆಳ್ಳಾರೆ

Advertisement

ಉಮೇಶ್‌ ಮಣಿಕ್ಕಾರ

Advertisement

Udayavani is now on Telegram. Click here to join our channel and stay updated with the latest news.

Next